ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಕಲಿ ದಾಖಲೆ ಸೃಷ್ಟಿಸಿ ಮುಡಾ ಆಸ್ತಿ ಮಾರಾಟ ಮಾಡಿದ ವ್ಯಕ್ತಿ

By Coovercolly Indresh
|
Google Oneindia Kannada News

ಮೈಸೂರು, ಮೇ 28; ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ತಾನೇ ಬಿಟ್ಟುಕೊಟ್ಟ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಮೀನನ್ನು ಸುಳ್ಳು ದಾಖಲೆ ನೀಡಿ ಮುಡಾದಿಂದಲೇ ಎನ್‌ಒಸಿ ಪಡೆದು ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮುಡಾ ವತಿಯಿಂದ ಹೆಬ್ಬಾಳು 2ನೇ ಹಂತ ಬಡಾವಣೆ ನಿರ್ಮಾಣಕ್ಕಾಗಿ ಸುಮಾರು 10 ಗುಂಟೆ ಜಮೀನನ್ನು 2005ರಲ್ಲೇ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಮುಡಾಗೆ ಜಮೀನು ಬಿಟ್ಟುಕೊಟ್ಟಿದ್ದ ಮಾಲೀಕರಿಗೆ ಒಪ್ಪಂದದ ಪ್ರಕಾರ ಎರಡು ಮನೆ ನಿವೇಶನ ಹಾಗೂ ಪರಿಹಾರ ನೀಡಲಾಗಿತ್ತು. ಆದರೆ, ಅದೇ ಮಾಲೀಕರು ನಕಲಿ ದಾಖಲೆ ಸೃಷ್ಟಿಸಿ ಮುಡಾದಿಂದಲೇ ಎನ್‌ಒಸಿ ಪಡೆದು ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದಾರೆ.

ಸುಳ್ಳು ದಾಖಲೆ ನೀಡಿ ನಿವೇಶನ ಖರೀದಿಸಿದ ಬಿಎಸ್ ಎನ್ ಎಲ್ ಅಧಿಕಾರಿಸುಳ್ಳು ದಾಖಲೆ ನೀಡಿ ನಿವೇಶನ ಖರೀದಿಸಿದ ಬಿಎಸ್ ಎನ್ ಎಲ್ ಅಧಿಕಾರಿ

ಈ ಕುರಿತು "ಒನ್ ಇಂಡಿಯಾ ಕನ್ನಡ"ಕ್ಕೆ ಪ್ರತಿಕ್ರಿಯಿಸಿದ ಮೂಡ ಸಹಾಯಕ ಕಾರ್ಯ ನಿರ್ವಹಕ ಎಂಜಿನಿಯರ್‌, "ಶಿವಣ್ಣ ಅವರು 2002ರಲ್ಲಿ ಸದರಿ ಮಾಲೀಕರು ಮುಡಾದಿಂದಲೇ ಎನ್‌ಒಸಿ ಪಡೆದು ಜಿಲ್ಲಾಧಿಕಾರಿಗಳ ಕಚೇರಿಯಿಂದ ಭೂ ಪರಿವರ್ತನೆ ಮಾಡಿಸಿಕೊಂಡಿದ್ದಾರೆ. ನಂತರ ಅದೇ ಭೂಮಿಯನ್ನು ಲೇಔಟ್‌ ನಿರ್ಮಿಸಿ ಜನರಿಗೆ ಮಾರಾಟ ಮಾಡಿದ್ದಾರೆ. ಈಗಾಗಲೇ ಇಲ್ಲಿ ನಿವೇಶನ ಖರೀದಿಸಿದ ನಾಲ್ವರು ಮನೆಯನ್ನೂ ನಿರ್ಮಿಸಿಕೊಂಡಿದ್ದಾರೆ ಎಂದು ಹೇಳಿದರು.

Man Created Fake Document And Sold Muda Property

ಮುಡಾ ಭೂಸ್ವಾಧೀನ ಪಡಿಸಿಕೊಂಡಿದ್ದ ಸರ್ವೆ ನಂ. 266/3ರಲ್ಲಿ 10 ಗುಂಟೆ ಜಮೀನಿಗೆ ಸುಳ್ಳು ದಾಖಲೆ ನೀಡಿ ಮುಡಾದಿಂದ ಎನ್‌ಒಸಿ ಪಡೆದಿರುವುದು ರುಜುವಾತಾಗಿದೆ. ತಕ್ಷಣ ಎನ್‌ಒಸಿ ರದ್ದುಗೊಳಿಸಿದ್ದೇವೆ. ನಿವೇಶನ ರಚಿಸಿ ಮಾರಾಟ ಮಾಡುವ ಯತ್ನವನ್ನು ತಡೆಯುತ್ತೇವೆ. ಇಲ್ಲಿ ಯಾವುದೇ ರೀತಿಯ ಕಟ್ಟಡ ಕಾಮಗಾರಿ ಮಾಡಲು ಬಿಡಬೇಡಿ ಎಂದು ವಲಯ ಇಂಜಿನಿಯರ್ ‌ಗೆ ಸೂಚನೆ ನೀಡಿದ್ದೇವೆ ಎಂದು ಮುಡಾ ಆಯುಕ್ತ ಡಿ.ಬಿ.ನಟೇಶ್ ತಿಳಿಸಿದರು.

English summary
Man created fake document and got noc, sold property belongs to mysuru urban development authority
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X