• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಶೋಭಕ್ಕ ತಾಳ್ಮೆಯಿಂದ ಇರಕ್ಕ' ಎಂಬಿ ಪಾಟೀಲ್ ಟಾಂಗ್

|

ಮೈಸೂರು, ಜೂನ್ 17: ಶೋಭಕ್ಕ ಸ್ವಲ್ಪ ತಾಳ್ಮೆಯಿಂದ ಇರಕ್ಕ, ಹೆಣ್ಣು ಮಗಳು ಅಂತ ನಾನು ಯಾವ ಪದವನ್ನೂ ಉಪಯೋಗಿಸಿಲ್ಲ ಎಂದು ಗೃಹಸಚಿವ ಎಂ ಬಿ ಪಾಟೀಲ್ ಶೋಭಾ ಕರಂದ್ಲಾಜೆಗೆ ತಿರುಗೇಟು ನೀಡಿದ್ದಾರೆ.

ಐಎಂಎ ಪ್ರಕರಣದಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡುವುದಿಲ್ಲ: ಎಂಬಿ.ಪಾಟೀಲ್ ಐಎಂಎ ಪ್ರಕರಣದಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡುವುದಿಲ್ಲ: ಎಂಬಿ.ಪಾಟೀಲ್

ಜಿಂದಾಲ್ ಕಂಪನಿಗೆ ಸರ್ಕಾರಿ ಭೂಮಿ ಪರಭಾರೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮೈಸೂರಿನಲ್ಲಿ ತಿರುಗೇಟು ನೀಡಿರುವ ಗೃಹ ಸಚಿವ ಎಂ.ಬಿ ಪಾಟೀಲ್, 'ಶೋಭಕ್ಕೆ ಸ್ವಲ್ಪ ತಾಳ್ಮೆಯಿಂದ ಇರಕ್ಕ. ನೀವು ಹೆಣ್ಣುಮಗಳು ಅಂತ ನಾನು ಯಾವ ಪದಗಳನ್ನು ಪ್ರಯೋಗಿಸುತ್ತಿಲ್ಲ. ಜಿಂದಾಲ್ ವಿಚಾರದಲ್ಲಿ ಶೋಭಕ್ಕನಿಗೆ ತಕರಾರಿದ್ದರೆ ಕಮಿಟಿ ಮುಂದೆ ಹೋಗಲಿ. ಅದಕ್ಕಾಗಿಯೇ ಒಂದು ಕಮಿಟಿ ರಚನೆ ಆಗಿದೆ. ಅಲ್ಲಿ ಹೋಗಿ ಮಾತಾಡಿ. ಬಾಯಿಗೆ ಬಂದಂತೆ ಮಾತನಾಡೋದು ಸರಿಯಲ್ಲ' ಎಂದು ಕಿಡಿಕಾರಿದ್ದಾರೆ.

ನಾವು ಬಿಜಾಪುರದವರು. ನಮಗೆ ಬೇರೆ ಪದಗಳೇ ಗೊತ್ತು. ಶೋಭ ಕರಂದ್ಲಾಜೆಯಂತಹ ಹೆಣ್ಣು ಮಕ್ಕಳ ಬಾಯಲ್ಲಿ ಅಂಥ ಪದಗಳು ಬರಬಾರದು. ಅವರ ಹಿನ್ನೆಲೆ, ಸಂಸ್ಕಾರ, ಸಂಸ್ಕೃತಿ ಜನರಿಗೆ ಗೊತ್ತಿದೆ ಎಂದು ಟಾಂಗ್ ನೀಡಿದರು. ಜಿಂದಾಲ್ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದೆ ಶೋಭಾ ಕರಂದ್ಲಾಜೆ, ಎಂ.ಬಿ. ಪಾಟೀಲ್ ಒಬ್ಬ ಮೂರ್ಖ ಗೃಹಸಚಿವ, ಇಂತಹವರು ಈ ರಾಜ್ಯದಲ್ಲಿರುವುದು ದುರದೃಷ್ಟ ಎಂದು ಹೇಳಿದ್ದರು.

English summary
MB Patil Slams Shobha Karandlaje in relation to jindal case. if any issue regarding jindal, it should go infront of committee he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X