ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲೋಕಸಭಾ ಚುನಾವಣೆ 2019: ಜಾಹೀರಾತುಗಳು, ಸುದ್ದಿಗಳ ಮೇಲೆ ನಿಗಾ

|
Google Oneindia Kannada News

ಮೈಸೂರು, ಮಾರ್ಚ್ 17:ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿ ಹಾಗೂ ಜಾಹೀರಾತುಗಳ ಬಗ್ಗೆ ನಿಗಾ ವಹಿಸಲು ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿಯನ್ನು ಮೈಸೂರು ಜಿಲ್ಲಾ ಚುನಾವಣಾಧಿಕಾರಿ ಅಭಿರಾಮ್ ಜಿ.ಶಂಕರ್ ರಚಿಸಿದ್ದಾರೆ.

ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮಾಧ್ಯಮ ಮಿತ್ರರಿಗೆ ಚುನಾವಣಾ ನೀತಿ ನಿಯಮಗಳು ಕುರಿತು ಸಲಹೆ ಸೂಚನೆಗಳನ್ನು ನೀಡಲು ಹಾಗೂ ವಿ.ವಿ ಟ್ಯಾಪ್ ಬಳಕೆ ಅದರಿಂದ ಯಾವುದೇ ರೀತಿಯಲ್ಲಿ ವ್ಯತ್ಯಾಸ ಕಂಡುಬರುವುದಿಲ್ಲ ಎಂಬುದನ್ನು ಅರಿವು ಮೂಡಿಸಲು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

ಚುನಾವಣಾ ಜಾಹೀರಾತುಗಳನ್ನು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರ ಮಾಡಲು ಮಾಧ್ಯಮ ಪ್ರಮಾಣೀಕರಣ ಸಮಿತಿಯಿಂದ ಅನುಮೋದನೆ ಪಡೆಯುವುದು ಕಡ್ಡಾಯವಾಗಿರುತ್ತದೆ. ಅನುಮೋದನೆಗಾಗಿ ಅರ್ಜಿಯನ್ನು ಅಭ್ಯರ್ಥಿಗಳು ಸಲ್ಲಿಸಬೇಕಿರುತ್ತದೆ. ವಿದ್ಯುನ್ಮಾನ ಮಾಧ್ಯಮದವರು ತಮ್ಮ ವಾಹಿನಿಗಳಲ್ಲಿ ಜಾಹೀರಾತು ಪ್ರಸಾರ ಮಾಡುವಾಗ ಅನುಮೋದನೆ ಪಡೆದಿರುವ ಪತ್ರವನ್ನು ಪಡೆದಿಕೊಳ್ಳಿ ಎಂದರು.

ಪಕ್ಷಾಂತರ: ಬಿಜೆಡಿ ತೊರೆದು ಬಿಜೆಪಿ ಸೇರಿದ ಸಂಸದ ಬಲಭದ್ರಪಕ್ಷಾಂತರ: ಬಿಜೆಡಿ ತೊರೆದು ಬಿಜೆಪಿ ಸೇರಿದ ಸಂಸದ ಬಲಭದ್ರ

ಮುದ್ರಣ ಮಾಧ್ಯಮದದಲ್ಲಿ ಜಾಹೀರಾತು ಪ್ರಕಟಿಸಲು ಅನುಮೋದನೆಯ ಅವಶ್ಯಕತೆ ಇಲ್ಲ. ಆದರೆ ಮತದಾನ ಅಂತ್ಯಗೊಳ್ಳುವ 48 ಗಂಟೆಗಳ ಮುಂಚಿತವಾಗಿ ಪ್ರಕಟಿಸುವ ಜಾಹೀರಾತಿಗೆ ಅನುಮೋದನೆ ಕಡ್ಡಾಯವಾಗಿರುತ್ತದೆ. ಏಪ್ರಿಲ್ 17 ಹಾಗೂ 18 ರಂದು ಪ್ರಕಟಿಸುವ ಜಾಹೀರಾತುಗಳಿಗೆ ಅನುಮೋದನೆ ಕಡ್ಡಾಯವಾಗಿರುತ್ತದೆ ಎಂದರು.

 ಮನವಿ ಮಾಡಿದ ಜಿಲ್ಲಾಧಿಕಾರಿಗಳು

ಮನವಿ ಮಾಡಿದ ಜಿಲ್ಲಾಧಿಕಾರಿಗಳು

ಚುನಾವಣಾ ಸಮಯದಲ್ಲಿ ಹಲವಾರು ಸುಳ್ಳು ಸುದ್ದಿಗಳು ಬರುತ್ತವೆ. ಅಂತಹ ಸುದ್ದಿಯನ್ನು ಬಿತ್ತರಿಸಬೇಡಿ ಹಾಗೂ ಒಂದೇ ಅಭ್ಯರ್ಥಿ, ಪಕ್ಷ ಕುರಿತ ಸುದ್ದಿಯನ್ನು ವರದಿ ಮಾಡುವಾಗ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಮನವಿ ಮಾಡಿದರು.

