ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಹಣ್ಣುಗಳ ರಾಜನ ಕಾರುಬಾರು ಬಲು ಜೋರು

ಇಲ್ಲಿ ಬಂದರೆ ಯಾವ ಹಣ್ಣು ಖರೀದಿಸಬೇಕು, ಯಾವುದನ್ನು ಬಿಡಬೇಕು ಎಂಬ ಗೊಂದಲ. ಹಾಗಿರುತ್ತದೆ, ಮೈಸೂರಿನ ಕರ್ಜನ್ ಪಾರ್ಕ್ ನಲ್ಲಿ ನಡೆಯುವ ಮಾವು ಮತ್ತು ಹಲಸಿನ ಮೇಳ!

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಮೇ 19: ಇಲ್ಲಿ ಬಂದರೆ ಯಾವ ಹಣ್ಣು ಖರೀದಿಸಬೇಕು, ಯಾವುದನ್ನು ಬಿಡಬೇಕು ಎಂಬ ಗೊಂದಲ. ಹಾಗಿರುತ್ತದೆ, ಮೈಸೂರಿನ ಕರ್ಜನ್ ಪಾರ್ಕ್ ನಲ್ಲಿ ನಡೆಯುವ ಮಾವು ಮತ್ತು ಹಲಸಿನ ಮೇಳ!
ಹೌದು, ಬೆಳೆದವರಿಗೂ ಲಾಭ ತಂದುಕೊಡುವ ಉದ್ದೇಶದಿಂದ ಆರಂಭವಾಗುತ್ತಿರುವ ಒಂದು ವಾರಗಳ ಕಾಲದ ಮೇಳ ಮೇ 23 ರಂದು ಆರಂಭಗೊಳ್ಳಲಿದೆ. ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ ಹಾಗೂ ಮೈಸೂರು ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಮೇಳ ನಡೆಯುತ್ತಿದೆ.

ಮೈಸೂರು ಜಿಲ್ಲೆಯಲ್ಲಿ ಮಾವು ಒಂದು ಪ್ರಮುಖ ಬೆಳೆಯಾಗಿದ್ದು, ರತ್ನಗಿರಿ ಅಲ್ಫಾನ್ಸೊ, ಬಾದಾಮಿ, ರಸಪುರಿ, ಮಲ್ಲಿಕಾ, ಸೆಂಧೂರ, ಮಲಗೋವಾ, ತೋತಾಪುರಿ, ನೀಲಂ, ದಶೇರಿ ಮುಂತಾದ ತಳಿಗಳನ್ನು ಸುಮಾರು 4202 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಮಾವು ಮತ್ತು ಹಲಸು ಬೆಳೆಯುತ್ತಿರುವ ರೈತರಿಗೆ ಉತ್ತಮ ಬೆಲೆ ಸಿಗಲಿ ಎಂಬ ಉದ್ದೇಶದಿಂದ ಮಾವು ಮತ್ತು ಹಲಸು ಮೇಳವನ್ನು ಆಯೋಜಿಸಲಾಗಿದ್ದು, ನೇರವಾಗಿ ರೈತರೇ ಮಾರಟ ಮಾಡುವ ಅವಕಾಶ ಕಲ್ಪಿಸಲಾಗಿದೆ.[ಹಣ್ಣುಹಂಪಲು ತಿಂದು ಬೊಜ್ಜನ್ನು ಜಜ್ಜಿ ಪುಡಿಪುಡಿ ಮಾಡಿ!]

ಆರೋಗ್ಯಕ್ಕೆ ಮೊದಲ ಆದ್ಯತೆ

ಆರೋಗ್ಯಕ್ಕೆ ಮೊದಲ ಆದ್ಯತೆ

ಮಾವು-ಹಲಸು ಪ್ರಿಯರ ಆರೋಗ್ಯದ ಹಿತದೃಷ್ಟಿಯಿಂದ ರಾಸಾಯನಿಕ ಮುಕ್ತ, ಮಾವು ಮತ್ತು ಹಲಸಿನ ಮೇಳವನ್ನು ಈ ಬಾರಿ ಹಮ್ಮಿಕೊಂಡಿರುವುದು ಮತ್ತೊಂದು ವಿಶೇಷ. ಬಾಯಿಯಲ್ಲಿ ನೀರೂರಿಸುವ ತರಹೇವಾರಿ ಮಾವಿನ ಹಣ್ಣುಗಳು ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ.

ತರಹೇವಾರಿ ಹಣ್ಣು, ಕೈಗೆಟುಕುವ ಬೆಲೆ

ತರಹೇವಾರಿ ಹಣ್ಣು, ಕೈಗೆಟುಕುವ ಬೆಲೆ

ಮಲಗೋವ, ಬಾದಾಮಿ, ರಸಪುರಿ, ಮಲ್ಲಿಕಾ ಹಣ್ಣುಗಳು ಪ್ರತಿ ಕೆಜಿಗೆ 70-60 ರೂಪಾಯಿಗಳಾದರೆ, ತೋತಾಪುರಿ ಹಾಗೂ ಸೆಂಧೂರ ಮಾವು ಕೇವಲ 35 ರಿಂದ 25 ರೂಪಾಯಿ ಪ್ರತಿ ಕೆ.ಜಿಗೆ ಲಭ್ಯವಿದೆ.[ಕದ್ರಿಯಲ್ಲಿ ಮೇ 19 -25 ರವರೆಗೆ ಮಾವು ಮತ್ತು ಹಲಸು ಮೇಳ]

