ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಾರಾಷ್ಟ್ರ ಮೈತ್ರಿ ಸರ್ಕಾರದ ಬಗ್ಗೆ ದೇವೇಗೌಡ ಭವಿಷ್ಯ

|
Google Oneindia Kannada News

Recommended Video

ರಾಜಕೀಯ ಪರಿಸ್ಥಿತಿಯ ಬದಲಾವಣೆ ಬಗ್ಗೆ ಮಾತನಾಡಿದ ಎಚ್ ಡಿಡಿ | Oneindia Kannada

ಮೈಸೂರು, ನವೆಂಬರ್ 27: ಮಹಾರಾಷ್ಟ್ರದ ರಾಜಕೀಯದ ಬಗ್ಗೆ ಮಾತನಾಡಿರುವ ದೇವೇಗೌಡರು, ಮಹಾರಾಷ್ಟ್ರದ ಮೈತ್ರಿ ಸರ್ಕಾರದ ಬಗ್ಗೆ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು, 'ಮಹಾರಾಷ್ಟ್ರದಲ್ಲಿ ರಚನೆ ಆಗುತ್ತಿರುವ ಎನ್‌ಸಿಪಿ-ಶಿವಸೇನಾ-ಕಾಂಗ್ರೆಸ್ ಮೈತ್ರಿ ಸರ್ಕಾರ ಐದು ವರ್ಷದ ಅವಧಿ ಪೂರೈಸಿದರೆ ದೇಶದಲ್ಲಿ ಹೊಸ ರಾಜಕೀಯ ಅಲೆ ಬೀಸಲು ಪ್ರಾರಂಭಿಸುತ್ತದೆ' ಎಂದು ಭವಿಷ್ಯ ನುಡಿದಿದ್ದಾರೆ.

ಡಿಸೆಂಬರ್.01 ಅಲ್ಲ, ನವೆಂಬರ್.28 ಮಹಾ ಸಿಎಂ ಪಟ್ಟಾಭಿಷೇಕಡಿಸೆಂಬರ್.01 ಅಲ್ಲ, ನವೆಂಬರ್.28 ಮಹಾ ಸಿಎಂ ಪಟ್ಟಾಭಿಷೇಕ

'ಎನ್‌ಸಿಪಿ-ಕಾಂಗ್ರೆಸ್-ಶಿವಸೇನೆ ಒಂದಾಗುತ್ತವೆ ಎಂದು ಯಾರಾದರೂ ಊಹೆ ಮಾಡಿದ್ದರಾ? ಈಗ ರಾಜಕೀಯ ಪರಿಸ್ಥಿತಿಗಳು ಬದಲಾಗುತ್ತಿವೆ, ಕೇಂದ್ರದಲ್ಲಿ ತೆಗೆದುಕೊಳ್ಳುತ್ತಿರುವ ಏಕಮೇವಸ್ವಾಮ್ಯ ನಿರ್ಣಯಗಳಿಂದ ಜನರು ರೋಸಿ ಹೋಗಿದ್ದಾರೆ' ಎಂದು ದೇವೇಗೌಡ ಹೇಳಿದರು.

Maharashtra Coalition Government Will Change National Politics: Deve Gowda

'ಐಟಿ, ಇಡಿ ಸಂಸ್ಥೆಗಳನ್ನು ಇಟ್ಟುಕೊಂಡು ಬೇರೆ ಪಕ್ಷದ ನಾಯಕರನ್ನು ಬೆದರಿಸುವ, ನಿಯಂತ್ರಿಸುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. ಆದರೆ ಅವರ ಪಕ್ಷದ ಯಾವ ನಾಯಕರ ಮೇಲೂ ಐಟಿ, ಇಡಿ ದಾಳಿ ಆಗಿಲ್ಲ, ಜನರು ಇದನ್ನೆಲ್ಲಾ ಗಮನಿಸುತ್ತಿದ್ದಾರೆ' ಎಂದು ದೇವೇಗೌಡ ಹೇಳಿದರು.

ಮಹಾರಾಷ್ಟ್ರ ಬೆಳವಣಿಗೆ ಪರಿಣಾಮ: ರಾಜ್ಯಪಾಲರ ತಲೆದಂಡ?ಮಹಾರಾಷ್ಟ್ರ ಬೆಳವಣಿಗೆ ಪರಿಣಾಮ: ರಾಜ್ಯಪಾಲರ ತಲೆದಂಡ?

ಮಹಾರಾಷ್ಟ್ರದಲ್ಲಿ ಎನ್‌ಸಿಪಿ-ಕಾಂಗ್ರೆಸ್-ಶಿವಸೇನಾ ಪಕ್ಷಗಳು ಮೈತ್ರಿ ಸರ್ಕಾರ ರಚಿಸುತ್ತಿದ್ದು, ನಾಳೆ ಶಿವಸೇನೆಯ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

English summary
Former PM Deve Gowda said, If Maharashtra coalition government worked properly it will change the nation politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X