ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಕಸ ಹಾಕುವ ಸ್ಥಳದಲ್ಲಿ ಶಾಂತಿ ಸಮರ

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಜನವರಿ 18 : ಕಸ ಹಾಕಬೇಡಿ ಎಂದು ಹೇಳಿದರೂ ಅದೇ ಜಾಗದಲ್ಲಿ ಕಸ ಹಾಕುವವರ ಮುಂದೆ ಶಾಂತಿ ಸಮರ ಸಾರಿದ ನಗರ ಪಾಲಿಕೆ ಸದಸ್ಯ ಬೋರ್ಡ್‌ ಹಿಡಿದು ಕಸಹಾಕುವ ಸ್ಥಳದಲ್ಲಿ ಕುಳಿತಿದ್ದಾರೆ.

ಮೈಸೂರಿನ ವಿದ್ಯಾರಣ್ಯಪುರಂನ ೯ನೇ ಮುಖ್ಯರಸ್ತೆಯ ಸಾರ್ವಜನಿಕ ಹಾಸ್ಟೆಲ್ ರೋಡ್ ನಲ್ಲಿ ಪಾಲಿಕೆಯವರು ಕಸ ಹಾಕಬೇಡಿ' ಇಲ್ಲಿ ಮೂತ್ರ ವಿಸರ್ಜನೆ ಮಾಡಬೇಡಿ ಅಂತ ಪಾಲಿಕೆಯವ್ರು ಗೋಡೆಗಳ ಮೇಲೆ ಬರೆಸಿದ್ದಾರೆ. ಅದರೆ ಜನ ಮಾಡಿದ್ದನೇ ಮಾಡುತ್ತಾರೆ ಹೀಗಾಗಿ ಯೋಚಿಸಿದ ಮೈಸೂರಿನ ನಗರ ಪಾಲಿಕೆ ವಾರ್ಡ್ ನಂಬರ್ ೧೦ರ ಸದಸ್ಯ ಸುನೀಲ್ ಕಸ ಹಾಕುವ ಜಾಗದಲ್ಲಿಯೇ ಕುಳಿತು ಯಾರು ಕಸ ಹಾಕಬಾರದೆಂದು ಜಾಗೃತಿ ಮೂಡಿಸುತ್ತಾ, ಗಾಂಧಿ ತತ್ವದ ಮೂಲಕ ಗಾಂಧಿಗಿರಿ ಶುರು ಮಾಡಿದ್ದಾರೆ.[ಸ್ವೀಡನ್ ನಲ್ಲಿ ಕಸಕ್ಕೆ ಬೇಡಿಕೆ, ಬೇರೆ ದೇಶದಿಂದಲೂ ಆಗತ್ತೆ ಆಮದು]

Member of Municipality Sunil awakening of garbage

ಕಸ ಹಾಕುವ ಸ್ಥಳದಲ್ಲೇ ಬೋರ್ಡ್ ಹಿಡಿದು ಕುಳಿತ ಸುನೀಲ್..
ಪಾಲಿಕೆ ಸದಸ್ಯ ಸುನೀಲ್ ಆ ಸ್ಥಳದಲ್ಲಿ ಕಸವನ್ನ ತೆಗೆಸಿ, ಆ ಸ್ಥಳವನ್ನ ಶುಚಿಗೊಳಿಸಿ ಅದೇ ಸ್ಥಳದಲ್ಲಿ ಕಸ ಹಾಕಬೇಡಿ ಎಂದು ಬೋರ್ಡ್ ಹಿಡಿದು ಕುಳಿತ್ತಿದ್ದಾರೆ. ಅದು ಬೆಳಗ್ಗೆ, ಮಧ್ಯಾಹ್ನ, ಸಂಜೆ ಹಾಗೂ ರಾತ್ರಿ ಅಂತ ನಾಲ್ಕೋತ್ತು ಕುಳಿತಿರುತ್ತಾರೆ. ಆದರೆ ಈ ವೇಳೆ ಯಾರು ಕಸ ಹಾಕಲು ಬಂದಿಲ್ಲ.

Member of Municipality Sunil awakening of garbage

ಇಷ್ಟೇಲ್ಲ ಕಟ್ಟುನಿಟ್ಟಾಗಿ ಸುನೀಲ್ ಮಾಡಿದ್ರು ಕೆಲ ಅವಿವೇಕಿಗಳು ಸುನೀಲ್ ಇಲ್ಲದ ವೇಳೆ ಕಸ ಸುರಿದು ಏಸ್ಕೇಪ್ ಆಗಿದ್ದಾರೆ. ಕೊನೆಗೆ ಇದನ್ನು ಕಂಡ ಸುನೀಲ್ ಕಸವನ್ನು ಮತ್ತೆ ತೆಗಿಸಿದ್ದಾರೆ. ಆದರೆ ನಾನೂ ಮಧ್ಯರಾತ್ರಿ 12 ಗಂಟೆಯವರೆಗೂ ಇಲ್ಲಿಯೇ ಇರುತ್ತೇನೆ. ಪುನ: ಬೆಳಗ್ಗೆ 6 ಗಂಟೆಗೆ ಬಂದು ಅದೇ ಜಾಗದಲ್ಲಿ ಕೂರುತ್ತೇನೆ. ಕಂಡಕಂಡಲ್ಲಿ ಕಸ ಸುರಿಯುವ ಜನರಿಗೆ ಬುದ್ದಿ ಬರುವವರೆಗೂ ಈ ಗಾಂಧಿಗಿರಿ ಮುಂದುವರೆಯಲಿದೆ ಅಂತಾರೆ ಸುನೀಲ್..

Member of Municipality Sunil awakening of garbage

ಸುನೀಲ್ ಅವರು ಇತ್ತ ಬೋರ್ಡ್ ಹಿಡಿದು ಜಾಗೃತಿ ಮೂಡಿಸುತ್ತಿದ್ದರೆ, ಹಿಂಬದಿಯಿಂದ ಬಂದ ವ್ಯಕ್ತಿಯೊಬ್ಬರು ಕಸ ಸುರಿದು ಏಸ್ಕೇಪ್ ಆಗಲು ಮುಂದಾದ ವೇಳೆ ಆ ‌ಕಸವನ್ನ ಎತ್ತಿ ಸುನೀಲ್ ಆ ವ್ಯಕ್ತಿಗೆ ಹೀಗೆಲ್ಲ‌ ಮಾಡದಂತೆ‌ ಮನವಿ ಮಾಡಿದ್ರು. ಅಲ್ಲದೆ ಅವರಿಗೆ ತಿಳಿವಳಿಕೆ ಮೂಡಿಸಿದರು.

English summary
Member of Municipality Sunil awakening to sitting in garbage place in Mysore. That is why the throw garbage litter the place question the sunil for people. He follow of Gandhi's principle of awareness
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X