ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫಲಿತಾಂಶ ಬರುವವರೆಗೆ ಏನೇ ಹೇಳಿಕೆ ಕೊಟ್ಟರೂ ವ್ಯರ್ಥ: ಜಿಟಿಡಿ

|
Google Oneindia Kannada News

Recommended Video

ಸಿದ್ದರಾಮಯ್ಯ ಹೇಳಿಕೆಗೆ ಜಿ ಟಿ ದೇವೇಗೌಡ ಪ್ರತಿಕ್ರಿಯೆ | Oneindia Kannada

ಮೈಸೂರು, ಮೇ 13: ಜನಪ್ರತಿನಿಧಿಗಳು ಜವಬ್ದಾರಿಯಿಂದ ಮಾತನಾಡಬೇಕು. ಸಿದ್ದರಾಮಯ್ಯನವರೇ 5 ವರ್ಷ ಕುಮಾರಸ್ವಾಮಿ ಸಿಎಂ ಎಂದು ಹೇಳಿದ್ದಾರೆ. ಇನ್ನು ಬೇರೆ ಯಾವ ಮಾತು ಬರಬಾರದು ಎಂದು ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ನೀಡಿದ ಹೇಳಿಕೆಗೆ ಸಚಿವ ಜಿಟಿ ದೇವೇಗೌಡ ಪ್ರತಿಕ್ರಿಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಪ್ರತಿನಿಧಿಗಳು ಜವಬ್ದಾರಿಯಿಂದ ಮಾತನಾಡಬೇಕು.ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬಾರದು. ಮೇ. 23ರ ಫಲಿತಾಂಶ ಬರುವವರೆಗೂ ಎಲ್ಲರ ಹೇಳಿಕೆಯೂ ವ್ಯರ್ಥ. ಯಾರು ಏನೇ ಹೇಳಿಕೆ ಕೊಟ್ಟರೂ ರಿಸಲ್ಟ್ ಬರೋವರೆಗೆ ಎಲ್ಲವೂ ದಂಡವೇ ಎಂದರು.

ಅವನ್ಯಾರೀ ಎಚ್ ವಿಶ್ವನಾಥ್, ಅವ್ನಿಗೆ ಏನ್ ಗೊತ್ತು, ಹೊಟ್ಟಿಕಿಚ್ಚು ಆತನಿಗೆ: ಸಿದ್ದರಾಮಯ್ಯಅವನ್ಯಾರೀ ಎಚ್ ವಿಶ್ವನಾಥ್, ಅವ್ನಿಗೆ ಏನ್ ಗೊತ್ತು, ಹೊಟ್ಟಿಕಿಚ್ಚು ಆತನಿಗೆ: ಸಿದ್ದರಾಮಯ್ಯ

ಸಿದ್ದರಾಮಯ್ಯ ವಿರುದ್ಧ ನಾನು ಎಂದಿಗೂ ಮಾತನಾಡಿಲ್ಲ. ಅವರ ಮೇಲೆ ಯಾವಾಗಲೂ ಗೌರವ ಇದೆ. ಅವರು ನನ್ನ ಬಗ್ಗೆ ಟ್ವೀಟ್ ಮಾಡಿದ್ದಾರಂತೆ. ಅದನ್ನ ನಾನು ನೋಡಿಲ್ಲ. ಅವರು ಮೊದಲು ಜಿಟಿಡಿ ಮಾತನಾಡಿದರೂ, ಈಗ ವಿಶ್ವನಾಥ್ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ. ಆದರೆ ಅವರೇನು ಚುನಾವಣೆ ಬಗ್ಗೆ ಮಾತನಾಡಿಲ್ಲ. ಅವರು ಏತಕ್ಕಾಗಿ ನನ್ನ ಹೆಸರು ಹೇಳಿದ್ದಾರೋ ಗೊತ್ತಿಲ್ಲ ಎಂದು ತಿಳಿಸಿದರು.

Minister GT Devegowda reacts to Siddaramaiahs tweet

ಸಿದ್ದು ವಿರುದ್ಧ ಅಸಮಾಧಾನ ಹೊರಹಾಕಿದ ವಿಶ್ವನಾಥ್ ಪುತ್ರ ಅಮಿತ್ಸಿದ್ದು ವಿರುದ್ಧ ಅಸಮಾಧಾನ ಹೊರಹಾಕಿದ ವಿಶ್ವನಾಥ್ ಪುತ್ರ ಅಮಿತ್

ಇನ್ನು ಸಿಎಂ ಕುಮಾರಸ್ವಾಮಿ ಟೆಂಪಲ್ ರನ್ ಬಗ್ಗೆ ಪ್ರತಿಕ್ರಿಯಿಸಿದ ಜಿಟಿಡಿ, ಯಾರು ದೇವಸ್ಥಾನಕ್ಕೆ ಹೋಗಿಲ್ಲ ಹೇಳಿ? ಸಿಎಂ ಆಗಿದ್ದ ಎಲ್ಲರೂ ಹೋಗಿದ್ದಾರೆ, ಯಾಕೆ ಯಡಿಯೂರಪ್ಪ ಹೋಗಿಲ್ಲವಾ? ಮನಸ್ಸಿಗೆ ಬಂದಾಗ ದೇವಾಲಯಕ್ಕೆ ಹೋಗುತ್ತಾರೆ. ಅದನ್ನೇ ಟೀಕೆ ಟಿಪ್ಪಣಿ ಮಾಡೋದು ಸರಿಯಲ್ಲ. ನೀರಿಲ್ಲ, ಮೇವಿಲ್ಲ ಅಂತ ಕೇಳಿ, ಅದು ಬಿಟ್ಟು ಬೇರೆ ಮಾತು ಬೇಡ. ಜನಪ್ರತಿನಿಧಿಗಳು ಪ್ರತಿ ಪಕ್ಷದ ನಾಯಕರು ಈ ಬಗ್ಗೆ ನೋಡಿಕೊಂಡು ಮಾತನಾಡಬೇಕು ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.

English summary
Minister GT Devegowda reacts to Siddaramaiah's tweet. He said i never spoken against Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X