• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪರಿಶಿಷ್ಟರಿಗೆ ಕ್ಷೌರ ಮಾಡಿದ್ದಕ್ಕೆ ಕ್ಷೌರಿಕನಿಗೇ ಸಾಮಾಜಿಕ ಬಹಿಷ್ಕಾರ

|
Google Oneindia Kannada News

ಮೈಸೂರು, ನವೆಂಬರ್ 19: ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕಗಳೇ ಕಳೆದಿದ್ದರೂ, ಗ್ರಾಮೀಣ ಭಾಗದಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತವಾಗಿರುವುದಕ್ಕೆ ಮೈಸೂರು ಜಿಲ್ಲೆಯ ಹಳ್ಳಿಯೊಂದು ಉದಾಹರಣೆ ಆಗಿದೆ.

ಪರಿಶಿಷ್ಟ ಜಾತಿಯ ವ್ಯಕ್ತಿಗೆ ಹೇರ್ ಕಟ್ಟಿಂಗ್ ಮಾಡಿದ್ದಕ್ಕೆ ಕ್ಷೌರಿಕನ ಕುಟುಂಬಕ್ಕೆ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹಲ್ಲರೆ ಗ್ರಾಮದಲ್ಲಿ ವರದಿಯಾಗಿದ್ದು, ಹಲ್ಲರೆ ಗ್ರಾಮದಲ್ಲಿ ಕ್ಷೌರಿಕ ಮಲ್ಲಿಕಾರ್ಜುನ ಶೆಟ್ಟಿ (48) ಕುಟುಂಬವು ಬಹಳ ಹಿಂದಿನಿಂದಲೂ ಕ್ಷೌರಿಕ ವೃತ್ತಿ ಮಾಡಿಕೊಂಡು ಬರುತ್ತಿದೆ. ಈ ಗ್ರಾಮದಲ್ಲಿ ಸವರ್ಣಿಯರೇ ಬಹುಸಂಖ್ಯಾತರಾಗಿದ್ದಾರೆ. ಮೂರು ತಿಂಗಳ ಹಿಂದೆ ಮೇಲ್ವರ್ಗದ ನಾಯಕ ಸಮುದಾಯದ ಮುಖಂಡರಾದ ಮಹಾದೇವ ನಾಯಕ್, ಶಂಕರ, ಶಿವರಾಜು ಮತ್ತು ಅವರ ಸಂಗಡಿಗರು ಕ್ಷೌರಿಕ ಮಲ್ಲಿಕಾರ್ಜುನ ಶೆಟ್ಟಿ ಅಂಗಡಿಗೆ ಹೋಗಿ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಜನರಿಗೆ ಕೂದಲು ಕತ್ತರಿಸುತ್ತೀರಾ ಎಂದು ಪ್ರಶಿಸಿದರು.

ಹಿಂದೂ ರುದ್ರಭೂಮಿಯಲ್ಲಿ ಮೂಡಾ ವ್ಯಾಪಾರ ಮಳಿಗೆ ನಿರ್ಮಾಣ: ಸ್ಥಳೀಯರ ವಿರೋಧಹಿಂದೂ ರುದ್ರಭೂಮಿಯಲ್ಲಿ ಮೂಡಾ ವ್ಯಾಪಾರ ಮಳಿಗೆ ನಿರ್ಮಾಣ: ಸ್ಥಳೀಯರ ವಿರೋಧ

ದಲಿತ ವ್ಯಕ್ತಿಗಳಿಗೆ ಶೇವ್ ಮಾಡಲು 200 ರೂಪಾಯಿ

ದಲಿತ ವ್ಯಕ್ತಿಗಳಿಗೆ ಶೇವ್ ಮಾಡಲು 200 ರೂಪಾಯಿ

ಶೆಟ್ಟಿ ಅವರು ತಾವು ಜಾತಿ ತಾರತಮ್ಯ ಮಾಡದೇ ಎಲ್ಲರಿಗೂ ಕೂದಲನ್ನು ಕತ್ತರಿಸುತ್ತೇನೆ ಎಂದು ಹೇಳಿದ್ದೇ, ಮೇಲ್ವರ್ಗದವರ ಆಕ್ರೋಶಕ್ಕೆ ಕಾರಣವಾಯಿತು. ಬಂದಿದ್ದವರು ದಲಿತ ಜನಾಂಗದ ವ್ಯಕ್ತಿಗಳಿಗೆ ಶೇವ್ ಮಾಡಲು 200 ರೂಪಾಯಿ ಮತ್ತು ಕಟ್ಟಿಂಗ್ ಮಾಡಲು 300 ರೂಪಾಯಿ ದರ ವಿಧಿಸಬೇಕೆಂದು ತಾಕೀತು ಮಾಡಿದರು. ಆದರೆ ಶೆಟ್ಟಿ ಅವರು ತಾವು ಈ ಕೆಲಸಕ್ಕೆ ಎಲ್ಲರಿಂದಲೂ ಪಡೆಯುವಂತೆ 60 ರೂಪಾಯಿ ಮತ್ತು 80 ರೂಪಾಯಿ ಪಡೆಯುವುದಾಗಿ ತಿಳಿಸಿದರು.

