ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್.ಡಿ.ಕೋಟೆ ಬೇಗೂರು ವಲಯದಲ್ಲಿ ಗಂಡು ಹುಲಿ ಸಾವು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 21: ಮೈಸೂರಿನ ಎಚ್.ಡಿ.ಕೋಟೆ ತಾಲ್ಲೂಕಿನ ಬಂಡೀಪುರ ಅರಣ್ಯ ವ್ಯಾಪ್ತಿಯ ಎನ್.ಬೇಗೂರು ವಲಯದಲ್ಲಿ ಗಂಡು ಹುಲಿಯೊಂದು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.

Recommended Video

Elephant : ಈ ಆನೆಯ ಕೋಪ ನೋಡಿದ್ರೆ ಭಯ ಆಗುತ್ತೆ | Angry Elephant found in Bandipur National Park | Oneindia Kannada

ತಾಲ್ಲೂಕಿನ ಎನ್.ಬೇಗೂರು ಅರಣ್ಯ ವಲಯದಲ್ಲಿ ಸುಮಾರು 7-8 ವರ್ಷದ ಗಂಡು ಹುಲಿಯೊಂದು ಸಾವನಪ್ಪಿದ್ದು, ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದಾಗಿ ಆಹಾರವನ್ನು ಸೇವಿಸದೆ ಹುಲಿ ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ದಾಳಿ ಮಾಡಿದ ಸೀಳುನಾಯಿಗಳನ್ನು ಅಟ್ಟಾಡಿಸಿದ ಹೆಣ್ಣಾನೆದಾಳಿ ಮಾಡಿದ ಸೀಳುನಾಯಿಗಳನ್ನು ಅಟ್ಟಾಡಿಸಿದ ಹೆಣ್ಣಾನೆ

ಹುಲಿ ಸಾವನ್ನಪ್ಪಿದ ಎರಡು ದಿನಗಳ ಬಳಿಕ ಶವ ಪತ್ತೆಯಾಗಿದೆ. ಈಗಾಗಲೇ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿ ಪರೀಕ್ಷೆಗೆ ಒಳಪಡಿಸಿದೆ. ವರದಿ ಬಂದ ಬಳಿಕ ಸಾವಿನ ಕುರಿತು ನಿಖರ ಮಾಹಿತಿ ತಿಳಿಯಬಹುದು ಎಂದು ಎನ್.ಬೇಗೂರು ವಲಯ ಅರಣ್ಯಧಿಕಾರಿ ಚೇತನ್ ತಿಳಿಸಿದ್ದಾರೆ.

Male Tiger Found Dead In Begur Region Of Hd Kote Mysuru

ಶಿರಮಳ್ಳಿ ಗ್ರಾಮದ ಜಮೀನಿನಲ್ಲಿ ಎತ್ತುಗಳ ಮೇಲೆ ಹುಲಿ ದಾಳಿ: ಶಿರಮಳ್ಳಿ ಗ್ರಾಮದ ಸಮೀಪದ ಸಿದ್ದೇಗೌಡರ ಜಮೀನಿನಲ್ಲಿ ಮಂಗಳವಾರ ಬೆಳಿಗ್ಗೆ ಹುಲಿಯೊಂದು ಕಾಣಿಸಿಕೊಂಡು, ಜಮೀನಿನಲ್ಲಿ ಮೇಯಲು ಕಟ್ಟಿಹಾಕಿದ್ದ ಎತ್ತುಗಳ ಮೇಲೆ ದಾಳಿ ನಡೆಸಿದೆ.

ಜಮೀನಿನಲ್ಲಿ ಸಿದ್ದೇಗೌಡ ಅವರ ಮಗ ಬಸವರಾಜು ಅವರನ್ನು ನೋಡುತ್ತಿದ್ದಂತೆ ಹುಲಿ ಮುಸುಕಿನ ಜೋಳದ ಬೆಳೆಯ ನಡುವೆ ಪರಾರಿಯಾಗಿದೆ. ಬಸವರಾಜು ಅವರು ಕೂಡಲೇ ಅರಣ್ಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ನಂತರ ಅರಣ್ಯಾಧಿಕಾರಿ ಸುರೇಂದ್ರ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದಾಗ ಹುಲಿಯ ಹೆಜ್ಜೆ ಗುರುತುಗಳು ಕಂಡುಬಂದಿವೆ. ಇದೀಗ ರೈತರಲ್ಲಿ ಆತಂಕ ಉಂಟಾಗಿದ್ದು, ಜಮೀನಿಗೆ ತೆರಳಲು ಹಿಂಜರಿಯುವಂತಾಗಿದೆ.

ಹುಲಿಯನ್ನು ಸೆರೆಹಿಡಿಯಲು ಬೋನು ಇಟ್ಟು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯಾಧಿಕಾರಿಗಳು ರೈತರಲ್ಲಿ ಧೈರ್ಯ ತುಂಬಿದ್ದಾರೆ.

English summary
A male tiger has been found dead in hd kote Begur region of the Bandipur forest area
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X