 ತಮಿಳುನಾಡು : 24 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ದಿನಕರನ್ ತಮಿಳುನಾಡು : 24 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ದಿನಕರನ್

 ಮತದಾನ ಪ್ರಕ್ರಿಯೆಯ ಸಾಧನಗಳು

ಮತದಾನ ಪ್ರಕ್ರಿಯೆಯ ಸಾಧನಗಳು

ಮತ ಚಲಾಯಿಸುವ ಬ್ಯಾಲೆಟ್ ಯುನಿಟ್, ಮತ ಸಂಗ್ರಹಣೆಯ ಕಂಟ್ರೋಲ್ ಯುನಿಟ್ ಹಾಗೂ ಮತ ಚಲಾವಣೆ ನಂತರ ಮತ ಹಾಕಿರುವ ಪ್ರಿಂಟ್ ಕಾಣಲು ವಿವಿಪ್ಯಾಟ್ ಯುನಿಟ್ ಈ ಮೂರು ಯುನಿಟ್ ಮತದಾನ ಪ್ರಕ್ರಿಯೆಯ ಪ್ರಮುಖ ಸಾಧನಗಳಾಗಿವೆ ಎಂದು ಮಾದರಿ ಮೂಲಕ ಮತದಾನ ಪ್ರಕ್ರಿಯೆಯನ್ನು ಇದೇ ಸಂದರ್ಭದಲ್ಲಿ ತೋರಿಸಿಕೊಡಲಾಯಿತು.

 ಕಾಂಗ್ರೆಸ್ 4ನೇ ಪಟ್ಟಿಯಲ್ಲಿ ಶಶಿ ತರೂರ್ ಸೇರಿ 27 ಅಭ್ಯರ್ಥಿಗಳು ಕಾಂಗ್ರೆಸ್ 4ನೇ ಪಟ್ಟಿಯಲ್ಲಿ ಶಶಿ ತರೂರ್ ಸೇರಿ 27 ಅಭ್ಯರ್ಥಿಗಳು

 ಯಂತ್ರದ ಮೇಲೆ ಅನುಮಾನ ಬೇಡ

ಯಂತ್ರದ ಮೇಲೆ ಅನುಮಾನ ಬೇಡ

ಬ್ಯಾಲೆಟ್ ಯುನಿಟ್ ಗೆ ಅಭ್ಯರ್ಥಿ ಹೆಸರು ಹಾಗೂ ಅವರ ಚಿಹ್ನೆ ಅಳವಡಿಸಬಹುದು ಹೊರತು ಬೇರೆ ಏನನ್ನೂ ಸಹ ಅಳವಡಿಕೆ ಮಾಡಲು ಸಾಧ್ಯವಿಲ್ಲ. ಯಾರೂ ಮತ ಯಂತ್ರದ ಮೇಲೆ ಅನುಮಾನ ಪಡುವುದು ಬೇಡ ಎಂದು ಜಿಲ್ಲಾ ಚುನಾವಣಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.

 ಮತ ಚಲಾಯಿಸುವ ಕುರಿತು ಅರಿವು

ಮತ ಚಲಾಯಿಸುವ ಕುರಿತು ಅರಿವು

ಸಾರ್ವಜನಿಕರಿಗೆ ಮತ ಚಲಾಯಿಸುವ ಕುರಿತು ಅರಿವು ಮೂಡಿಸಲು ಈಗಾಗಲೇ 191 ತಂಡಗಳ ರಚನೆ ಮಾಡಿ, ಹಲವಾರು ಕಾಲೇಜುಗಳಲ್ಲಿ, ಗ್ರಾಮ ಪಂಚಾಯತಿಗಳಲ್ಲಿ ಹಾಗೂ ಜನ ಸೇರುವ ಕಡೆ ಮಾದರಿ ಮೂಲಕ ಜನತೆಗೆ ಅರಿವು ಮೂಡಿಸಲಾಗುತ್ತಿದೆ. ರೈಲ್ವೆ ನಿಲ್ದಾಣ, ಮಾರುಕಟ್ಟೆ, ಇಂತಹ ಸ್ಥಳಗಳಲ್ಲಿ ಕೂಡ ಅರಿವು ಮೂಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಅಭಿರಾಮ್ ಜಿ.ಶಂಕರ್ ಹೇಳಿದರು.

English summary
Media certification and Surveillance committee has been created to monitor the news and ads published in the media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X