ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: ಟೊಮೆಟೊ ಒಳಗೆ ಗಾಂಜಾ ಸಾಗಾಟ; ನಾಲ್ವರ ಬಂಧನ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 30: ಟೊಮೆಟೊ ಒಳಗೆ ಗಾಂಜಾ ಸಾಗಿಸುತ್ತಿದ್ದ ತರಕಾರಿ ವಾಹನವನ್ನು ಮೈಸೂರು ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.

ತರಕಾರಿ ಸಾಗಿಸುವ ವಾಹನದಲ್ಲಿ ಟೊಮೆಟೊ ಕ್ರೇಟ್ ಒಳಗೆ ಗಾಂಜಾ ತುಂಬಿಕೊಂಡು ಆರೋಪಿಗಳು ಹೋಗುತ್ತಿದ್ದ ನಾಲ್ವರು ಅಂತಾರಾಜ್ಯ ಗಾಂಜಾ ಸಾಗಣೆ ಆರೋಪಿಗಳ ಬಂಧನ ಮಾಡಲಾಗಿದೆ.

ಮೈಸೂರಿನಲ್ಲಿ ಹಣದ ಆಸೆ ತೋರಿಸಿ ಸಾರ್ವಜನಿಕರಿಗೆ ವಂಚನೆ: ನಾಲ್ವರ ಬಂಧನಮೈಸೂರಿನಲ್ಲಿ ಹಣದ ಆಸೆ ತೋರಿಸಿ ಸಾರ್ವಜನಿಕರಿಗೆ ವಂಚನೆ: ನಾಲ್ವರ ಬಂಧನ

ಆಂಧ್ರಪ್ರದೇಶದಿಂದ ಕರ್ನಾಟಕದ ಮೂಲಕ ಕೇರಳ ರಾಜ್ಯಕ್ಕೆ ಆರೋಪಿಗಳು ಗಾಂಜಾ ಸಾಗಿಸುತ್ತಿದ್ದರೆಂದು ತಿಳಿದುಬಂದಿದೆ. ಗೂಡ್ಸ್ ಆಟೋದಲ್ಲಿ ಟೊಮೊಟೊ ಕ್ರೇಟ್ ಗಳ ಮಧ್ಯೆ ಗಾಂಜಾ ಸಾಗಿಸುತ್ತಿದ್ದರು.

Mysuru: Marijuana Trafficking Inside Tomato; Arrest Of Four People

ಕೇರಳ ಮೂಲದ ಮಹಮ್ಮದ್ ಶಾಫಿ, ಸಲೀಂ, ಪಫಿ, ಇಬ್ರಾಹಿಂ ಕುಟ್ಟಿ ಎಂಬುವವರನ್ನು ಬಂಧಿಸಿ, 86 ಕೆ.ಜಿ 300 ಗ್ರಾಂ ಗಾಂಜಾ ಹಾಗೂ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಮೈಸೂರು ಜಿಲ್ಲಾ ಪೊಲೀಸರು, ಮೈಸೂರು-ನಂಜನಗೂಡು ಹೆದ್ದಾರಿಯಲ್ಲಿರುವ ಏರ್‌ಪೋರ್ಟ್ ಬಳಿ ನಾಲ್ವರು ಆರೋಪಿಗಳು ಬಲೆಗೆ ಬಿದ್ದಿದ್ದಾರೆ.

ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಹೇಳಿದ್ದಾರೆ.

ಎರಡು ದಿನಗಳ ಹಿಂದೆ ಕೋಲಾರ ಜಿಲ್ಲೆ ಕೆಜಿಎಫ್ ನಗರದ ಕೃಷ್ಣಗಿರಿ ಲೈನ್ ನ ಮನೆಯೊಂದರಲ್ಲಿ 190 ಕೆ.ಜಿ ತೂಕದ ಗಾಂಜಾ ಪತ್ತೆ ಮಾಡಲಾಗಿತ್ತು. ಕೆಜಿಎಫ್ ನ ರಾಬರ್ಟ್ ಸನ್ ಪೇಟೆ ಪೊಲೀಸರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು

English summary
The Mysuru District Police have seized a vegetable vehicle that was transporting marijuana inside the tomatoes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X