ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರಾ ಗಜಪಯಣಕ್ಕೆ ವಿದ್ಯುಕ್ತ ಚಾಲನೆ: ಎರಡೆರಡು ಬಾರಿ ಪೂಜೆ ನಡೆಸಿ ಗೊಂದಲ

|
Google Oneindia Kannada News

Recommended Video

ದಸರಾ ಗಜಪಯಣಕ್ಕೆ ವಿದ್ಯುಕ್ತ ಚಾಲನೆ: ಎರಡೆರಡು ಬಾರಿ ಪೂಜೆ ನಡೆಸಿ ಗೊಂದಲ | Oneindia Kannada

ಮೈಸೂರು, ಆಗಸ್ಟ್ 22: ನಾಡಹಬ್ಬಕ್ಕೆ ಮೆರುಗು ನೀಡುವ ಗಜಪಯಣ -2019ಕ್ಕೆ ಇಂದು ಅದ್ಧೂರಿ ಚಾಲನೆ ದೊರೆಯಿತು. ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯಕ್ಕೆ ಸೇರಿದ ವೀರನಹೊಸಳ್ಳಿಯಲ್ಲಿ ಅರ್ಜುನ ನೇತೃತ್ವದ ಗಜಪಡೆ ಕಾಡಿನಿಂದ ನಾಡಿನತ್ತ ಹೆಜ್ಜೆ ಹಾಕಿದವು.

ಇಂದು ಮೈಸೂರಿಗೆ ಗಜಪಯಣ; ದಸರಾ ಗಜಪಡೆ ಸ್ವಾಗತಿಸುವವರು ಯಾರು?
ಜಿಲ್ಲಾ ಉಸ್ತುವಾರಿ ಸಚಿವರ ಅನುಪಸ್ಥಿತಿಯಲ್ಲಿ ಇತರೆ ಜನಪ್ರತಿನಿಧಿಗಳು, ಅಧಿಕಾರಿ ಸಮೂಹ, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರ ಉತ್ಸಾಹದ ನಡುವೆ ಗಜಪಡೆಗೆ ಪುಷ್ಪವನ್ನು ಅರ್ಪಿಸಿ ಪಯಣಕ್ಕೆ ಶುಭ ಕೋರಿದರು. ಗಜಪಯಣದ ನಾಯಕ ಅರ್ಜುನ ರಾಜಗಾಂಭೀರ್ಯದಿಂದ ನಡೆದಾಗ ಅಕ್ಕಪಕ್ಕದಲ್ಲಿ ವಿಜಯ, ಅಭಿಮನ್ಯು, ವರಲಕ್ಷ್ಮಿ, ಧನಂಜಯ, ಈಶ್ವರ ಆನೆಗಳು ಗಜಪಯಣಕ್ಕೆ ಮೆರುಗು ನೀಡಿದವು.

ಎಂದಿನಂತೆ ಶಾಂತವದನನಾಗಿಯೇ ಅರ್ಜುನ ತನ್ನ ಈ ಬಾರಿಯ ಜಂಬೂಸವಾರಿಗಾಗಿ ಮೈಸೂರಿನತ್ತ ಹೆಜ್ಜೆ ಹಾಕಿದ. ಅಲ್ಲಿಂದ ಲಾರಿ ಮೂಲಕ ಆರು ಆನೆಗಳು ಸಂಜೆಯೇ ಮೈಸೂರು ತಲುಪಿ ಅರಣ್ಯ ಭವನದಲ್ಲಿ ಆಶ್ರಯ ಪಡೆಯಲಿವೆ.

Minister R Ashok inaugurated Mysuru Dassara gajapayana

ಇದೇ ವೇಳೆ ಗಜಪಯಣಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಆರ್ ಅಶೋಕ್, "ನಾನು ಯಾವ ಸಾಮ್ರಾಟನೂ ಅಲ್ಲ. ನಾನು ಯಾರಿಗೂ ಕಾಂಪಿಟೇಟರ್ ಆಗಿ ಬಂದಿಲ್ಲ. ಗಜರಾಜನಿಗೆ ಪೂಜೆ ಸಲ್ಲಿಸುವುದನ್ನು ತಪ್ಪಿಸಬಾರದು ಎಂದು ಇಲ್ಲಿಗೆ ಬಂದಿದ್ದೇನೆ. ನಾಡಿಗೆ, ನೆರೆಪೀಡಿತರಿಗೆ ಒಳಿತಾಗಲಿ ಎಂದು ಪೂಜೆ ಸಲ್ಲಿಸಿದ್ದೇನೆ" ಎಂದರು.

ನೀವು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಲಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, "ದೈವೇಚ್ಛೆ ಏನು ಬರೆದಿದೆ ಎಂಬುದು ನನಗೆ ಗೊತ್ತಿಲ್ಲ. ಯಡಿಯೂರಪ್ಪನವರ ಸೂಚನೆ ಮೇರೆಗೆ ನಾನು ಈ ಕಾರ್ಯಕ್ರಮದಲ್ಲಿ ಭಾಗಿಯಾದೆ. ಆದರೆ ಉಸ್ತುವಾರಿ ಸಚಿವನಾಗುವ ಆಸೆಯಿಂದ ಇಲ್ಲಿಗೆ ಬಂದಿಲ್ಲ. ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನಂತೆ ಕೆಲಸ ಮಾಡುತ್ತೇನೆ" ಎಂದರು.

Minister R Ashok inaugurated Mysuru Dassara gajapayana

ಕಾರ್ಯಕ್ರಮಕ್ಕೆ ಸಮಯವಾಗುತ್ತಿದ್ದಂತೆ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಗಜಪಡೆಗೆ ಮೊದಲು ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಮೈಸೂರಿನ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಮೈಸೂರು ಜಿಲ್ಲಾಧಿಕಾರಿ, ಮೈಸೂರು ಮಹಾನಗರ ಪಾಲಿಕೆ ಮೇಯರ್ ಭಾಗಿಯಾಗಿ ಆನೆಗಳಿಗೆ ಪೂಜೆ ಸಲ್ಲಿಸಿದರು. ಇದಾದ ಬಳಿಕ ಗಜಪಯಣ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ ಸಚಿವ ಆರ್.ಅಶೋಕ್, ವಿ.ಸೋಮಣ್ಣ ಹಾಗೂ ಬಿಜೆಪಿ ಶಾಸಕ ನಿರಂಜನ್ ಮತ್ತೊಮ್ಮೆ ಗಜಪಡೆಗೆ ಪುಷ್ಪಾರ್ಚನೆ ಮಾಡಿದರು.

Minister R Ashok inaugurated Mysuru Dassara gajapayana

ನಿಗದಿತ ಸಮಯಕ್ಕಿಂತ ತಡವಾಗಿ ಬಂದ ಕಾರಣ ಎರಡನೇ ಬಾರಿಗೆ ಗಜಪಡೆಗೆ ಪೂಜೆ ಸಲ್ಲಿಸಿದರು. ಇದರಿಂದ ಸಚಿವರಿಗಾಗಿ ಗಜಪಯಣದಲ್ಲಿ ಸಂಪ್ರದಾಯ ಮುರಿದಂತೆ ಭಾಸವಾಯಿತು.

English summary
The 409th Mysuru Dasara Countdown has been started. Minister R Ashok inaugurated gajapayana. Ministers came late for program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X