ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಇಂದು, ನಾಳೆ ಪ್ರಾದೇಶಿಕ ಬೃಹತ್ ಉದ್ಯೋಗ ಮೇಳ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 19: ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಜಿಲ್ಲಾಡಳಿತದ ಸಹಯೋಗದಲ್ಲಿ ಮೈಸೂರು, ಮಂಡ್ಯ ಹಾಗೂ ಮಡಿಕೇರಿ ಮೂರು ಜಿಲ್ಲೆಗಳ ಸಂಯುಕ್ತಾಶ್ರಯದಲ್ಲಿ ಇಂದು ಮತ್ತು ನಾಳೆ ಪ್ರಾದೇಶಿಕ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಿದೆ.

ಉದ್ಯೋಗ ಮೇಳದಲ್ಲಿ 150 ಮಳಿಗೆಗಳನ್ನು ತೆರೆಯಲಾಗಿದೆ. ಆನ್ ಲೈನ್ ಮೂಲಕ 5,800 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿರುವುದಾಗಿ ಜಿಲ್ಲಾ ಪಂಚಾಯತ್ ಸಿಇಒ ಕೆ.ಜ್ಯೋತಿ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿಗಳ ಕಚೇರಿ ಹಿಂಭಾಗದಲ್ಲಿರುವ ಶ್ರೀ ಜಯಚಾಮರಾಜೇಂದ್ರ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಫೆ.19ರ ಬುಧವಾರ ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಉದ್ಯೋಗ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಡಿಸಿಎಂ, ಕೌಶಲಾಭಿವೃದ್ಧಿ ಸಚಿವ ಡಾ.ಅಶ್ವತ್ಥ್ ನಾರಾಯಣ, ಸಚಿವರಾದ ಆರ್.ಆಶೋಕ್, ನಾರಾಯಣಗೌಡ ಸೇರಿದಂತೆ ಹಲವು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ. ಫೆ.20ರಂದು ಉದ್ಯೋಗಾಂಕ್ಷಿಗಳೊಂದಿಗೆ ಉದ್ಯೋಗಕ್ಕೆ ಸಂಬಂಧಿಸಿ ಕೌಶಲಗಳ ಬಗ್ಗೆ ಸಂವಾದ ನಡೆಯಲಿದ್ದು, ಅಂದು ಸಂಜೆ 4ಗಂಟೆಗೆ ಸಮಾರೋಪ ನಡೆಯಲಿದೆ.

ಕೆಎಸ್ಆರ್‌ಟಿಸಿ ನೇಮಕಾತಿ; 3745 ಹುದ್ದೆಗಳ ಭರ್ತಿ ಕೆಎಸ್ಆರ್‌ಟಿಸಿ ನೇಮಕಾತಿ; 3745 ಹುದ್ದೆಗಳ ಭರ್ತಿ

ವಿವಿಧ 124 ಕಂಪನಿ ಭಾಗಿ: ಮೈಸೂರು, ಬೆಂಗಳೂರು, ಮಂಡ್ಯ, ಕೊಡಗು ಹಾಗೂ ಮತ್ತಿತರ ಜಿಲ್ಲೆಗಳ 124 ಕಂಪನಿಗಳು ಈ ಮೇಳದಲ್ಲಿ ಭಾಗವಹಿಸಲು ಆನ್ಲೈನ್ ಮೂಲಕ ನೋಂದಾಯಿಸಿಕೊಂಡಿದ್ದಾರೆ. ಪ್ರಮುಖವಾಗಿ ಇನ್ಫೋಸಿಸ್, ವಿಪ್ರೋ, ಐ.ಟಿ-ಬಿ.ಟಿ, ಆಟೋಮೊಬೈಲ್, ಮೆಕ್ಯಾನಿಕಲ್, ಕನ್ಸ್ಟ್ರಕ್ಷನ್, ಮಾರ್ಕೆಟಿಂಗ್, ಸೇಲ್ಸ್ ಅಂಡ್ ರೀಟೇಲ್, ಟೆಲಿಕಾಂ, ಬಿಪಿಓ, ಟೆಕ್ಸ್ ಟೈಲ್ಸ್, ಬ್ಯಾಂಕಿಂಗ್, ಫೈನಾನ್ಸ್, ಇನ್ಸುರೆನ್ಸ್, ಹಾಸ್ಪಿಟಲ್, ಫಾರ್ಮಸಿಟಿಕಲ್, ಹೆಲ್ತ್ ಕೇರ್, ಮ್ಯಾನುಫ್ಯಾಕ್ಚರಿಂಗ್, ಟ್ರಾನ್ಸ್ ಪೋರ್ಟ್ ಸರ್ವೀಸಸ್, ಆಹಾರ ಸಂಸ್ಕರಣೆ, ಹೋಟೆಲ್ ನಿರ್ವಹಣೆ, ಗಾಮೆಂಟ್ಸ್, ಸೆಕ್ಯುರಿಟಿ ಸೇರಿದಂತೆ ವಿವಿಧ ವಿಭಾಗಗಳ ಪ್ರತಿಷ್ಠಿತ ಕಂಪನಿಗಳು ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸುವ ಅಭ್ಯರ್ಥಿಗಳಿಗೆ ಅರ್ಹತೆಗೆ ಅನುಗುಣವಾಗಿ ಆಯಾ ಕೌಂಟರ್ ಕಂಪನಿಗೆ ತೆರಳುವ ಮಾರ್ಗಸೂಚಿಯ ಮಾಡಲಾಗಿದೆ.

