ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತನ್ನನ್ನು ಮದುವೆಯಾಗುವಂತೆ ಗೃಹರಕ್ಷಕಿಗೆ ಥಳಿಸಿದ ವ್ಯಕ್ತಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 4: ಮೈಸೂರು ನಗರ ಠಾಣೆಯೊಂದರಲ್ಲಿ ಗೃಹ ರಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯೊಬ್ಬರಿಗೆ ತನ್ನನ್ನು ವಿವಾಹವಾಗುವಂತೆ ಒತ್ತಾಯಿಸಿ ವ್ಯಕ್ತಿಯೊಬ್ಬ ಹಲ್ಲೆ ನಡೆಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಗೃಹರಕ್ಷಕ ಮಹಿಳಾ ಸಿಬ್ಬಂದಿ ಲಕ್ಷ್ಮಿ ಕೃಷ್ಣರಾಜ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದಸ್ತಗೀರ್ ಎಂಬಾತ ತನ್ನನ್ನು ಮದುವೆಯಾಗಬೇಕೆಂದು ಒತ್ತಾಯಿಸಿ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

'ಚಿಲ್ಲರೆ' ಕಾರಣಕ್ಕೆ ಪ್ರಯಾಣಿಕನ ಮೇಲೆ ತೀವ್ರ ಹಲ್ಲೆ ನಡೆಸಿದ ಬಸ್ ನಿರ್ವಾಹಕ'ಚಿಲ್ಲರೆ' ಕಾರಣಕ್ಕೆ ಪ್ರಯಾಣಿಕನ ಮೇಲೆ ತೀವ್ರ ಹಲ್ಲೆ ನಡೆಸಿದ ಬಸ್ ನಿರ್ವಾಹಕ

ಲಕ್ಷ್ಮಿ ಅವರು ತಂದೆ, ತಾಯಿ ಮತ್ತು ಇಬ್ಬರು ಗಂಡು ಮಕ್ಕಳ ಜೊತೆಯಲ್ಲಿ ವಾಸವಾಗಿದ್ದಾರೆ. ಕೆ.ಆರ್.ಸಂಚಾರ ಪೊಲೀಸ್ ಠಾಣೆಯಲ್ಲಿ ಹೋಮ್ ಗಾರ್ಡ್ ಆಗಿ ಕೆಲಸ ಮಾಡಿಕೊಂಡು ಜೀವನ ನಡೆಸಿಕೊಂಡಿದ್ದಾರೆ. ಡಿಸೆಂಬರ್ 1ರಂದು ಪಾಠಶಾಲಾ ಸರ್ಕಲ್ ನಲ್ಲಿ ಪಾಯಿಂಟ್ ಕರ್ತವ್ಯಕ್ಕೆ ನೇಮಕವಾಗಿದ್ದು, ಅಲ್ಲಿಗೆ ಬೆಳಿಗ್ಗೆ ಬಂದಿದ್ದಾರೆ.

Man Assaulted Women Home Guard In Mysuru

ಆಗ ಅವರನ್ನು ಹಿಂಬಾಲಿಸಿಕೊಂಡು ಬಂದ ದಸ್ತಗೀರ್ ಎಂಬಾತ ಸರ್ಕಲ್ ಬಳಿ ಅವರನ್ನು ತಡೆದು ನಿಲ್ಲಿಸಿ, ತನ್ನನ್ನು ಮದುವೆಯಾಗದಿದ್ದರೆ ಸುಮ್ಮನೆ ಬಿಡುವುದಿಲ್ಲವೆಂದು ಹೆದರಿಸಿದ್ದಾನೆ. ಲಕ್ಷ್ಮಿ ಅವರು ಆತನ ಮಾತಿಗೆ ನಿರಾಕರಿಸಿದ್ದಕ್ಕೆ ಕಪಾಲಕ್ಕೆ ಹೊಡೆದು, ಜುಟ್ಟನ್ನು ಹಿಡಿದು ಎಳೆದಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಆಸಿಡ್ ಹಾಕುವ ಬೆದರಿಕೆ ಒಡ್ಡಿದ್ದಾನೆಂದೂ ತಿಳಿಸಿದ್ದಾರೆ.

ಮದುವೆಯಾಗಿ ಕುದುರೆ ಏರಿದ ಮದುಮಗನಿಗೆ ಹಿಗ್ಗಾಮುಗ್ಗ ಥಳಿತ!ಮದುವೆಯಾಗಿ ಕುದುರೆ ಏರಿದ ಮದುಮಗನಿಗೆ ಹಿಗ್ಗಾಮುಗ್ಗ ಥಳಿತ!

ಗಾಯಗೊಂಡ ಲಕ್ಷ್ಮಿ ಅವರು ರಿಕ್ಷಾದಲ್ಲಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದಾರೆ. ನಂತರ ದಸ್ತಗೀರ್ ನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಮಾಡಿದ್ದಾರೆ. ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

English summary
A man forced to marry and assaulted a women who was working as homeguard at a Mysore city station
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X