ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಥರಾವರಿ ಮಾವುಗಳ ದರ್ಬಾರ್

|
Google Oneindia Kannada News

ಮೈಸೂರು, ಮೇ 25: ಘಮ್ಮನೆ ಹೊಮ್ಮುವ ಪರಿಮಳ, ಆಕರ್ಷಕ ಬಣ್ಣ, ಮೈಮರೆಸುವ ಸ್ವಾದದಿಂದ ಸೆಳೆಯುವ ಮಾವಿನ ಹಣ್ಣುಗಳೆಂದರೆ ಯಾರಿಗಿಷ್ಟವಿಲ್ಲ? ಮಾವಿನ ಸೀಸನ್ ಆರಂಭಗೊಳ್ಳುತ್ತಿದ್ದಂತೆ ಥರಾವರಿ ತಳಿಯ ಮಾವಿನ ಹಣ್ಣುಗಳನ್ನು ಗ್ರಾಹಕರಿಗೆ ಪರಿಚಯಿಸಿ ಜಿಹ್ವೆ ತಣಿಸಲೆಂದೇ ನಡೆಯುವ ಮೇಳಗಳಿಗೂ ಕಮ್ಮಿಯಿಲ್ಲ. ಅದೇ ರೀತಿ ಮೈಸೂರಿನಲ್ಲೂ ಮಾವಿನ ಮೇಳವೊಂದು ನಡೆಯುತ್ತಿದೆ. ಫಲ ಪ್ರೇಮಿಗಳ ನಾಲಿಗೆ ತಣಿಸಲು ಈ ಮೇಳ ಆರಂಭಗೊಂಡಿದೆ.

ಬೆಂಗಳೂರಿಗೆ ಅಂತೂ ಲಗ್ಗೆ ಇಟ್ಟ ಮಾವು, ಮೇ 30ರಿಂದ ಮಾವು ಮೇಳ ಬೆಂಗಳೂರಿಗೆ ಅಂತೂ ಲಗ್ಗೆ ಇಟ್ಟ ಮಾವು, ಮೇ 30ರಿಂದ ಮಾವು ಮೇಳ

ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತಿ ವತಿಯಿಂದ ಮೇಳವನ್ನು ನಗರದ ಕರ್ಜನ್ ‌ಪಾರ್ಕಿನಲ್ಲಿ ನಡೆಸಲಾಗುತ್ತಿದೆ. ಮೇಳಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಿ ಜ್ಯೋತಿ ಚಾಲನೆ ನೀಡಿದ್ದು, ರಾಜ್ಯದ ಹಲವು ಭಾಗಗಳಿಂದ ಬಂದ ರೈತರು ತಾವು ಬೆಳೆದ ಮಾವಿನ ತಳಿಗಳನ್ನು ಪ್ರದರ್ಶಿಸುತ್ತಿದ್ದಾರೆ.

ಕೊಪ್ಪಳ : ಮಾವು ಮೇಳ, 100ಕ್ಕೂ ಅಧಿಕ ಬಗೆಯ ಹಣ್ಣು ಸವಿಯಿರಿ ಕೊಪ್ಪಳ : ಮಾವು ಮೇಳ, 100ಕ್ಕೂ ಅಧಿಕ ಬಗೆಯ ಹಣ್ಣು ಸವಿಯಿರಿ

ವಿವಿಧ ತಳಿಗಳಾದ ಬಾದಾಮಿ, ಬಂಗನಪಲ್ಲಿ, ರಸಪುರಿ, ಮಲ್ಲಿಕಾ, ಸೇಂದೂರ, ಮಲಗೋಬಾ, ತೋತಾಪುರಿ, ನೀಲಂ, ಆಮ್ರಪಾಲಿ, ಕೇರ್ಸ, ದಶೇರಿ ಹಣ್ಣುಗಳನ್ನು ಇಲ್ಲಿ ನೋಡುವುದೇ ಸೊಗಸು. 32 ಬಗೆಯ ಮಾವಿನ ತಳಿಗಳೊಂದಿಗೆ ನಾಲ್ಕು ಬಗೆಯ ಹಲಸಿನ ಹಣ್ಣುಗಳು ಗ್ರಾಹಕರನ್ನು ಮೋಡಿ ಮಾಡಿದವು.

Mango and jackfruit mela started in Mysuru

ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳಿಗೆ ವಿಶೇಷ ಬೇಡಿಕೆಯಿತ್ತು. ಕ್ಯಾಲ್ಸಿಯಂ ಕಾರ್ಬೈಡ್ ಮುಕ್ತವಾದ ಈ ಹಣ್ಣುಗಳಲ್ಲಿ ವಿಷವಿಲ್ಲ ಎಂಬುದನ್ನು ಅರಿತ ಜನತೆಗೆ ಹಬ್ಬದೂಟ ಬಡಿಸಿದಂತೆ ಆಗಿತ್ತು. ಈ ಬಾರಿ ಪರಿಸರ ಸ್ನೇಹಿ ಮೇಳ ಆಯೋಜನೆ ವಿಶೇಷವೆನಿಸಿದೆ. ಪ್ಲಾಸ್ಟಿಕ್ ಬದಲು ಬಟ್ಟೆ ಬ್ಯಾಗ್ ಬಳಸಲು ತೋಟಗಾರಿಕೆ ಇಲಾಖೆಯಿಂದ ಮನವಿ ಮಾಡಲಾಗಿದೆ.

ಮೇಳದಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ ಮತ್ತು ಬೆಂಗಳೂರು ಜಿಲ್ಲೆಗಳ ಮಾವು ಬೆಳೆಗಾರರು ಸೇರಿದಂತೆ ವಿವಿಧ ಜಿಲ್ಲೆಗಳ ಮಾವು ಹಾಗೂ ಹಲಸು ಬೆಳೆಗಾರರು ಭಾಗಿಯಾಗಿದ್ದರು. ಮೇ 24ರಿಂದ 29ರವರೆಗೆ ಈ ರುಚಿಕರ ಮೇಳ ನಡೆಯಲಿದೆ.

English summary
Mysuru district Horticulture Department organized Mango and jackfruit Mela from May 24th till 29th. farmers from Mandya, Ramanagara, Bengaluru Rural and other places showcased their mango varieties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X