ಇಲ್ಲಿದೆ 30 ಮಳಿಗೆಗಳು

ಇಲ್ಲಿದೆ 30 ಮಳಿಗೆಗಳು

ಮೇಳದಲ್ಲಿ 30ಕ್ಕೂ ಹೆಚ್ಚು ಮಳಿಗೆ ತೆರೆಯಲಾದೆ. ನೋಂದಾಯಿತ ರೈತರಿಗೆ ಮಳಿಗೆ ಕೊಟ್ಟಿದ್ದು, ನೈಸರ್ಗಿಕವಾಗಿ ಮಾಗಿಸಿದ ಅಂದಾಜು 100 ಟನ್ ಹಣ್ಣು ಮಾರಾಟ ಮಾಡುವ ಗುರಿ ಹೊಂದಲಾಗಿದೆ. ಈ ಬಾರಿ ಮೂರು ಬದಿಯಲ್ಲಿ ಮಳಿಗೆ ತೆರದೆದ್ದು ಎಲ್ಲರಿಗೂ ವಿದ್ಯುತ್ ದೀಪ, ಮಳೆ ಬಂದರೂ ಸಹ ಹಣ್ಣಿಗೆ ತೊಂದರೆಯಾಗದಂತೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.[ಮಾವು ಬೆಳೆಗಾರರ ಪಾಲಿಗೆ ಕಹಿಯಾದ ಹಣ್ಣಿನ ರಾಜ!]

ಬಾಯಲ್ಲಿ ನೀರೂರಿಸುವ ತಿಂಡಿಗಳು

ಬಾಯಲ್ಲಿ ನೀರೂರಿಸುವ ತಿಂಡಿಗಳು

ಬಾಗಲಕೋಟೆಯ ತೋಟಗಾರಿಕಾ ವಿವಿಯ ವಿದ್ಯಾರ್ಥಿಗಳು ಆಹಾರ ಸಂಸ್ಕರಣೆಯಲ್ಲಿ ನಡೆಸಿದ ವಿನೂತನ ಪ್ರಯೋಗಗಳಾದ ಮಾವಿನ ಹಣ್ಣಿನ ಜ್ಯೂಸ್, ಸ್ಕೌಷ್, ತೊಕ್ಕು, ಚಟ್ನಿಪುಡಿ, ಜಾಮ್ ಜನಾಕರ್ಷಣೆಯ ಕೇಂದ್ರಬಿಂದುವಾಗಿದೆ. ಮಾವಿನ ಕಾಯಿಯ ಉಪ್ಪಿನ ಕಾಯಿ, ಜೊತೆಗೆ ಖಾರ ಬಿದ್ದ ಹಣ್ಣು ಹಾಗೂ ಕಾಯಿಯ ಹೋಳು ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ.[ಕೊಪ್ಪಳದಲ್ಲಿ ಮೇ 9ರಿಂದ ಲಗ್ಗೆಯಿಡಲಿದ್ದಾನೆ ಹಣ್ಣುಗಳ ರಾಜ!]

ಮೇಳದಲ್ಲಿ ರಾರಾಜಿಸುತ್ತಿದೆ ಹಲಸಿನ ಹಣ್ಣು

ಮೇಳದಲ್ಲಿ ರಾರಾಜಿಸುತ್ತಿದೆ ಹಲಸಿನ ಹಣ್ಣು

ಹಲಸಿನ ಮಳಿಗೆಯಲ್ಲಿ ಪ್ರತಿ ಕೆಜಿಗೆ 20 ರೂ ನಂತೆ ಕೊಬ್ಬರಿ, ಚಂದ್ರ ಬಂಗಾರ, ಕೆಂಪು ಮತ್ತು ಹಳದಿ ರುದ್ರಾಕ್ಷಿ ಸೇರಿದಂತೆ 50ಕ್ಕೂ ಹೆಚ್ಚು ಬಗೆಯ ಹಲಸಿನ ಮೂಟೆಗಳು ಲಭ್ಯವಿದೆ. ಈ ಬಾರಿ ಹಲಸಿನ ಇಳುವರಿ ಕಡಿಮೆಯಾಗಿದ್ದು, ಹಲಸಿನ ಹಪ್ಪಳ, ಸಂಡಿಗೆ, ಚಿಪ್ಸ್ ಲಭ್ಯವಿಲ್ಲದೇ ಹಲಸು ಪ್ರಿಯರಿಗೆ ತುಸು ನಿರಾಶೆ ಮೂಡಿಸಿದೆ.[ಆಹಾ ಎಂಥಾ ಮಾವು, ಹಲಸು...ಬನ್ರೀ ಲಾಲ್ ಬಾಗ್ ಗೆ, ತಿನ್ರೀ ಮನಸಾರೆ]

English summary
Mango fair will be taking place in Karjan Park Mysuru for one week, from 23rd of May. Varieties of mangos will be available in the fair.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X