• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು ಮೃಗಾಲಯದಲ್ಲಿ "ಬ್ರಹ್ಮ" ಗಂಡು ಹುಲಿ ಸಾವು

By ಮೈಸೂರು ಪ್ರತಿನಿಧಿ
|

ಮೈಸೂರು, ಜುಲೈ 24: ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ "ಬ್ರಹ್ಮ" ಹೆಸರಿನ ಗಂಡು ಹುಲಿಯು (20) ನಿನ್ನೆ ಸಾವನ್ನಪ್ಪಿದೆ. ಹುಲಿಯು ವೃದ್ಧಾಪ್ಯಕ್ಕೆ ಸಂಬಂಧಿಸಿದ ಕಾರಣದಿಂದಾಗಿ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

   ಯೋಧನ ಪತ್ನಿಗೆ ಸರ್ಕಾರಿ ಕೆಲಸ, 5 ಕೋಟಿ ದುಡ್ಡು, ಸೈಟು | Oneindia Kannada

   ಬ್ರಹ್ಮ ಹುಲಿಯನ್ನು 2008ರ ಮಾರ್ಚ್‌ 18ರಂದು ಕರ್ನಾಟಕ ಅರಣ್ಯ ಇಲಾಖೆಯಿಂದ ಮಾನವ-ಪ್ರಾಣಿ ಸಂಘರ್ಷ ಕಾರ್ಯಾಚರಣೆಯಡಿ ವಿರಾಜಪೇಟೆ ತಾಲ್ಲೂಕಿನ ತೆರಾಲು ಗ್ರಾಮದಿಂದ ಸೆರೆಹಿಡಿದು ರಕ್ಷಿಸಿ ಮೃಗಾಲಯಕ್ಕೆ ತರಲಾಗಿತ್ತು. ಹುಲಿಯನ್ನು ಮೃಗಾಲಯದ ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿತ್ತು. ಯೋಗ ಗುರು ಬಿ.ಕೆ.ಎಸ್‌. ಅಯ್ಯಂಗಾರ್‌ ಅವರು ಹುಲಿಯ ಜೀವಮಾನ ಪರ್ಯಂತಕ್ಕೆ ದತ್ತು ಸ್ವೀಕರಿಸಿದ್ದರು.

   ಮೇರುನಟರ ಹೆಸರಲ್ಲಿ ಪ್ರಾಣಿ ದತ್ತು ಸ್ವೀಕಾರದೊಂದಿಗೆ ತೆರೆದ ಮೈಸೂರು ಝೂ

   ಹುಲಿಯ ಮರಣಕ್ಕೆ ಮೃಗಾಲಯ ಪ್ರಾಧಿಕಾರವು ಸಂತಾಪ ಸೂಚಿಸಿದೆ.

   English summary
   A male tiger named "Brahma" (20) died yesterday at Chamarajendra Zoo in Mysore,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X