ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರಾ ದರ್ಶಿನಿ, ಪ್ಯಾಲೆಸ್ ಆನ್ ವೀಲ್ ಗೆ ಚಾಲನೆ

By Yashaswini
|
Google Oneindia Kannada News

ಮೈಸೂರು, ಸೆಪ್ಟೆಂಬರ್ 22: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನಲೆಯಲ್ಲಿ ದಸರಾ ದರ್ಶಿನಿ ಪ್ಯಾಲೇಸ್ ಆನ್ ವ್ಹೀಲ್ಸ್ ಮತ್ತು ಇತರ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ ಪೋಸ್ಟರ್ ಬಿಡುಗಡೆಗೊಳಿಸಿ, ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಎಂ.ಕೆ.ಸೋಮಶೇಖರ್, ಕಾಂಗ್ರೆಸ್ ಮುಖಂಡರಾದ ಮೂರ್ತಿ, ಶಿವಣ್ಣ, ಕೆ.ಎಸ್.ಆರ್.ಟಿ.ಸಿ.ವಿಭಾಗೀಯ ನಿಯಂತ್ರಣಾಧಿಕಾರಿ ವಾಸು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಮೈಸೂರು ದಸರಾ ಮಹೋತ್ಸವ : ಸೆ.23 ರ ಕಾರ್ಯಕ್ರಮಗಳ ಪಟ್ಟಿಮೈಸೂರು ದಸರಾ ಮಹೋತ್ಸವ : ಸೆ.23 ರ ಕಾರ್ಯಕ್ರಮಗಳ ಪಟ್ಟಿ

ಪ್ಯಾಲೇಸ್ ಆನ್ ವೀಲ್ಸ್ ಚಾಲನೆಗಾಗಿ ಕೆಎಸ್ಸಾರ್ಟಿಸಿ ಬಸ್ ನಲ್ಲೇ ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಮೈಸೂರಿಗೆ ಬಂದಿಳಿದರು. ಒಟ್ಟು ನಾಲ್ಕು ಪ್ಯಾಕೇಜ್ ಗಳಲ್ಲಿ ಪ್ರವಾಸಿ ತಾಣಗಳ ದರ್ಶನ ಸಿಗಲಿದೆ. ದಸರಾ ದರ್ಶಿನಿ ಪ್ಯಾಕೇಜ್ ಅಡಿಯಲ್ಲಿ ಚಾಮುಂಡಿ ಬೆಟ್ಟ, ಮೃಗಾಲಯ, ಅರಮನೆ, ರೈತ ದಸರಾ ಕಾರ್ಯಕ್ರಮಗಳ ದರ್ಶನ ಸಿಗಲಿದೆ. ಮೈಸೂರು ಕೊಡಗು,ಮಂಡ್ಯ, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳ 174 ಆಯ್ದ ಫಲಾನುಭವಿಗಳಿಗೆ ಮಾತ್ರ ಕೇವಲ 50ರೂ.ಗಳ ರಿಯಾಯಿತಿ ಪಾಸ್ ನಲ್ಲಿ ದಸರಾ ದರ್ಶನ ಲಭ್ಯವಿದೆ

Minister HM Revanna inaugurates Palace on wheel on Sep 22nd.

ಗಾಲಿಗಳ ಮೇಲೆ ‌ಅರಮನೆ ಪ್ರವಾಸಕ್ಕೆ ಚಾಲನೆ
ಗಾಲಿಗಳ ಮೇಲೆ‌ ಅರಮನೆ ( ಪ್ಯಾಲೇಸ್ ಆನ್ ವ್ಹೀಲ್ಸ್) ಕಾರ್ಯಕ್ರಮವನ್ನು ಸಾರಿಗೆ ಸಚಿವರಾದ ಎಚ್. ಎಂ. ರೇವಣ್ಣ ಅವರು ಅರಮನೆ ಉತ್ತರ ದ್ವಾರದ ಬಳಿ ಉದ್ಘಾಟಿಸಿದರು.

ಗಾಲಿಗಳ ಮೇಲೆ ‌ಅರಮನೆ ಕಾರ್ಯಕ್ರಮ ಪ್ರವಾಸಿಗರಿಗೆ ಮೈಸೂರಿನ ಅರಮನೆಗಳು ಹಾಗೂ ವಸ್ತು ಸಂಗ್ರಹಾಲಯಗಳನ್ನು ಪರಿಚಯಿಸಲಿದೆ. ಈ ವಿನೂತನವಾದ ಕಾರ್ಯಕ್ರಮಕ್ಕೆ ಎರಡು ಹವಾನಿಯಂತ್ರಿತ ಬಸ್ ಗಳನ್ನು ಬಳಸಲಾಗುತ್ತಿದೆ. ಬೆಳಗ್ಗೆ ಅಂಬಾವಿಲಾಸ ಅರಮನೆಯಿಂದ ಪ್ರವಾಸ ಆರಂಭಿಸಿ ಮಧ್ಯಾಹ್ನ ಲಲಿತ ಮಹಲ್ ಅರಮನೆಯಲ್ಲಿ ಊಟದ ವ್ಯವಸ್ಥೆ ಯೊಂದಿಗೆ ರಾತ್ರಿ ಮತ್ತೆ ಅಂಬಾವಿಲಾಸ ಅರಮನೆ ಬಳಿ‌ಪ್ರವಾಸ ಮುಗಿಯಲಿದೆ.

Minister HM Revanna inaugurates Palace on wheel on Sep 22nd.

ಒಟ್ಟು ಪ್ರವಾಸದಲ್ಲಿ 8 ಪ್ರಮುಖ ಸ್ಥಳಗಳನ್ನು ಪರಿಚಯಿಸಲಾಗುತ್ತಿದ್ದು, ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ನುರಿತ ಪ್ರವಾಸಿ ಮಾರ್ಗದರ್ಶಿಗಳು ಪಾರಂಪರಿಕ‌ ಕಟ್ಟಡಗಳ ಮಾಹಿತಿ ನೀಡಲಿದ್ದಾರೆ. ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೆಶಕರಾದ ಹೆಚ್.ಪಿ. ಜನಾರ್ದನ್ ಅವರು ಮಾಹಿತಿ ನೀಡಿ ಈ ವಿಶೇಷ ಪ್ರವಾಸ ಮಾಡಲು ಪ್ರತಿಯೊಬ್ಬ ಪ್ರವಾಸಿಗರಿಗೆ 999ರೂ. ನಿಗದಿಪಡಿಸಲಾಗಿದೆ. ಸೆಪ್ಟಂಬರ್ 22 ರಿಂದ ಅಕ್ಟೋಬರ್ 2 ರವರೆಗೂ ಗಾಲಿಗಳ ಮೇಲೆ ‌ಅರಮನೆ‌ ಮುಂದುವರಿಯಲಿದೆ ಎಂದು‌ ತಿಳಿಸಿದರು.

English summary
Transport minister of Karnataka H M Revanna has inaugurated Dasara Darshini and palace on wheel special programmes during Mysuru Dasara festival 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X