ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಶೂಟೌಟ್ ಪ್ರಕರಣ: ಬೆಳಕಿಗೆ ಬಂತು ಸ್ಫೋಟಕ ಮಾಹಿತಿ

|
Google Oneindia Kannada News

ಮೈಸೂರು, ಮೇ 17: ಇಡೀ ಮೈಸೂರನ್ನೇ ಅರೆಕ್ಷಣ ಬೆಚ್ಚಿಬೀಳಿಸಿದ್ದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿಷಯ ಬಹಿರಂಗವಾಗಿದೆ. ಸುಮಾರು 500 ಕೋಟಿ ಹಣ ಬದಲಾವಣೆ ದಂಧೆ ನಡೆಯುತ್ತಿದ್ದ ವಿಷಯ ಇದೀಗ ಪೊಲೀಸರಿಗೆ ತಿಳಿದುಬಂದಿದ್ದು, ಎಫ್ ಐಆರ್ ದಾಖಲಿಸಿದ್ದಾರೆ.

ಪ್ರಕರಣದ ಸಂಬಂಧ ಇನ್ಸ್ ಪೆಕ್ಟರ್ ಬಿ.ಜಿ.ಕುಮಾರ್ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಎಫ್‌ಐಆರ್ ಹಾಕಿದ್ದಾರೆ. ಶೂಟೌಟ್ ನಡೆಸಿದ ಇನ್ಸ್ ಪೆಕ್ಟರ್ ಬಿ.ಜಿ.ಕುಮಾರ್ ತಮ್ಮ ದೂರಿನಲ್ಲಿ ಆರೋಪಿ ಹಾಗೂ ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ.

ಮೈಸೂರಿನಲ್ಲಿ ಮನಿ ಡಬ್ಲಿಂಗ್ ನಡೆಸುತ್ತಿದ್ದವರ ಮೇಲೆ ಫೈರಿಂಗ್: ಓರ್ವ ಸಾವುಮೈಸೂರಿನಲ್ಲಿ ಮನಿ ಡಬ್ಲಿಂಗ್ ನಡೆಸುತ್ತಿದ್ದವರ ಮೇಲೆ ಫೈರಿಂಗ್: ಓರ್ವ ಸಾವು

"ನಾನು ಪೋಲೀಸ್ ನಿರೀಕ್ಷಕನಾಗಿ ಮೈಸೂರು ನಗರ, ವಿಜಯನಗರ ಪೊಲೀಸ್ ಠಾಣೆಯಲ್ಲಿ 6 ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಮೂರು ವಾರಗಳಿಂದ ಮೈಸೂರು ನಗರದಲ್ಲಿ ಹೆಚ್ಚಿನ ಸರಗಳ್ಳತನಗಳು ವರದಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಪ್ರತಿ ದಿನ ಬೆಳಗಿನ ಜಾವ ನಗರದ ಎಲ್ಲಾ ಅಧಿಕಾರಿ ವತ್ತು ಸಿಬ್ಬಂದಿಗಳ ಜೊತೆ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದೆ.

Major matter has been revealed in the case of Mysuru shootout

ಈ ದಿನ ಬೆಳಗ್ಗೆ ಸುಮಾರು 8 ಗಂಟೆಗೆ ನನಗೆ ನಮ್ಮ ಬಾತ್ಮೀದಾರರೊಬ್ಬರು ದೂರವಾಣಿ ಕರೆ ಮಾಡಿ, ಅಮಾನೀಕರಣಗೊಂಡು ರದ್ದಾಗಿರುವ ಹಳೆ ಹಣವನ್ನು ಪಡೆದುಕೊಂಡು ಹೊಸದಾಗಿ ಚಲಾವಣೆಯಲ್ಲಿರುವ ಹಣವನ್ನು ನೀಡುವುದಾಗಿ ಒಬ್ಬ ವ್ಯಕ್ತಿ ಹೇಳುತ್ತಿದ್ದಾನೆ. ನನ್ನಿಂದ 10 ಲಕ್ಷ ಹಣವನ್ನು ಪಡೆದುಕೊಂಡು ವಾಪಸ್ ನೀಡದೆ ಮೋಸ ಮಾಡಿದ್ದಾನೆ. ಅದರ ಜೊತೆಗೆ ಈತ 500 ಕೋಟಿ ಅಮಾನೀಕರಣಗೊಂಡ ಹಣವನ್ನು ಬದಲಾಯಿಸಿ ಕೊಡುವುದಾಗಿ ತಿಳಿಸಿದ್ದ. ವಿಜಯನಗರದ ಎಸ್ .ವಿ ಅಪಾರ್ಟ್‌ಮೆಂಟ್ ಕಡೆ ಬರುವುದಾಗಿ ತಿಳಿಸಿದ್ದಾನೆಂದು ಮಾಹಿತಿ ನೀಡಿದರು.

