ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಷ ಪ್ರಸಾದ ಸೇವನೆ: ಸಂತ್ರಸ್ತರನ್ನು ನೋಡಿ ಕಣ್ಣೀರಿಟ್ಟ ಜಿಟಿ ದೇವೇಗೌಡ

|
Google Oneindia Kannada News

Recommended Video

ಸಂತ್ರಸ್ತರನ್ನು ನೋಡಿ ಕಣ್ಣೀರಿಟ್ಟ ದೇವೇಗೌಡ..! | Oneindia Kannada

ಮೈಸೂರು, ಡಿಸೆಂಬರ್ 17 : ಸುಳ್ವಾಡಿ ಗ್ರಾಮದ ಮಾರಮ್ಮನ ದೇವಾಲಯದಲ್ಲಿ ನೀಡಿದ ವಿಷ ಪ್ರಸಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇ - ದಿನೇ ಸಾವಿನ ಸಂಖ್ಯೆ ಏರುತ್ತಲೇ ಇದೆ.

ಇಂದು ಬೆಳಿಗ್ಗೆ ಸಹ ಮೈಸೂರಿನ ಜೆ ಎಸ್ ಎಸ್ ಆಸ್ಪತ್ರೆಯಲ್ಲಿ ಮೈಲಿಬಾಯಿ ಎಂಬುವವರು ಸಾವಿಗೀಡಾಗಿದ್ದರು. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲೆಂದು ಶವಾಗಾರಕ್ಕೆ ಆಗಮಿಸಿದ್ದ ವೇಳೆ ಮೈಲಿಬಾಯಿ ಕುಟುಂಬದವರ ರೋದನ ಕಂಡು ಭಾವುಕರಾಗಿ ಸಚಿವ ಜಿ ಟಿ ದೇವೇಗೌಡರವರು ಸಹ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.

ವಿಷಪ್ರಸಾದ ಪ್ರಕರಣ: ಸಾಲೂರು ಮಠದ ಶ್ರೀಗಳು ಹೇಳಿದ್ದೇನು ? ವಿಷಪ್ರಸಾದ ಪ್ರಕರಣ: ಸಾಲೂರು ಮಠದ ಶ್ರೀಗಳು ಹೇಳಿದ್ದೇನು ?

ಮೃತ ಮೈಲಿಬಾಯಿ ಪಾರ್ಥಿವ ಶರೀರದ ಬಳಿ ಭಾವುಕರಾದ ಸಚಿವ ಜಿ ಟಿ ದೇವೇಗೌಡರವರು, ಮೈಲಿಬಾಯಿ ಮಗಳು ಪ್ರಿಯಾಬಾಯಿ ಅಳುವನ್ನು ಕಂಡು ಕಣ್ಣೀರು ಹಾಕಿದರು. ನಿನ್ನೆಯಷ್ಟೇ ಪ್ರಿಯಾಬಾಯಿಯನ್ನು ಮಾತನಾಡಿಸಿ ಸಚಿವರು ಏನು ಆಗುವುದಿಲ್ಲಮ್ಮಾ, ನಿಮ್ಮ ತಾಯಿ ಬದುಕುತ್ತಾರೆಂದು ಧೈರ್ಯ ತುಂಬಿದ್ದರು. ಅಲ್ಲದೇ ನಾವು ನಿಮ್ಮ ಮನೆಗೆ ಬರುತ್ತೇವೆಂದು ಪ್ರಿಯಾಬಾಯಿ ಬಳಿ ಅವರ ಮನೆ ವಿಳಾಸ ಬರೆಸಿಕೊಂಡಿದ್ದರು. ಇಂದು ಆಕೆ ತಾಯಿ ಮೃತಪಟ್ಟಿರುವುದನ್ನು ಕಂಡು ಬೇಸರಗೊಂಡು ತಾವೇ ಕಣ್ಣೀರು ಹಾಕಿದರು.

