ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಮದುವೆಗೆ ಕಾರಣವಾದ ಟಿಕ್ ಟಾಕ್ ಸ್ನೇಹ

|
Google Oneindia Kannada News

ಮೈಸೂರು, ಜೂನ್ 21 : ಟಿಕ್ ಟಾಕ್ ನಿಂದ ಹೀಗಾಯಿತು, ಹಾಗಾಯಿತು ಎಂದು ನಾನಾ ಸುದ್ದಿಗಳು ಈ ಟಿಕ್‌ ಟಾಕ್ ಹಿಂದೆ ಥಳುಕು ಹಾಕಿಕೊಂಡಿವೆ. ಅದೇ ರೀತಿ ಇಲ್ಲೂ ಒಂದು ಸುದ್ದಿಯಿದೆ. ಟಿಕ್ ಟಾಕ್ ನಲ್ಲಿ ಪರಿಚಯವಾದ ಯುವ ಜೋಡಿ ಪ್ರೇಮ ಪಾಶಕ್ಕೆ ಬಿದ್ದು ಅಂತರ್‌ಜಾತಿ ವಿವಾಹ ಮಾಡಿಕೊಂಡ ಘಟನೆ ಮೈಸೂರಿನ ಹುಣಸೂರಿನಲ್ಲಿ ನಡೆದಿದೆ.

ಬಾಗಲಕೋಟೆಯ ಪ್ರಿಯಾಂಕ ಹಾಗೂ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಉಯಿಗೊಂಡನಹಳ್ಳಿಯ ಕುಮಾರ್‌ ಟಿಕ್‌ ಟಾಕ್ ಅಂತರಜಾತಿ ವಿವಾಹವಾದ ದಂಪತಿ.

 ಟಿಕ್‌ಟಾಕ್ ಮಾಡಿದ್ರೆ ಮೊಬೈಲ್‌ ಒಡೆದ್ಹಾಕ್ತೀನಿ ಅಂದಿದ್ದಕ್ಕೆ ಮಹಿಳೆ ಆತ್ಮಹತ್ಯೆ ಟಿಕ್‌ಟಾಕ್ ಮಾಡಿದ್ರೆ ಮೊಬೈಲ್‌ ಒಡೆದ್ಹಾಕ್ತೀನಿ ಅಂದಿದ್ದಕ್ಕೆ ಮಹಿಳೆ ಆತ್ಮಹತ್ಯೆ

ಒಂದು ವರ್ಷದ ಹಿಂದೆ ಕುಮಾರ್‌ನ ಹಾಡುಗಳು ಟಿಕ್‌ ಟಾಕ್ ‌ನಲ್ಲಿ ಹರಿದಾಡುತ್ತಿದ್ದವು. ಇದನ್ನು ಲೈಕ್ ಮಾಡಿದ್ದ ಪ್ರಿಯಾಂಕ ನಂತರ ಕುಮಾರ್ ನಂಬರ್‌ ಪಡೆದು ಸಂಪರ್ಕಿಸಿದ್ದರು. ಈ ವೇಳೆ ಕುಮಾರ್‌ ಹಾಗೂ ಪ್ರಿಯಾಂಕ ನಡುವೆ ಪ್ರೇಮಾಂಕುರವಾಗಿತ್ತು. ಯುವತಿಯ ತಂದೆ-ತಾಯಿ ವೃದ್ಧರಾಗಿದ್ದಾರೆ. ಕುಮಾರ್‌ ಕುಟುಂಬದವರು ಮದುವೆಗೆ ಸಮ್ಮತಿಸುತ್ತಿದ್ದಂತೆ ಪ್ರಿಯಾಂಕ ಯುವಕನ ಮನೆಗೆ ನೇರವಾಗಿ ಬಂದಿದ್ದರು.

Marriage happened in Mysuru with tick tock friend

ಕುಮಾರ್‌ ಕುಟುಂಬದವರು ದಸಂಸ ಮುಖಂಡರ ನೆರವು ಪಡೆದು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಮದುವೆ ನೋಂದಾಯಿಸಿದರು. ಕುಮಾರ್‌-ಪ್ರಿಯಾಂಕ ಮದುವೆಯಾದರು. ನೆರೆದಿದ್ದವರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು.

English summary
Marriage happened in Mysuru with tikc tock friend. Inter caste boy and girl married while connecting Tick tock app.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X