ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲ್ಲಿಕಾರ್ಜುನಸ್ವಾಮಿಯನ್ನು ಗ್ರಾಮದಿಂದ ಬಹಿಷ್ಕಾರ ಹಾಕಲಾಗಿಲ್ಲ: ಮೈಸೂರು ಎಸ್ಪಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್ 27: ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದ ಕ್ಷೌರಿಕ ಮಲ್ಲಿಕಾರ್ಜುನಸ್ವಾಮಿ ಅವರಿಗೆ ಗ್ರಾಮದಿಂದ ಬಹಿಷ್ಕಾರ ಹಾಕಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದ್ದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಸ್ಪಷ್ಟಪಡಿಸಿದ್ದಾರೆ.

ಪರಿಶಿಷ್ಟರಿಗೆ ಕ್ಷೌರ ಮಾಡಿದ್ದಕ್ಕೆ ಕ್ಷೌರಿಕನಿಗೇ ಸಾಮಾಜಿಕ ಬಹಿಷ್ಕಾರ ಪರಿಶಿಷ್ಟರಿಗೆ ಕ್ಷೌರ ಮಾಡಿದ್ದಕ್ಕೆ ಕ್ಷೌರಿಕನಿಗೇ ಸಾಮಾಜಿಕ ಬಹಿಷ್ಕಾರ

ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, "ಹುರ ಗ್ರಾಮದ ಮಹದೇವ ಎಂಬುವರು ಹೊಸದಾಗಿ ಕ್ಷೌರದ ಅಂಗಡಿ ತೆರೆದ ನಂತರ, ಮಲ್ಲಿಕಾರ್ಜುನಸ್ವಾಮಿ ನಡೆಸುತ್ತಿದ್ದ ಕ್ಷೌರದ ಅಂಗಡಿಗೆ ಜನರು ಬರುವುದು ಕಡಿಮೆ ಆಯಿತು. ಇದರಿಂದ ಮಲ್ಲಿಕಾರ್ಜುನಸ್ವಾಮಿ ಸ್ವಯಂ ಕಲ್ಪಿಸಿಕೊಂಡು ಬಹಿಷ್ಕಾರ ಹಾಕಿದ್ದಾರೆ ಎಂದು ಹೇಳಿದ್ದಾರೆ.'

 Mallikarjunaswamy Is Not Expelled From Village: Mysuru SP

ಈ ಕುರಿತು ವಿಚಾರಣೆ ವೇಳೆ ಕ್ಷೌರದ ಅಂಗಡಿಗೆ ಕಡಿಮೆ ಜನರು ಬರುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿಂದೆಯೂ ಚೆನ್ನನಾಯಕ ಎಂಬುವರೊಂದಿಗೆ ಮಲ್ಲಿಕಾರ್ಜುನಸ್ವಾಮಿ ಜಗಳ ಮಾಡಿಕೊಂಡಿದ್ದರು. ಇವರ ಪುತ್ರ ನಾಗಶೆಟ್ಟಿ ಮದ್ಯ ಸೇವಿಸಿ ಗಲಾಟೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ಪೊಲೀಸ್ ಠಾಣೆಯಲ್ಲಿ ಎಚ್ಚರಿಕೆ ನೀಡಲಾಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಹೇಳಿದ್ದಾರೆ.

 Mallikarjunaswamy Is Not Expelled From Village: Mysuru SP

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆಯೂ ಗ್ರಾಮದಲ್ಲಿ ಯಾರಿಗೂ ಬಹಿಷ್ಕಾರ ಹಾಕಿಲ್ಲ ಎಂಬುದು ತಿಳಿದು ಬಂದಿದೆ. ಗ್ರಾಮದಲ್ಲಿ ಶಾಂತಿ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.

English summary
Mysuru SP CB Rishyant clarified that the allegation that Mallikarjunaswamy, a hairdresser from Hallare village in Nanjangud taluk, was expelled from the village is far from the truth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X