ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಮೇಯರ್ ಚುನಾವಣೆ; ಕುತೂಹಲ ಮೂಡಿಸಿದ ಜೆಡಿಎಸ್!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 10: ಮೈಸೂರು ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ನಡೆಯುವ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಮಾನ ಅಂತರ ಕಾಯ್ದುಕೊಳ್ಳಲು ಜೆಡಿಎಸ್ ತೀರ್ಮಾನ ಕೈಗೊಂಡಿದೆ.

ಭಾನುವಾರ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಬಗ್ಗೆ ಶಾಸಕ ಸಾ. ರಾ. ಮಹೇಶ್ ನೇತೃತ್ವದಲ್ಲಿ ಸಭೆ ನಡೆಯಿತು. ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಸಿದ್ದ ಎಂದ ಜೆಡಿಎಸ್ ಪಾಲಿಕೆ ಸದಸ್ಯರು ಹೇಳಿದ್ದು, ಚುನಾವಣೆ ಕುರಿತು ನಡೆದ 2ನೇ ಸಭೆಯಲ್ಲೂ ಒಮ್ಮತದ ನಿಲುವಿಗೆ ಪಕ್ಷ ಬಂದಿಲ್ಲ.

ಜೆಡಿಎಸ್ ಪಕ್ಷ ನಿಷ್ಠರ ಸಭೆಗೆ ನನಗೆ ಆಹ್ವಾನ ಬಂದಿಲ್ಲ, ಆದರೂ ಹೋಗುತ್ತೇನೆ ಜೆಡಿಎಸ್ ಪಕ್ಷ ನಿಷ್ಠರ ಸಭೆಗೆ ನನಗೆ ಆಹ್ವಾನ ಬಂದಿಲ್ಲ, ಆದರೂ ಹೋಗುತ್ತೇನೆ

ಸಭೆಯ ಬಳಿಕ ಮಾತನಾಡಿದ ಸಾ. ರಾ. ಮಹೇಶ್, "ವರಿಷ್ಠರ ಗಮನಕ್ಕೆ ತಂದು ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ. ನಾವು ಕಾಂಗ್ರೆಸ್-ಜೆಡಿಎಸ್ ನಡುವಿನ ಮೈತ್ರಿ ಬಗ್ಗೆ ಯಾವುದೇ ಮಾತುಕತೆ ನಡೆಸಿಲ್ಲ" ಎಂದು ಸ್ಪಷ್ಟಪಡಿಸಿದರು.

ಬಿಜೆಪಿಗೆ ಬೆಂಬಲ ವಿಚಾರ: ಜೆಡಿಎಸ್ ಸಂಘಟನಾ ಸಭೆಯಲ್ಲಿ ಅಸಮಾಧಾನ ಸ್ಪೋಟ!ಬಿಜೆಪಿಗೆ ಬೆಂಬಲ ವಿಚಾರ: ಜೆಡಿಎಸ್ ಸಂಘಟನಾ ಸಭೆಯಲ್ಲಿ ಅಸಮಾಧಾನ ಸ್ಪೋಟ!

Mayor Election JDS Will Maintain Equal Distance From Congress, BJP

"ಕಾಂಗ್ರೆಸ್‌ನ ತನ್ವೀರ್ ಸೇಠ್, ಬಿಜೆಪಿಯ ಪ್ರತಾಪ್ ಸಿಂಹ, ಹೆಚ್. ವಿ. ರಾಜೀವ್ ನಮ್ಮೊಟ್ಟಿಗೆ ಮಾತನಾಡಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದವರು ಅವರ ಅಭಿಪ್ರಾಯಗಳನ್ನು ಹೇಳಿದ್ದು, ಈ ಬಗ್ಗೆ ರಾಜ್ಯ ನಾಯಕರೊಟ್ಟಿಗೆ ಮಾತನಾಡುತ್ತೇನೆ" ಎಂದರು.

ವಿಶ್ವನಾಥ್‌ಗೆ ಸಚಿವ ಸ್ಥಾನ; ಸಾ. ರಾ. ಮಹೇಶ್‌ ಸರಣಿ ಟ್ವೀಟ್‌ ವಿಶ್ವನಾಥ್‌ಗೆ ಸಚಿವ ಸ್ಥಾನ; ಸಾ. ರಾ. ಮಹೇಶ್‌ ಸರಣಿ ಟ್ವೀಟ್‌

"ಸದ್ಯಕ್ಕೆ ಕಾಂಗ್ರೆಸ್, ಬಿಜೆಪಿ ಸಹವಾಸ ಸಾಕಾಗಿದೆ. ಆದ್ದರಿಂದ, ವಿರೋಧ ಪಕ್ಷವಾಗಿಯೇ ಇರೋದು ಒಳಿತು ಎಂದು ನಮ್ಮ ಸದಸ್ಯರು ಹೇಳುತ್ತಿದ್ದಾರೆ. ಚುನಾವಣೆ ದಿನಾಂಕ ಮತ್ತು ಮೀಸಲಾತಿ ಪ್ರಕಟವಾದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ" ಎಂದು ಹೇಳಿದರು.

65 ಸದಸ್ಯ ಬಲದ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 21, ಕಾಂಗ್ರೆಸ್ 19, ಜೆಡಿಎಸ್ 18 ಸ್ಥಾನಗಳನ್ನು ಹೊಂದಿವೆ. ಬಿಎಸ್ಪಿ 1, 5 ಪಕ್ಷೇತರರು ಗೆದ್ದಿದ್ದಾರೆ. ಮೇಯರ್ ಆಗಲು ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.

2020ರ ಜನವರಿಯಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಜೆಡಿಎಸ್‌ಗೆ ಮೇಯರ್ ಪಟ್ಟವನ್ನು ಕಾಂಗ್ರೆಸ್ ಬಿಟ್ಟುಕೊಟ್ಟಿತ್ತು. ಆದರೆ, ಈಗ ಎರಡೂ ಪಕ್ಷಗಳ ನಡುವಿನ ಸಂಬಂಧ ಹಳಸಿದೆ.

English summary
JD(S) leader Sa. Ra. Mahesh said that we will keep equal distance from both the Congress and the BJP. We will wait till election date announced for Mysuru city corporation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X