ಮೊಬೈಲ್‌ ಮೂಲಕ ವೀಡಿಯೋ

ಮೊಬೈಲ್‌ ಮೂಲಕ ವೀಡಿಯೋ

ಇದರಿಂದ ಕೆರಳಿದ ಮಹದೇವ ನಾಯಕ ಮತ್ತು ಸಂಗಡಿಗರು ಗ್ರಾಮದ ಜನರಿಗೆ ಶೆಟ್ಟಿ ಅವರ ಕ್ಷೌರದ ಅಂಗಡಿಗೆ ಹೋಗದಂತೆ ಪ್ರಚಾರ ಮಾಡಲು ತೊಡಗಿದರು. ಅಲ್ಲದೆ ಎರಡು ತಿಂಗಳ ಹಿಂದೆ ಶೆಟ್ಟಿ ಅವರ 21 ವರ್ಷ ಪ್ರಾಯದ ಮಗನನ್ನು ಕರೆದುಕೊಂಡು ಹೋಗಿ ಒತ್ತಾಯದಿಂದ ಮದ್ಯಪಾನ ಮಾಡಿಸಿದ್ದಾರೆ. ಆತ ಅಮಲಿನಲ್ಲಿದ್ದಾಗ ಅವನನ್ನು ನಗ್ನಗೊಳಿಸಿ ಮೊಬೈಲ್‌ ಮೂಲಕ ವೀಡಿಯೋ ಮಾಡಿದ್ದಾರೆ ಎಂದೂ ಶೆಟ್ಟಿ ತಿಳಿಸಿದರು. ಅಲ್ಲದೆ ಮಗನನ್ನು ನಾಯಕ ಸಮುದಾಯವನ್ನು ಬೈಯುವಂತೆ ಪ್ರಚೋದಿಸಿ ಅದನ್ನೂ ರೆಕಾರ್ಡ್‌ ಮಾಡಿಕೊಂಡಿದ್ದಾರೆ. ಇವರ ದೌರ್ಜನ್ಯದ ವಿರುದ್ಧ ಪೋಲೀಸರಿಗೆ ದೂರು ನೀಡಿದರೆ, ನಿನ್ನ ಮಗನ ಬೆತ್ತಲೆ ವೀಡಿಯೋವನ್ನು ಸಾಮಾಜಿಕ ತಾಣಗಳಲ್ಲಿ ಹಾಕಿ ಮರ್ಯಾದೆ ಕಳೆಯುವುದಾಗಿ ಅವರು ಬೆದರಿಸಿದ್ದಾರೆ. ಅಲ್ಲದೆ ಅವರ ಮಾತನ್ನು ಮೀರಿದ್ದಕ್ಕೆ ಗ್ರಾಮದಲ್ಲಿ ೫೦೦೦ ರುಪಾಯಿಗಳ ದಂಡವನ್ನು ಹಾಕಿದ್ದಾರೆ, ಅದನ್ನೂ ನಾನು ಪಾವತಿಸಿದ್ದೇನೆ ಎಂದು ಶೆಟ್ಟಿ ತಿಳಿಸಿದರು.

ಮೇಲ್ವರ್ಗದ ಜನರು ನೀಡುತ್ತಿರುವ ಕಿರುಕುಳ

ಮೇಲ್ವರ್ಗದ ಜನರು ನೀಡುತ್ತಿರುವ ಕಿರುಕುಳ

ನಾನು ಅವರ ಮಾತನ್ನು ಕೇಳಲು ನಿರಾಕರಿಸಿದ್ದಕ್ಕೆ ಪುನಃ ನನಗೆ ಈಗ ಅವರು 50,000 ರೂ.ಗಳ ದಂಡವನ್ನು ಕಟ್ಟಬೇಕೆಂದು ತಾಕೀತು ಮಾಡಿದ್ದಾರೆ. ನನ್ನ ಬಳಿ ಇಷ್ಟೊಂದು ಹಣವಿಲ್ಲ. ನಾನು ನನಗೆ ವಿಧಿಸಿರುವ ಈ ಸಾಮಾಜಿಕ ಬಹಿಷ್ಕಾರದ ವಿರುದ್ದ ನಂಜನಗೂಡು ತಹಶೀಲ್ದಾರ್ ಅವರ ಬಳಿ ದೂರು ದಾಖಲಿಸಿದ್ದೇನೆ. ಆದರೆ ಏನೂ ಪ್ರಯೋಜನವಾಗದ ಕಾರಣ ಮಾಧ್ಯಮಗಳ ಮುಂದೆ ಬಂದಿದ್ದೇನೆ ಎಂದು ಶೆಟ್ಟಿ ತಿಳಿಸಿದರು. ಕಳೆದ ಮೂರು ತಿಂಗಳಿನಿಂದ ಮೇಲ್ವರ್ಗದ ಜನರು ನೀಡುತ್ತಿರುವ ಕಿರುಕುಳದ ವಿರುದ್ಧ ನಂಜನಗೂಡು ತಹಶೀಲ್ದಾರ‌ ಮಹೇಶ ಕುಮಾರ್‌ ಅವರಿಗೆ ಲಿಖಿತ ದೂರು ಮತ್ತು ನಂಜನಗೂಡು ಗ್ರಾಮಾಂತರ ಠಾಣೆಯ ಪೊಲೀಸರಿಗೂ ದೂರು ನೀಡಿದ್ದರೂ, ಯಾರೂ ಏನು ಕ್ರಮ ಕೈಗೊಳ್ಳಲಿಲ್ಲ ಎಂದು ಶೆಟ್ಟಿ ಅವರು ಹೇಳಿದರು.

