ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಅಂಗಾಂಗ ಕಸಿಗೆ ಒಳಗಾಗಿದ್ದ ಮಹಿಳೆಗೆ ಹೆರಿಗೆ; ದೇಶದಲ್ಲೇ ಮೊದಲು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 15: ಅಂಗಗಳ ಕಸಿಗೆ ಒಳಗಾಗಿದ್ದ 35 ವರ್ಷದ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದು, ದೇಶದಲ್ಲಿ ಇಂತಹ ಪ್ರಕರಣ ಇದೇ ಮೊದಲಾಗಿದೆ.

ಮಂಗಳವಾರದಂದು ಮೈಸೂರು ನಗರದ ಅಪೊಲೋ ಬಿಜಿಎಸ್ ಆಸ್ಪತ್ರೆಯಲ್ಲಿ ಮಹಿಳೆಗೆ ಹೆರಿಗೆ ಆಗಿದ್ದು, ಈ ಪ್ರಕರಣ ಅಂಗಾಂಗ ವೈಫಲ್ಯದಿಂದ ಬಳಲುವವರಿಗೆ ಭರವಸೆ ಮೂಡಿಸಿದೆ.

Mysuru: Maternity For A Woman Undergone Organ Transplantation; First Case In The Country

ಕ್ಲಿನಿಕಲ್ ಪ್ರಯೋಗ: ಮೈಸೂರಿನಲ್ಲಿ ಕೋವಾಕ್ಸಿನ್ ಲಸಿಕೆ ಪಡೆದ ಮಕ್ಕಳು ಸುರಕ್ಷಿತಕ್ಲಿನಿಕಲ್ ಪ್ರಯೋಗ: ಮೈಸೂರಿನಲ್ಲಿ ಕೋವಾಕ್ಸಿನ್ ಲಸಿಕೆ ಪಡೆದ ಮಕ್ಕಳು ಸುರಕ್ಷಿತ

ಬಾಲ್ಯದಿಂದಲೇ ಮಧುಮೇಹಕ್ಕೆ ಒಳಗಾಗಿದ್ದ ಮಹಿಳೆ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (ಸಿಕೆಡಿ)ಯಿಂದ ಬಳಲುತ್ತಿದ್ದರು. ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಇವರಿಗೆ 3 ವರ್ಷದ ಹಿಂದೆ ಏಕಕಾಲಕ್ಕೆ ಮೇದೋಜಿರಕ ಹಾಗೂ ಮೂತ್ರಪಿಂಡಗಳನ್ನು ಕಸಿ (ಎಸ್ಪಿಕೆಟಿ) ಮಾಡಲಾಗಿತ್ತು.

Mysuru: Maternity For A Woman Undergone Organ Transplantation; First Case In The Country

"ಇಂದು ಯಶಸ್ವಿಯಾಗಿ ಹೆರಿಗೆಯಾಗಿದ್ದು, ಇದೀಗ ಮಗುವಿಗೆ ಬೆಳಕು ಎಂದು ಹೆಸರಿಡಲಾಗಿದೆ. ಕಸಿ ಶಸ್ತ್ರ ಚಿಕಿತ್ಸಕ ಕನ್ಸಲ್ಟೆಂಟ್ ಡಾ.ಸುರೇಶ್ ರಾಘವಯ್ಯ, ಸ್ತ್ರೀ ರೋಗ ತಜ್ಞರಾದ ಡಾ.ಬಿ.ಪಿ. ಅಂಜಲಿ, ಅರವಳಿಕೆ ತಜ್ಞರಾದ ಡಾ.ಅಂದಿತಾ ಮುಖರ್ಜಿ ಈ ಚಿಕಿತ್ಸಾ ತಂಡದಲ್ಲಿದ್ದರು,'' ಎಂದು ಆಸ್ಪತ್ರೆಯ ಆಡಳಿತ ವಿಭಾಗದ ಉಪಾಧ್ಯಕ್ಷ ಎನ್.ಜಿ. ಭರತೇಶ್ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary
A 35-year-old woman who has undergone an organ transplant has given birth to a baby boy, the only such case in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X