ಯಹೂದಿಗಳ ಶ್ರದ್ಧಾ ಕೇಂದ್ರದಲ್ಲಿ ಗುಂಡು ಹಾರಿಸಿ ಮಹಿಳೆ ಸಾವುಯಹೂದಿಗಳ ಶ್ರದ್ಧಾ ಕೇಂದ್ರದಲ್ಲಿ ಗುಂಡು ಹಾರಿಸಿ ಮಹಿಳೆ ಸಾವು

ಸಿಬ್ಬಂದಿಗಳಾದ ಎಎಸ್‌ಐ ವೆಂಕಟೇಶ್‌ಗೌಡ , ಸಿಸಿ ಮಹೇಶ್ ಪಿಸಿ ವೀರಭದ್ರರವರೊಂದಿಗೆ ಎಸ್ .ಎ ಅಪಾರ್ಟ್‌ಮೆಂಟ್ ಸ್ಥಳಕ್ಕೆ ಹೋಗಿದ್ದವು. ಕಾರಿನಲ್ಲಿದ್ದಾತ ನನಗೆ ಕಾಲಿನಿಂದ ಒದ್ದು ನನ್ನ ಬಳಿ ಇದ್ದ ಪಿಸ್ತೂಲನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದನು.

ಆ ಸಮಯದಲ್ಲಿ ನಾನು ನಮ್ಮ ಸಿಬ್ಬಂದಿಯವರನ್ನು ಬಿಡುವಂತೆ ವಿನಂತಿ ಮಾಡಿದ್ದೆ. ಆದರೂ ಸಹ ಅವರನ್ನು ಬಿಡದಂತೆ ಬಿಗಿಯಾಗಿ ಹಿಡಿದುಕೊಂಡಿದ್ದನು. ನಾನು ಕೂಡಲೇ ನಮ್ಮ ಸಿಬ್ಬಂದಿಯವರಿಗೆ ತೊಂದರೆಯಾಗುತ್ತದೆ ಎಂದು ಹೇಳಿ ನನ್ನ ಪಿಸ್ತೂಲಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದೆ. ಆದರೂ ಅವರನ್ನು ಬಿಡದೆ, ತನ್ನ ಬಳಿಯಿದ್ದ ಗನ್ ಅನ್ನು ತೆಗೆದು ನಮ್ಮಗಳ ಮೇಲೆ ಗುರಿಯಿಟ್ಟು ಗುಂಡು ಹಾರಿಸಲು ಪ್ರಯತ್ನಿಸಿದ. ಕಾರಣ ನಾನು ನನ್ನ ಸಿಬ್ಬಂದಿಯವರುಗಳ ಮತ್ತು ನನ್ನ ಪ್ರಾಣಕ್ಕೆ ತೊಂದರೆಯಾಗುತ್ತದೆ ಎಂದು ತಿಳಿದು ಅಂತಿಮವಾಗಿ ಸದ ಸಿಬ್ಬಂದಿ ಪ್ರಾಣ ರಕ್ಷಣೆ ಮತ್ತು ನನ್ನ ಆತ್ಮ ರಕ್ಷಣೆಗಾಗಿ ನನ್ನ ಬಳಿ ಇದ್ದ ಸರ್ವೀಸ್ ಪಿಸ್ತೂಲಿನಿಂದ ಗುಂಡು ಹಾರಿಸಿದೆ" ಎಂದು ವಿವರಿಸಿದ್ದಾರೆ.

ಪಂಜಾಬಿನಲ್ಲಿ ಮಹಿಳಾ ತಪಾಸಣಾಧಿಕಾರಿಯ ಬರ್ಬರ ಹತ್ಯೆಪಂಜಾಬಿನಲ್ಲಿ ಮಹಿಳಾ ತಪಾಸಣಾಧಿಕಾರಿಯ ಬರ್ಬರ ಹತ್ಯೆ

ಆರೋಪಿ ಶವಕ್ಕೂ ಟೈಟ್ ಸೆಕ್ಯೂರಿಟಿ

ಮೈಸೂರು ಕೆ.ಆರ್.ಆಸ್ಪತ್ರೆ ಶವಗಾರದಲ್ಲಿ ಆರೋಪಿ ಮೃತದೇಹವನ್ನು ಫ್ರೀಜರ್ ನೊಳಗೆ ಇರಿಸಿ, ಶವಗಾರದ ಬಳಿ ಒಂದು ತುಕಡಿ ಸಿ.ಆರ್. ಪೊಲೀಸರ ತಂಡ ನಿಯೋಜನೆ ಮಾಡಿ ಭಾರಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಶವಗಾರದ ಫ್ರೀಜರ್ ಗೆ ಬೀಗ ಜಡಿದಿರುವ ಪೊಲೀಸರು ಆರೋಪಿ ಕುಟುಂಬಕ್ಕಾಗಿ ಕಾಯುತ್ತಿದ್ದಾರೆ.

English summary
Major matter has been revealed in the case of Mysuru shootout. FIR register on Rs 500 crore of money laundering involved on this incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X