ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಡಿಮೆ ದರಕ್ಕೆ ಚಿನ್ನ ನೀಡುವುದಾಗಿ 23 ಲಕ್ಷ ವಂಚನೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 05: ಕಡಿಮೆ ಬೆಲೆಯಲ್ಲಿ ಚಿನ್ನ ಕೊಡಿಸುವುದಾಗಿ ನಂಬಿಸಿ 23,50,000 ರೂ. ಹಣ ಪಡೆದು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮೈಸೂರಿನ ನಿವಾಸಿ ಈ ಕುರಿತು ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಆರ್‌ಬಿಐನ ಡೀಲರ್‌ ಎಂದು ಶಂತ ಎಂಬುವವರಿಗೆ ಅವರಿಗೆ ತಮ್ಮ ಸ್ನೇಹಿತ ಮಹಮ್ಮದ್ ಮೂಲಕ ಯೂಸಫ್ ಹಾಜಿ ಎಂಬಾತ ಪರಿಚಯವಾಗಿದ್ದ. ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ಆತ ನಂಬಿಸಿದ್ದ. ನಗರದಲ್ಲಿ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದ ಆತ ಜನವರಿ 3ರಂದು ರಾತ್ರಿ ಭೇಟಿಯಾಗಿ ಮರುದಿನ ಚಿನ್ನ ಕೊಡಿಸುವುದಾಗಿ ಹೇಳಿದ್ದ.

ಮೂಡಾ ಸೈಟ್ ಕೊಡಿಸುವುದಾಗಿ ವಂಚನೆ; ಆರೋಪಿ ಬಂಧಿಸಿದ ಪೊಲೀಸ್ ಮೂಡಾ ಸೈಟ್ ಕೊಡಿಸುವುದಾಗಿ ವಂಚನೆ; ಆರೋಪಿ ಬಂಧಿಸಿದ ಪೊಲೀಸ್

ಸೋಮವಾರ ಬೆಳಗ್ಗೆ ವಿವಿ ಮೊಹಲ್ಲಾ ಟೆಂಪಲ್ ರಸ್ತೆಯಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಬಳಿ ಬರುವಂತೆ ಯೂಸಫ್ ಹಾಜಿ ಹೇಳಿದ್ದ. ಶಂತ ಸ್ನೇಹಿತರೊಡನೆ ಬ್ಯಾಂಕ್‌ ಬಳಿ ಹೋಗಿದ್ದರು. ಬ್ಯಾಂಕ್ ಎದುರು ಯೂಸಫ್ ಹಾಜಿ ಮೂರು ಕವರ್ ನೀಡಿ ಕೆಲವು ದಾಖಲಾತಿಗಳನ್ನು ಪಡೆದುಕೊಂಡು ಬ್ಯಾಂಕ್‌ಗೆ ಹೋಗಿದ್ದ.

ಫಿಂಗರ್ ಪ್ರಿಂಟ್ ನೆರವಿನಿಂದ 4 ಕೆ.ಜಿ ಚಿನ್ನ ಪತ್ತೆ ಮಾಡಿದ ಸಿಸಿಬಿ ಪೊಲೀಸರು ! ಫಿಂಗರ್ ಪ್ರಿಂಟ್ ನೆರವಿನಿಂದ 4 ಕೆ.ಜಿ ಚಿನ್ನ ಪತ್ತೆ ಮಾಡಿದ ಸಿಸಿಬಿ ಪೊಲೀಸರು !

Man Cheated 23 Lakh In The Name Of Gold

ಸ್ವಲ್ಪ ಸಮಯದ ಬಳಿಕ ಶಂತ ಅವರನ್ನು ಬ್ಯಾಂಕಿಗೆ ಕರೆಸಿಕೊಂಡು ಹಣದ ಡಿನಾಮಿನೇಷನ್ ಬರೆಯಬೇಕೆಂದು ಬ್ಯಾಗ್ ನಲ್ಲಿದ್ದ 23,50,000 ರೂ,ಗಳನ್ನು ಪಡೆದು ಕೊಂಡಿದ್ದ. ಬ್ಯಾಂಕ್ ಹೊರಗಿದ್ದ ಮಹಮ್ಮದ್ ಬಳಿ ಪೇಪರ್ ತೆಗೆದುಕೊಂಡು ಬರುವಂತೆ ತಿಳಿಸಿದ್ದ.

ಇಬ್ಬರು ದೇವಸ್ಥಾನ ಕಳ್ಳರ ಬಂಧನ: 40 ಗ್ರಾ ಚಿನ್ನ, 1.5 ಕೆಜಿ ಬೆಳ್ಳಿ ವಶ ಇಬ್ಬರು ದೇವಸ್ಥಾನ ಕಳ್ಳರ ಬಂಧನ: 40 ಗ್ರಾ ಚಿನ್ನ, 1.5 ಕೆಜಿ ಬೆಳ್ಳಿ ವಶ

ಮಹಮ್ಮದ್‌ಗೆ ಶಂತ ಕರೆ ಮಾಡುವುದರೊಳಗೆ ಯೂಸಫ್ ಹಾಜಿ ಹಣದ ಸಮೇತ ಬ್ಯಾಂಕ್‌ನಿಂದ ಪರಾರಿಯಾಗಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ತನಿಖೆ ಕೈಗೊಂಡಿದ್ದಾರೆ.

English summary
Man cheated 23 lakh in the name of gold in Mysuru. Complaint filed in V.V. Puram police station and police searching for accused Yusuf Haji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X