ಇಬ್ಬರನ್ನೂ ಕರೆಸಿ ಸಂಧಾನ ಮಾಡಿಸಿದ್ದೇವೆ

ಇಬ್ಬರನ್ನೂ ಕರೆಸಿ ಸಂಧಾನ ಮಾಡಿಸಿದ್ದೇವೆ

ಈ ಕುರಿತು ಪ್ರತಿಕ್ರಿಯಿಸಿದ ನಂಜನಗೂಡು ಗ್ರಾಮೀಣ ಪೊಲೀಸರು, ಸಾಮಾಜಿಕ ಬಹಿಷ್ಕಾರಕ್ಕೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ್ ಶೆಟ್ಟಿ ಅವರ ಮೌಕಿಕ ದೂರನ್ನು ಸ್ವೀಕರಿಸಿದ ನಂತರ ಅವರು ಮಹಾದೇವ ನಾಯಕ್‌ ನನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದೇವೆ ಎಂದು ತಿಳಿಸಿದರು. ಅಲ್ಲದೆ ಮಲ್ಲಿಕಾರ್ಜುನ ಅವರು ಪ್ರಕರಣ ದಾಖಲಿಸಲು ತಿಳಿಸಿಲ್ಲ, ಬದಲಿಗೆ ಈಗಿನ ಪರಿಸ್ಥಿತಿಯನ್ನು ತಿಳಿಗೊಳಿಸುವಂತೆ ಕೋರಿದ್ದಾರೆ. ನಂತರ ಮಹಾದೇವ ನಾಯಕ್ ಅವರು ಮಲ್ಲಿಕಾರ್ಜುನ್ ಅವರ ಮಗನ ವೀಡಿಯೊವನ್ನು ನಮಗೆ ತೋರಿಸಿದರು. ಮಲ್ಲಿಕಾರ್ಜುನ್ ಅವರು ದೂರು ದಾಖಲಿಸದ ಕಾರಣ ನಾವು ಇಬ್ಬರನ್ನೂ ಕರೆಸಿ ಸಂಧಾನ ಮಾಡಿಸಿ ವಾಪಸ್ ಕಳುಹಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಫ್ಐಆರ್ ಮಾಡಲು ಪೊಲೀಸರಿಗೆ ಆದೇಶಿಸುತ್ತೇನೆ

ಎಫ್ಐಆರ್ ಮಾಡಲು ಪೊಲೀಸರಿಗೆ ಆದೇಶಿಸುತ್ತೇನೆ

ಮಹಾದೇವ ನಾಯಕ್ ತಮ್ಮ ಮಗನ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರಿಂದ ತಾವು ದೂರು ದಾಖಲಿಸಲು ಹೆದರಿದ್ದಾಗಿ ಮಲ್ಲಿಕಾರ್ಜುನ ಹೇಳಿದರು. ಈ ಕುರಿತು ಮಾತನಾಡಿದ ತಹಶೀಲ್ದಾರ ಮಹೇಶ್ ಕುಮಾರ್, ತಾವು ಶೀಘ್ರದಲ್ಲೇ ಗ್ರಾಮಕ್ಕೆ ಭೇಟಿ ನೀಡಿ ತನಿಖೆ ನಡೆಸಲಿದ್ದೇನೆ ಎಂದು ಹೇಳಿದರಲ್ಲದೆ, ಯಾವುದೇ ರೀತಿಯ ದೌರ್ಜನ್ಯ ನಡೆಸಿರುವುದು ಖಚಿತವಾದರೆ ಕೂಡಲೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಎಫ್ಐಆರ್ ಮಾಡಲು ಪೊಲೀಸರಿಗೆ ಆದೇಶಿಸುತ್ತೇನೆ ಎಂದು ಹೇಳಿದರು.

English summary
Social Boycotted by villagers to a barber's family for haircutting of a Scheduled Castes in Hallare village in Nanjanagudu taluk in Mysuru district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X