ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಲೇಜು ವಿದ್ಯಾರ್ಥಿಗಳಿಗೆ ಪ್ರೀತಿ ಪಾಠ ಮಾಡಿದ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ

By Yashaswini
|
Google Oneindia Kannada News

ಮೈಸೂರು, ಜುಲೈ 21 : ಉನ್ನತ ಶಿಕ್ಷಣ ಸಚಿವ ಗಂಭೀರವದನ ಜಿ.ಟಿ.ದೇವೇಗೌಡ ಅವರು ಇಂದು ಪ್ರೀತಿ ಕಲಿಸುವ ಮೇಷ್ಟ್ರಾಗಿ ಬದಲಾಗಿದ್ದರು. ಹೌದು, ಅವರಿಂದು ಕಾಲೇಜು ವಿದ್ಯಾರ್ಥಿಗಳಿಗೆ ಪ್ರೀತಿ ಪಾಠ ಮಾಡಿದರು.

ಪ್ರೀತಿ ಎಂದರೇನು ಎಬುದೇ ಕೆಲರಿಗೆ ಗೊತ್ತಿಲ್ಲ, ಪ್ರೀತಿ ಮಾಡಿ ಓಡಿ ಹೋಗುವುದನ್ನೇ ನಿಜವಾದ ಪ್ರೇಮ ಎಂದು ತಪ್ಪು ತಿಳಿದುಕೊಂಡಿದ್ದಾರೆ. ಎಲ್ಲಾ ಸಮಯದಲ್ಲೂ ಒಬ್ಬರನ್ನೊಬ್ಬರು ಗೌರವದಿಂದ, ಸಮಾನವಾಗಿ ಕಾಣುವುದೇ ಪ್ರೀತಿ ಎಂದು ಅವರು ವ್ಯಾಖ್ಯಾನಿಸಿದರು.

ಸಿದ್ದರಾಮಯ್ಯ, ಎಚ್‌ಡಿಕೆಗೆ ಪುಂಖಾನುಪುಂಖವಾಗಿ ಪತ್ರ ಬರೆಯಲು ಕಾರಣವೇನು?ಸಿದ್ದರಾಮಯ್ಯ, ಎಚ್‌ಡಿಕೆಗೆ ಪುಂಖಾನುಪುಂಖವಾಗಿ ಪತ್ರ ಬರೆಯಲು ಕಾರಣವೇನು?

ಪರಸ್ಪರ ಆಕರ್ಷಣೆಯೇ ಪ್ರೀತಿಯಲ್ಲ ಎಂದ ಅವರು, ಕೆಲ ವರ್ಷಗಳ ಹಿಂದೆ ವರನಿಗೆ ವರದಕ್ಷಿಣೆ ನೀಡುವ ಪರಿ ಪಾಠವಿತ್ತು. ಆದರೆ ಈಗ ವಧು ದಕ್ಷಿಣೆ ಕೊಟ್ಟು ಮದುವೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಬದಲಾದ ಪರಿಸ್ಥಿತಿ ಬಗ್ಗೆ ವ್ಯಂಗ್ಯ ಮಾಡಿದರು.

Minister G.T.Deva Gowda teaches college students love lesson

ಪೋಷಕರು ಮಕ್ಕಳಿಗೆ ಕಷ್ಟಪಟ್ಟು ಶಿಕ್ಷಣ ಕೊಡಿಸುತ್ತಾರೆ. ಆ ಮಕ್ಕಳು ಪೋಷಕರಿಗೂ, ಗ್ರಾಮಕ್ಕೂ, ಕಾಲೇಜಿಗೂ ಒಳ್ಳೆಯ ಹೆಸರು ಬರುವಂತೆ ಸಾಧನೆ ಮಾಡಬೇಕೆಂದು ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಪ್ರೀತಿಯ ಹೆಸರಿನಲ್ಲಿ ಮನೆ ಬಿಟ್ಟು ಓಡಿ ಹೋಗುವುದು ಸರಿಯಾದ ಕ್ರಮವಲ್ಲ ಎಂದ ಅವರು. ಈಗಿನ ಕಾಲದಲ್ಲಿ ಪ್ರೀತಿಸಿ ಮದುವೆಯಾಗುವದಕ್ಕೆ ಜಾತಿಗಳು ಅಡ್ಡಿಯಿಲ್ಲ. ಆದರೆ ಉತ್ತಮ ಗುಣಗಳು, ಉತ್ತಮ ನಡವಳಿಕೆ ಇರುವ ಜೀವನ ಸಂಗಾತಿಯನ್ನು ನೀವು ಹುಡುಕಿಕೊಳ್ಳಬೇಕು ಎಂದು ಸಲಹೆ ನೀಡಿದರು.

Minister G.T.Deva Gowda teaches college students love lesson

ವಿದ್ಯಾವಂತರಾಗಿ ನೀವೇ ನಿಮ್ಮ ಸಂಗಾತಿಯ ಆಯ್ಕೆಯಲ್ಲಿ ತಪ್ಪು ದಾರಿ ತುಳಿಯಬಾರದು. ಬಹಳಷ್ಟು ಜನ ಪ್ರೀತಿಸಿ ಅದ್ಧೂರಿಯಿಂದ ಮದುವೆಯಾಗುತ್ತಾರೆ. ಆದರೆ ಮದುವೆಯಾಗಿ ಕೆಲವು ದಿನದಲ್ಲೇ ಡಿವೋರ್ಸ್ ನೀಡುತ್ತಾರೆ. ಈಗಿನ ವಕೀಲರು ಹಾಗೂ ಪೊಲೀಸರಿಗೆ ಡಿವೋರ್ಸ್ ಕೇಸ್‌ಗಳೇ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

English summary
Higher Education Minister GT Deve Gowda has teaches love lesson to college students in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X