ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲೆಗಳಲ್ಲಿ ಮದುಮಗಳಿಗೆ 5 ದಶಕದ ಸಂಭ್ರಮ: ಆಗಸ್ಟ್ 17 ರಂದು ವಿಶೇಷ ವಿಚಾರ ಸಂಕಿರಣ

By Yashaswini
|
Google Oneindia Kannada News

ಮೈಸೂರು, ಆಗಸ್ಟ್ 15 : ರಾಷ್ಟ್ರಕವಿ ಕುವೆಂಪು ಅವರು 1967ರಲ್ಲಿ ಮಾನವೀಯ ಚಿಂತನೆಗಳು, ಪ್ರಕೃತಿ ಸೌಂದರ್ಯ, ಹೆಣ್ಣಿನ ಮನಸ್ಸು, ಮಲೆನಾಡಿನ ಚಿತ್ರಣವನ್ನು ಕಟ್ಟಿಕೊಟ್ಟಿರುವ ವಿಶ್ವದ ಶ್ರೇಷ್ಠ ಕಾದಂಬರಿಗಳಲ್ಲಿ ಒಂದಾದ ಮಲೆಗಳಲ್ಲಿ ಮದುಮಗಳು' ಕಾದಂಬರಿಗೆ ಐದು ದಶಕಗಳು ತುಂಬಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕುವೆಂಪು ವಿಚಾರ ವೇದಿಕೆ, ಶಿವಮೊಗ್ಗದ ಲೋಹಿಯಾ ಜನ್ಮ ಶತಾಬ್ಧಿ ಪ್ರತಿಷ್ಠಾನ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಸಂಯುಕ್ತಾಶ್ರಯದಲ್ಲಿ ಆಗಸ್ಟ್. 17 ರಂದು ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಮಲೆಗಳಲ್ಲಿ ಮದುಮಗಳು-50' ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ

ಪುಟ್ಟಪ್ಪನ ಮುದ್ದಿನ ಮಗಳು ಈ 'ಮಲೆಗಳಲ್ಲಿ ಮದುಮಗಳು'

ಅಂದು ಬೆಳಗ್ಗೆ 10.30ಕ್ಕೆ ನಾಡಿನ ಹೆಸರಾಂತ ಸಾಹಿತಿ ದೇವನೂರ ಮಹಾದೇವ ಅವರು ವಿಚಾರ ಸಂಕಿರಣವನ್ನು ಉದ್ಘಾಟಿಸುವರು. ಹಿರಿಯ ವಿಮರ್ಶಕ ಪ್ರೊ.ಜಿ.ಎಚ್.ನಾಯಕ ಅಧ್ಯಕ್ಷತೆ ವಹಿಸುವರು. ವಿಮರ್ಶಕ ಡಿ.ಎಸ್.ನಾಗಭೂಷಣ ಪ್ರಾಸ್ತಾವಿಕ ನುಡಿಗಳನ್ನಾಡುವರು.

Malegalalli Madumagalu-50 seminar is organized in Mysore.

ವಿಚಾರಗೋಷ್ಠಿ
ಜಾಗತಿಕ ಕಾದಂಬರಿ ಪರಂಪರೆ ಮತ್ತು ಮಲೆಗಳಲ್ಲಿ ಮದುಮಗಳು' ಕುರಿತು ಹಿರಿಯ ವಿಮರ್ಶಕ ರಾಜೇಂದ್ರ ಚೆನ್ನಿ ವಿಚಾರ ಮಂಡಿಸುವರು. ಮಲೆಗಳಲ್ಲಿ ಮದುಮಗಳುವಿನ ಸಾಮಾಜಿಕ ವಿನ್ಯಾಸ' ಕುರಿತು ನಾಟಕಕಾರ ಡಾ.ಕೆ.ವೈ.ನಾರಾಯಣಸ್ವಾಮಿ ಮತ್ತು ಮಲೆಗಳಲ್ಲಿ ಮದು ಮಗಳುವಿನ ಸ್ತ್ರೀಲೋಕ' ಕುರಿತು ಡಾ.ಸಬಿತಾ ಬನ್ನಾಡಿ ಮಾತನಾಡುವರು .

ಕಡಲ ತೀರದ ಭಾರ್ಗವ ಕಾರಂತಜ್ಜನಿಗೆ ನುಡಿ ನಮನಕಡಲ ತೀರದ ಭಾರ್ಗವ ಕಾರಂತಜ್ಜನಿಗೆ ನುಡಿ ನಮನ

ಅಂದು ಸಂಜೆ 4.30ಕ್ಕೆ ನಡೆಯುವ ಸಮಾರೋಪ ಸಮಾರಂಭ ದಲ್ಲಿ ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಬಿ.ಎಂ.ಶ್ರೀರಾಮ್ ಸಮಾರೋಪ ಭಾಷಣ ಮಾಡುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಅಧ್ಯಕ್ಷತೆ ವಹಿಸುವರು.

Malegalalli Madumagalu-50 seminar is organized in Mysore.

ಸಂಜೆ 6.20ಕ್ಕೆ ಶಿವಮೊಗ್ಗ ಸಹ್ಯಾದ್ರಿ ರಂಗ ತರಂಗ ತಂಡದವರು ಕುವೆಂಪು ವಿರಚಿತ ಜಲಗಾರ' ನಾಟಕ ಪ್ರದರ್ಶಿಸುವರು.

English summary
'Malegalalli Madumagalu-50' seminar is organized in Mysore. Writer Devanur Mahadeva will launch the seminar on August 17 at 10:30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X