Minister GT Devegowda cries after seeing Temple victims fight

ಕೆ ಆರ್ ಆಸ್ಪತ್ರೆ ಶವಾಗಾರದ ಬಳಿ ಪ್ರಿಯಾ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟುವ ಪ್ರಸಂಗ ಕಂಡು ಮೂಕವಿಸ್ಮಿತರಂತೆ ದಿಟ್ಟಿಸಿ ನೋಡುತ್ತಿದ್ದರು ಸಚಿವ ಜಿ ಟಿ ದೇವೇಗೌಡ. ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಸುಳ್ವಾಡಿ ಗ್ರಾಮದ ಮಾರಮ್ಮ ದೇಗುಲದ ಪ್ರಸಾದಕ್ಕೆ ಆರ್ಗನೋ ಪಾಸ್ಪರಸ್ ಬೆರೆಸಲಾಗಿದೆ. ಇದರೊಂದಿಗೆ ಮೊನೊ ಕ್ರೋಟೋಫಾಸ್ ನ್ನು ಬಳಸಿದ್ದಾರೆ ಬಳಕೆ ಮಾಡಿದ್ದಾರೆ.

ಆಸ್ಪತ್ರೆಯಲ್ಲಿ ಕರುಳಹಿಂಡುವ ಪ್ರಸಂಗ :ನೋವಿನ ಆಕ್ರಂದನದ ನಡುವೆ ತಮ್ಮವರ ಹುಡುಕಾಟ ಆಸ್ಪತ್ರೆಯಲ್ಲಿ ಕರುಳಹಿಂಡುವ ಪ್ರಸಂಗ :ನೋವಿನ ಆಕ್ರಂದನದ ನಡುವೆ ತಮ್ಮವರ ಹುಡುಕಾಟ

ಈ ಕುರಿತು ಲ್ಯಾಬ್ ರಿಪೋರ್ಟ್ ನಿಂದ ಇದು ಖಚಿತಗೊಂಡಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ವಿಷ ಬೆರೆಸಿರುವುದನ್ನು ಸಾಬೀತುಪಡಿಸಿದೆ. ತನ್ನ ಪೋಷಕರನ್ನು ಕಳೆದುಕೊಂಡ ಪ್ರಿಯಾಬಾಯಿ ಕುಟುಂಬಸ್ಥರಿಗೆ ನಮ್ಮ ಸರ್ಕಾರದ ವತಿಯಿಂದ ಎಲ್ಲಾ ಸಹಾಯ ಮಾಡಲಾಗುವುದು ಎಂದು ಭರವಸೆ ನೀಡಿದರು.

Minister GT Devegowda cries after seeing Temple victims fight

ಸತ್ತವರ ಸಂಖ್ಯೆ ಒಂದಂಕಿಯಿಂದ ಎರಡಂಕಿ ದಾಟಿದ್ದು ಹೇಗೆ? ಆಂಬ್ಯುಲೆನ್ಸ್ ಚಾಲಕನ ಮಾತು ಸತ್ತವರ ಸಂಖ್ಯೆ ಒಂದಂಕಿಯಿಂದ ಎರಡಂಕಿ ದಾಟಿದ್ದು ಹೇಗೆ? ಆಂಬ್ಯುಲೆನ್ಸ್ ಚಾಲಕನ ಮಾತು

ರೋಗಿಗಳನ್ನು ದಾಖಲಿಸಲಾದ ಜೆ ಎಸ್ ಎಸ್ ಆಸ್ಫತ್ರೆ, ಕೆ.ಆರ್. ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಜಿ.ಟಿ.ಡಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಸ್ವಸ್ಥರ ಆರೋಗ್ಯ ವಿಚಾರಿಸಿದರು. ಜೊತೆಗೆ ಆಸ್ಪತ್ರೆಯ ಸಿಬ್ಬಂದಿಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.

English summary
Senior minister GT Devegowda visited to Temple poisoning victim house and he shows his apathy towards them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X