ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು; ವಕೀಲಿ ವೃತ್ತಿ ಆರಂಭಿಸಿದ ಮೊದಲ ತೃತೀಯ ಲಿಂಗಿ

By Coovercolly Indresh
|
Google Oneindia Kannada News

ಮೈಸೂರು, ಫೆಬ್ರವರಿ 19; ಇಂದು ಎಲ್ಲಾ ರಂಗಗಳಲ್ಲೂ ತೃತೀಯ ಲಿಂಗಿಯರು ಸೇವೆ ಸಲ್ಲಿಸುತ್ತಿದ್ದಾರೆ. ದಶಕಗಳ ಹಿಂದೆ ಸಮಾಜದಿಂದ ಅವಮಾನ, ನಿಂದನೆ, ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದ ಇವರುಗಳು ಇಂದು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಸಾಧನೆ ಮಾಡಿದ್ದಾರೆ.

ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ತೃತೀಯ ಲಿಂಗಿ ಈ ಸಮುದಾಯದವರೊಬ್ಬರು ವಕೀಲರಾಗಿದ್ದಾರೆ. ಮೈಸೂರಿನ ಜಯನಗರದ ನಿವಾಸಿ ಶಶಿ ಅಲಿಯಾಸ್ ಶಶಿಕುಮಾರ್ ಮೈಸೂರು ಜಿಲ್ಲೆಯಲ್ಲಿ ಕಾನೂನು ಪದವಿ ಪಡೆದ ಮೊದಲ ತೃತೀಯ ಲಿಂಗಿ ಎನಿಸಿದ್ದಾರೆ.

ತುಮಕೂರು ಕೋರ್ಟ್‌ನಲ್ಲಿ ಕೆಲಸ ಖಾಲಿ ಇದೆ ತುಮಕೂರು ಕೋರ್ಟ್‌ನಲ್ಲಿ ಕೆಲಸ ಖಾಲಿ ಇದೆ

14ನೇ ವಯಸ್ಸಿನವರೆಗೂ ಶಶಿಕುಮಾರ್ ಆಗಿದ್ದವರು ನಂತರ ದೇಹದಲ್ಲಿ ಹಾರ್ಮೋನ್ ವ್ಯತ್ಯಾಸದ ಕಾರಣದಿಂದ ಯುವತಿಯರ ವೇಷ ಭೂಷಣದ ಕಡೆಗೆ ಆಸಕ್ತರಾದರು. ಹುಡುಗಿಯರಂತೆ ಉಡುಪು ಧರಿಸುವುದು, ಮೇಕಪ್ ಮಾಡಿಕೊಳ್ಳುತೊಡಗಿದರು.

ಬೆಂಗಳೂರು ವಿವಿಗೆ ಸ್ನಾತಕೋತ್ತರ ಕೋರ್ಸ್‌ಗೆ ತೃತೀಯ ಲಿಂಗಿಗಳ ಅರ್ಜಿ ಬೆಂಗಳೂರು ವಿವಿಗೆ ಸ್ನಾತಕೋತ್ತರ ಕೋರ್ಸ್‌ಗೆ ತೃತೀಯ ಲಿಂಗಿಗಳ ಅರ್ಜಿ

Meet Karnatakas First Transgender Lawyer C Shashi

ಇದರಿಂದ ಅವರಿಗೆ ಆತ್ಮತೃಪ್ತಿ ಸಿಗುತಿತ್ತು ಎಂದು ಅವರು ಹೇಳುತ್ತಾರೆ. ಇವರು ಹಣ್ಣಿನಂತೆ ವೇಷ ಧರಿಸತೊಡಗಿದಂತೆ ಸಹಪಾಠಿಗಳೆಲ್ಲರೂ ದೂರವಾದರು. ಇದು ಶಶಿಗೆ ಅತೀವ ನೋವನ್ನುಂಟು ಮಾಡಿತು. ಆದರೆ, ಅವರು ಓದಿನಿಂದ ಹಿಮ್ಮುಖರಾಗಲಿಲ್ಲ. ಬದಲಿಗೆ ಓದಿನಲ್ಲಿ ತೊಡಗಿಸಿಕೊಂಡು ಉತ್ತಮ ಅಂಕ ಗಳಿಸತೊಡಗಿದರು.

ತೃತೀಯ ಲಿಂಗಿಗಳಿಗೆ ಮೊದಲ ಹಾಸ್ಟೆಲ್ ತೆರೆಯುತ್ತಿರುವ ತಮಿಳುನಾಡು ಶಾಲೆ ತೃತೀಯ ಲಿಂಗಿಗಳಿಗೆ ಮೊದಲ ಹಾಸ್ಟೆಲ್ ತೆರೆಯುತ್ತಿರುವ ತಮಿಳುನಾಡು ಶಾಲೆ

ಅಶೋಕಪುರಂನ ಸಿದ್ಧಾರ್ಥ ಪ್ರೌಢಶಾಲೆಯಲ್ಲಿ 8 ರಿಂದ 10ನೇ ತರಗತಿ ಮುಗಿಸಿದ ಶಶಿ, ಲಕ್ಷ್ಮೀಪುರಂನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಲ್ಲಿ ವಿಜ್ಞಾನ (ಪಿಸಿಎಂಬಿ) ಹಾಗೂ ಕುವೆಂಪುನಗರದ ಸೋಮಾನಿ ಕಾಲೇಜಲ್ಲಿ ಕಲಾ ವಿಭಾಗದಲ್ಲಿ ಶಿಕ್ಷಣ ಪಡೆದಿದ್ದಾರೆ.

ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಸಾರ್ವಜನಿಕ ಆಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಶಶಿ ಸಮಾಜದ ಅಪಹಾಸ್ಯ, ನಿಂದನೆಗೂ ಆಹಾರವಾದರು. ಈ ಮಧ್ಯೆ ಹಾಸಿಗೆ ಹಿಡಿದಿದ್ದ ಹಿರಿಯ ನಾಗರಿಕರೊಬ್ಬರ ಕೇರ್ ಟೇಕರ್ ಆಗ ಕೆಲಸ ಮಾಡುತ್ತಿದ್ದ ಶಶಿ ಅವರಿಗೆ ಆಯುರ್ವೇದ ಮತ್ತು ಪಂಚಕರ್ಮ ವೈದ್ಯರಾದ ಡಾ. ಜೆ. ರಶ್ಮಿರಾಣಿ ಉನ್ನತ ಶಿಕ್ಷಣ ಪಡೆಯಲು ಸಹಕಾರ ನೀಡಿದರು.

ಶಶಿಗೆ ವಿವೇಕಾನಂದ ವೃತ್ತದ ಬಳಿ ಇರುವ ಚಿರಂತ್ ಆಯುರ್ವೇದ ಕ್ಲಿನಿಕ್ ಹಾಗೂ ಆಪ್ತ ಸಮಾಲೋಚನ ಕೇಂದ್ರದಲ್ಲಿ ಸಹಾಯಕರಾಗಿ ಕೆಲಸ ನೀಡಿದ್ದಲ್ಲದೆ, ಮುಕ್ತ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಳ್ಳುವಂತೆ ಪ್ರೇರೆಪಣೆ ನೀಡಿದರು.

2018ರಲ್ಲಿ ವಿದ್ಯಾವರ್ಧಕ ಕಾನೂನು ಕಾಲೇಜಿಗೆ ಶಶಿಯನ್ನು ಕಾನೂನು ಪದವಿ ಶಿಕ್ಷಣ ಪಡೆಯಲು ದಾಖಲು ಮಾಡಿಸಿದ ಡಾ. ಜೆ. ರಶ್ಮಿರಾಣಿ ಅವರೇ ಪ್ರತಿ ವರ್ಷ ಕಾಲೇಜು ಶುಲ್ಕ 30 ಸಾವಿರ ರೂ. ಪಾವತಿಸಿದ್ದಾರೆ. ನಿಂದನೆ, ನೋವು ಅನುಭವಿಸಿದರೂ ಕಾನೂನು ಪದವಿ ಪಡೆದಿರುವ ಶಶಿ ಅವರು ಈಗ ಹಿರಿಯ ವಕೀಲರಾದ ಟಿ. ನಾಗರಾಜು ಅವರ ಬಳಿ ಅಭ್ಯಾಸ ಮಾಡಲು ಆರಂಭಿಸಿದ್ದಾರೆ.

ಈ ಕುರಿತು ಮಾತನಾಡಿರುವ ಶಶಿ, "ಮನೆ ಕೆಲಸ ಮಾಡಿ ಪದವಿ ಶಿಕ್ಷಣ ಪಡೆದಿದ್ದೆ. ನಾನು ಓದುವ ಹಂಬಲ ವ್ಯಕ್ತಪಡಿಸಿದಾಗ ಕೆಲವರು ಓದುವುದು ನಿಮ್ಮಂತಹವರಿಗಲ್ಲ, ಸಿಗ್ನಲ್‍ನಲ್ಲಿ ನಿಂತು ಭಿಕ್ಷೆ ಬೇಡುವಂತೆಯೂ, ವೇಶ್ಯಾವಾಟಿಕೆಯಲ್ಲಿ ತೊಡಗುವಂತೆಯೂ ಛೇಡಿಸಿದ್ದಾರೆ" ಎಂದರು.

"ಇಂದು ಕಾನೂನು ಪದವಿ ಪಡೆದಿದ್ದೇನೆ. ನನಗೆ ನ್ಯಾಯಾಧೀಶರಾಗಬೇಕೆಂಬ ಹಂಬಲವಿದೆ. ಅದಕ್ಕಾಗಿ ಪರೀಕ್ಷೆ ಬರೆಯಲು ಸಿದ್ದತೆ ಮಾಡಿಕೊಳ್ಳುತ್ತಿದ್ದೇನೆ. ಸಮಾಜದಲ್ಲಿ ಅಪಹಾಸ್ಯ, ಕಿರುಕುಳಕ್ಕೆ ಒಳಗಾದ ತೃತೀಯ ಲಿಂಗಿ ಸಮುದಾಯಕ್ಕೆ ನೆರವು ನೀಡುವ ಗುರಿಯೂ ಇದೆ" ಎಂದು ಹೇಳಿದರು.

English summary
C. Shashi from Mysuru became Karnataka's first transgender lawyer. C. Shashi studied law in Vidyavardhaka law college.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X