ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂಡಾ ಸೈಟ್ ಕೊಡಿಸುವುದಾಗಿ ವಂಚನೆ; ಆರೋಪಿ ಬಂಧಿಸಿದ ಪೊಲೀಸ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 04: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮೂಡಾ) ವತಿಯಿಂದ ಸೈಟ್ ಕೊಡಿಸುತ್ತೇನೆ ಎಂದು ಜನರಿಗೆ ವಂಚಿಸುತ್ತಿದ್ದ ವಂಚಕನನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀಮಂತರ ಪರಿಚಯ ಮಾಡಿಕೊಳ್ಳುತ್ತಿದ್ದ ವಂಚಕ ಕಡಿಮೆ ಬೆಲೆಗೆ ಸೈಟು ಕೊಡಿಸುವುದಾಗಿ ವಂಚನೆ ಮಾಡುತ್ತಿದ್ದ.

ಬಂಧಿತ ಆರೋಪಿಯನ್ನು ಬೆಳಗಾವಿ ಮೂಲದ ಸಾಗರ್ ದೇಶಪಾಂಡೆ ಎಂದು ಗುರುತಿಲಾಗಿದೆ. ಭಾನುವಾರ ಸರಸ್ವತಿಪುರಂ ಪೊಲೀಸರು ಶಿರಡಿಯಲ್ಲಿ ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

ಮೈಸೂರು: ಮೂಡಾ ಸೈಟ್ ಮಾರಾಟಕ್ಕಿಟ್ಟವನ ಮೇಲೆ ಕ್ರಿಮಿನಲ್‌ ಕೇಸ್ಮೈಸೂರು: ಮೂಡಾ ಸೈಟ್ ಮಾರಾಟಕ್ಕಿಟ್ಟವನ ಮೇಲೆ ಕ್ರಿಮಿನಲ್‌ ಕೇಸ್

ಮೂಡಾದ ನಕಲಿ ಲೆಟರ್ ಹೆಡ್ ಬಳಸಿಕೊಂಡು ಕೋಟ್ಯಂತರ ರೂಪಾಯಿಯನ್ನು ಸಾಗರ್ ದೇಶಪಾಂಡೆ ವಂಚಿಸಿದ್ದಾರೆ ಎಂಬ ಆರೋಪವಿದೆ. ಮೈಸೂರು ಮಾತ್ರವಲ್ಲದೇ ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ ಇನ್ನಿತರ ಕಡೆಗಳಲ್ಲಿ ಸೈಟ್‌ ಕೊಳ್ಳುವವರಿಗೆ ಮಾರುಕಟ್ಟೆ ದರಕ್ಕಿಂತ ಕಡಿಮೆ ದರಕ್ಕೆ ಸೈಟ್‌ ಕೊಡಿಸುವುದಾಗಿ ನಂಬಿಸಿ, ವಂಚನೆ ಮಾಡುತ್ತಿದ್ದ.

ಕೋರ್ಟ್ ಆದೇಶದ ಮೇರೆಗೆ ಮೂಡಾ ವಿಶೇಷಾಧಿಕಾರಿಗಳ ಕಚೇರಿ ಜಪ್ತಿ ಕೋರ್ಟ್ ಆದೇಶದ ಮೇರೆಗೆ ಮೂಡಾ ವಿಶೇಷಾಧಿಕಾರಿಗಳ ಕಚೇರಿ ಜಪ್ತಿ

Man Cheated People With MUDA Fake Letterhead Arrested

ಮೈಸೂರು ನಗರದಲ್ಲಿ ವಿಸ್ಮಯ ರೆಸ್ಟೋರೆಂಟ್ ನಡೆಸುತ್ತಿದ್ದ ವಂಚಕ ಅಲ್ಲಿಗೆ ಬರುವ ಶ್ರೀಮಂತರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಮೂಡಾದಲ್ಲಿ ನಮಗೆ ಬೇಕಾದ ಅಧಿಕಾರಿಗಳಿದ್ದು ನಿಮಗೆ ಕಡಿಮೆ ದರದಲ್ಲಿ ಸೈಟ್ ಕೊಡಿಸುತ್ತೇನೆಂದು ನಂಬಿಸಿ ಹಣ ವಸೂಲಿ ಪಡೆಯುತಿದ್ದ.

ಹಿಂದೂ ರುದ್ರಭೂಮಿಯಲ್ಲಿ ಮೂಡಾ ವ್ಯಾಪಾರ ಮಳಿಗೆ ನಿರ್ಮಾಣ: ಸ್ಥಳೀಯರ ವಿರೋಧಹಿಂದೂ ರುದ್ರಭೂಮಿಯಲ್ಲಿ ಮೂಡಾ ವ್ಯಾಪಾರ ಮಳಿಗೆ ನಿರ್ಮಾಣ: ಸ್ಥಳೀಯರ ವಿರೋಧ

ನಂತರ ಹಣ ಪಡೆದವರಿಗೆ ಮೂಡಾದ ನಕಲಿ ಲೆಟರ್ ಹೆಡ್ ನೀಡಿ ವಂಚನೆ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ವಂಚನೆ ಪ್ರಕರಣ ಬಯಲಿಗೆ ಬರುತಿದ್ದಂತೆ ಮೂಡ ಕೂಡ ಎಚ್ಚರಗೊಂಡಿದ್ದು, ತನ್ನ ಅಧಿಕೃತ ಸೈಟ್‌ ಅಲಾಟ್‌ ಮೆಂಟ್‌ ಪತ್ರಗಳಿಗೆ ಸುರಕ್ಷತಾ ಕ್ರಮವಾಗಿ ಹಾಲೋಗ್ರಾಂ ನ್ನು ಅಂಟಿಸಲು ಶುರು ಮಾಡಿದೆ.

ಇದನ್ನು ನಕಲು ಮಾಡಲು ಸಾಧ್ಯವಿಲ್ಲ ಎಂದು ಮೂಡ ಅಧ್ಯಕ್ಷ ರಾಜೀವ್‌ ಹೇಳಿದ್ದಾರೆ. ಪೋಲೀಸರು ವಂಚಕ ದೇಶಪಾಂಡೆ ವಿಚಾರಣೆಯನ್ನು ಮುಂದುವರೆಸಿದ್ದಾರೆ.

English summary
Man who cheated people in the name of Mysore Urban Development Authority (MUDA) fake letterhead arrested by police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X