ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವನಾಥ್ ಮಾತಿಗೆ ತಿರುಗೇಟು ನೀಡಿದ ಸಚಿವ ಜಿ ಟಿ ದೇವೇಗೌಡ

|
Google Oneindia Kannada News

ಮೈಸೂರು, ಜೂನ್ 24 : ನಿಮಗೆ ಇಷ್ಟ ಇದ್ರೆ ಇರಿ, ಹೋಗೋದಾದ್ರೆ ಹೋಗಿ ಎಂಬ ಹೇಳಿಕೆ ನೀಡುವ ಅಧಿಕಾರ ಯಾರಿಗೂ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿ. ಟಿ ದೇವೇಗೌಡ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತ್ಯತೀತ ಜನತಾದಳದ ಅಧ್ಯಕ್ಷ ವಿಶ್ವನಾಥ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಸಮ್ಮಿಶ್ರ ಸರ್ಕಾರ ನಾಲ್ಕು ವರ್ಷ ಸುಭದ್ರವಾಗಿ ಇರಲಿದೆ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಕುಮಾರಸ್ವಾಮಿ ಅವರ ಸರ್ಕಾರ ಸುಭದ್ರವಾಗಿದೆ ಎಂದು ಹೇಳಿದ್ದಾರೆ.

ಕಷ್ಟವಾದರೆ ಬೆಂಬಲ ಹಿಂಪಡೆದು ಹೋಗಲಿ: ಕಾಂಗ್ರೆಸ್ ವಿರುದ್ಧ ವಿಶ್ವನಾಥ್ ಕಿಡಿ ಕಷ್ಟವಾದರೆ ಬೆಂಬಲ ಹಿಂಪಡೆದು ಹೋಗಲಿ: ಕಾಂಗ್ರೆಸ್ ವಿರುದ್ಧ ವಿಶ್ವನಾಥ್ ಕಿಡಿ

ಪಕ್ಷದ ಸಂಘಟನೆಗೆ ಜಾ.ದಳ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಚಿಂತನೆ ಮಾಡುತ್ತಿದ್ದಾರೆ. ವಿಶ್ವನಾಥ್ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಈಗ ಏನೇನೋ ಹೇಳಿಕೆ ಕೊಟ್ಟು ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದರು.

Minister GT Devegowda Clarification about H Vishwanth statement

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ. ದೇಶದ ಅಭಿವೃದ್ಧಿ ಮಾಡಲು ಅವರು ಮುಂದಾಗಿದ್ದಾರೆ. ಇತ್ತ ರಾಜ್ಯದಲ್ಲಿ ಸರ್ಕಾರ ಉರುಳಿಸುವ ಯತ್ನವನ್ನು ಬಿಜೆಪಿ ಕೈ ಬಿಟ್ಟಿದೆ.

ಮೈಸೂರಿನಲ್ಲಿ ಪ್ರಗತಿ ಪರಿಶೀಲನೆ ಸಭೆ; ಮಾಹಿತಿ ಪಡೆದ ಆರ್.ವಿ.ದೇಶಪಾಂಡೆ ಮೈಸೂರಿನಲ್ಲಿ ಪ್ರಗತಿ ಪರಿಶೀಲನೆ ಸಭೆ; ಮಾಹಿತಿ ಪಡೆದ ಆರ್.ವಿ.ದೇಶಪಾಂಡೆ

ಹೀಗಿರುವಾಗ ಕಾಂಗ್ರೆಸ್ ಹಾಗೂ ಜಾ. ದಳದವರು ಅಣ್ಣ ತಮ್ಮಂದಿರಂತೆ ಇರಬೇಕು. ಏನೇ ಸಮಸ್ಯೆಗಳಿದ್ದರೂ ನಾಲ್ಕು ಗೋಡೆ ಮಧ್ಯೆ ಕುಳಿತು ಬಗೆಹರಿಸಿಕೊಳ್ಳಬೇಕೇ ಹೊರತು ಏನೇನೋ ವಿವಾದಾತ್ಮಕ ಹೇಳಿಕೆಯನ್ನು ಯಾರೂ ನೀಡಬಾರದು ಎಂದು ಜಿ. ಟಿ ದೇವೇಗೌಡ ತಿಳಿಸಿದರು.

English summary
Minister GT Devegowda Clarification about H Vishwanth statement. He said that, No one has to say right or willing to go away from the party,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X