Mass Job Fair In Mysuru On Feb 19 And Feb 20

7ನೇ ತರಗತಿಯಿಂದ ಉನ್ನತ ಶ್ರೇಣಿ ವಿದ್ಯಾಭ್ಯಾಸ ಹೊಂದಿರುವ ಎಲ್ಲಾ ಯುವಕ-ಯುವತಿಯರು ಉದ್ಯೋಗಮೇಳದಲ್ಲಿ ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳಬಹುದು. ಏಳನೇ ತರಗತಿ ಪಾಸ್, ಎಸ್ ಎಸ್ ಎಲ್ ಸಿ ಪಾಸ್/ಫೇಲ್, ಪಿಯುಸಿ,ಐ.ಟಿ.ಐ, ಯಾವುದೇ ಪದವಿ ಮತ್ತು ಡಿಪ್ಲೊಮಾ ಹಾಗೂ ಬಿ.ಇ (ಎಲ್ಲಾ ಟ್ರೇಡ್ )ಹಾಗೂ ನರ್ಸಿಂಗ್ ಹಾಗೂ ಡಿಪ್ಲೊಮಾ ಪ್ಯಾರಾಮೆಡಿಕಲ್ ಪಾಸ್, ಸ್ನಾತಕೋತ್ತರ ಪದವಿಯಾದ ಉದ್ಯೋಗಾಕಾಂಕ್ಷಿಗಳು ನೇರವಾಗಿ ಉದ್ಯೋಗ ಮೇಳದಲ್ಲಿ ಹಾಜರಾಗಬಹುದು. ವಿದ್ಯಾರ್ಹತೆಗೆ ತಕ್ಕ ಉದ್ಯೋಗಗಳ ಇಂತಹ ಮಳಿಗೆಗೆ ಹೋಗುವಂತಹ ಮಾಹಿತಿ ಲೀಸ್ಟ್ ನೀಡಲಾಗುತ್ತದೆ.

ಕೆಪಿಸಿಎಲ್‌ನಲ್ಲಿ ಕೆಲಸ ಖಾಲಿ ಇದೆ; ರಾಯಚೂರಿನಲ್ಲಿ ಕೆಲಸ ಕೆಪಿಸಿಎಲ್‌ನಲ್ಲಿ ಕೆಲಸ ಖಾಲಿ ಇದೆ; ರಾಯಚೂರಿನಲ್ಲಿ ಕೆಲಸ

ಉದ್ಯಾಂಕ್ಷಿಗಳ ವಯೋಮಿತಿ: ಉದ್ಯೋಗ ಮೇಳದಲ್ಲಿ ಭಾಗವಹಿಸುವ ಉದ್ಯೋಗಾಕಾಂಕ್ಷಿಗಳ ವಯಸ್ಸು 18 ರಿಂದ 35 ವರ್ಷದ ಒಳಗಿರುವ ಪುರುಷರು ಮತ್ತು ಮಹಿಳಾ ಅಭ್ಯರ್ಥಿಗಳು ಹಾಗೂ ಅಂಗವಿಕಲ ಅಭ್ಯರ್ಥಿಗಳು ಭಾಗವಹಿಸಿ ಉಪಯೋಗ ಪಡೆಯಬಹುದು. ಮೇಳದ ಮಾಹಿತಿ ಸಂಪರ್ಕ: 0821-2970815 (ಮೈಸೂರು), 08232-295010 (ಮಂಡ್ಯ), 08272-225851 (ಕೊಡಗು) ಸಂಪರ್ಕಿಸಬಹುದು.

English summary
The Department of Skills Development, Entrepreneurship and Livelihoods, in collaboration with three districts of Mysuru, Mandya and Madikeri organized a regional Job fair today and tomorrow in mysuru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X