ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲೇ ತಯಾರಾಯಿತು ಕಡಿಮೆ ವೆಚ್ಚದ ಫೇಸ್‌ ಶೀಲ್ಡ್

|
Google Oneindia Kannada News

ಮೈಸೂರು, ಏಪ್ರಿಲ್ 11: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಮಧ್ಯೆ ಸೋಂಕಿತರ ಚಿಕಿತ್ಸೆಗಾಗಿ ಹಗಲಿರುಳೂ ದುಡಿಯುತ್ತಿರುವ ವೈದ್ಯಕೀಯ ಸಿಬ್ಬಂದಿ ಸುರಕ್ಷತಾ ಉಪಕರಣಗಳ ಕೊರತೆ ಎದುರಿಸುತ್ತಿದ್ದಾರೆ. ಬಹುತೇಕರ ಬಳಿ ಸುಸಜ್ಜಿತ ವೈಯಕ್ತಿಕ ಸುರಕ್ಷತಾ ಉಪಕರಣಗಳು ಇಲ್ಲದೇ ಇರುವುದು ಅವರಿಗೂ ಸೋಂಕು ತಗುಲುವ ಸಾಧ್ಯತೆಯನ್ನು ಹೆಚ್ಚು ಮಾಡಿದೆ. ಜೊತೆಗೆ ವೈದ್ಯಕೀಯ ಸುರಕ್ಷತಾ ಸಾಮಗ್ರಿಗಳಾದ ಮಾಸ್ಕ್, ಗ್ಲೌಸ್, ಫೇಸ್‌ಶೀಲ್ಡ್ ಗಳ ಕೊರತೆಯೂ ಇದೆ.

ಈ ಕೊರತೆಯನ್ನು ಮನಗಂಡ ಮೈಸೂರು ಮೂಲದ ಉತ್ಪಾದನಾ ಕಂಪನಿ ಆರ್‌ಪಿಎಂ ಮ್ಯಾನುಫ್ಯಾಕ್ಚರಿಂಗ್ ಸೊಲ್ಯೂಷನ್ಸ್ ಇದಕ್ಕೊಂದು ಪರಿಹಾರ ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದೆ. ಕಂಪನಿ ದಾಖಲೆಯ ಪ್ರಮಾಣದ ಕೇವಲ ಐದೇ ದಿನಗಳಲ್ಲಿ 90%ರಷ್ಟು ಕಡಿಮೆ ವೆಚ್ಚದಲ್ಲಿ ನವೀಕರಣಗೊಳಿಸಬಹುದಾದ ವಸ್ತುಗಳನ್ನು ಬಳಸಿ ಫೇಸ್‌ ಶೀಲ್ಡ್ ಗಳನ್ನ ತಯಾರು ಮಾಡಿದೆ.

 ವೆಂಟಿಲೇಟರ್‌ ಬಿಡಿಭಾಗಕ್ಕಾಗಿ ನಂಜನಗೂಡಿನ ಈ ಕಾರ್ಖಾನೆಗೆ ಸಿಕ್ಕಿದೆ ಅನುಮತಿ ವೆಂಟಿಲೇಟರ್‌ ಬಿಡಿಭಾಗಕ್ಕಾಗಿ ನಂಜನಗೂಡಿನ ಈ ಕಾರ್ಖಾನೆಗೆ ಸಿಕ್ಕಿದೆ ಅನುಮತಿ

 ಕಡಿಮೆ ವೆಚ್ಚದಲ್ಲಿ ಸಿದ್ಧಗೊಂಡ ಫೇಸ್ ಶೀಲ್ಡ್

ಕಡಿಮೆ ವೆಚ್ಚದಲ್ಲಿ ಸಿದ್ಧಗೊಂಡ ಫೇಸ್ ಶೀಲ್ಡ್

ದೇಶಿಕ್ ಲ್ಯಾಬ್ಸ್ ಎಂಬ ಮೈಸೂರಿನ ಮತ್ತೊಂದು ಸ್ಟಾರ್ಟ್‌ ಅಪ್‌ ಕಂಪನಿ ಆರ್‌ಪಿಎಂ ಕಂಪನಿ ಆಡಳಿತ ಮಂಡಳಿಯನ್ನು ಮೊದಲು ಭೇಟಿ ಮಾಡಿ ಫೇಸ್‌ ಶೀಲ್ಡ್‌ಗಳ ಕೊರತೆಯನ್ನು ಪ್ರಸ್ತಾಪಿಸಿ ಇದರ ತಯಾರಿಕೆಯ ಅಗತ್ಯವನ್ನು ಹೇಳಿತು. ಆದರೆ ಸಾಂಪ್ರದಾಯಿಕ ಫೇಸ್‌ ಶೀಲ್ಡ್ ಗಳ ತಯಾರಿಕೆ ವೆಚ್ಚ ದುಬಾರಿ ಆಗಿರುವುದರಿಂದ ಆರ್‌ ಪಿಎಂ ನ ಆಡಳಿತ ವರ್ಗ ತಯಾರಿಕಾ ವೆಚ್ಚವನ್ನು ಕಡಿಮೆ ಮಾಡಲು ತಲೆ ಕೆಡಿಸಿಕೊಂಡಿತು. ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಫೇಸ್‌ಶೀಲ್ಡ್‌ಗಳಿಗೆ ಬಳಕೆ ಮಾಡಿರುವ ವಸ್ತುಗಳೆಲ್ಲವೂ ದುಬಾರಿಯೇ ಆಗಿರುವುದರಿಂದ ಅವುಗಳ ದರ ತುಂಬಾ ಹೆಚ್ಚಿದೆ. ವೆಚ್ಚ ತಗ್ಗಿಸಲು ಆರ್‌ಪಿಎಂ ಸಾಕಷ್ಟು ಬದಲಾವಣೆ ಮಾಡಿದ್ದು, ಒಂದು ವಿನ್ಯಾಸವನ್ನು ಸಿದ್ಧಪಡಿಸಿತು. ನಂತರ ಕೇವಲ 5 ದಿನದಲ್ಲಿ ಮೊದಲ ಫೇಸ್‌ ಶೀಲ್ಡ್ ಮಾದರಿಯನ್ನು ತಯಾರು ಮಾಡಿತು.

ಮೈಸೂರಿನಲ್ಲಿ ರೆಡಿಯಾಗ್ತಿದೆ 966 ಹಾಸಿಗೆಗಳ ಮೊಬೈಲ್‌ ಆಸ್ಪತ್ರೆಮೈಸೂರಿನಲ್ಲಿ ರೆಡಿಯಾಗ್ತಿದೆ 966 ಹಾಸಿಗೆಗಳ ಮೊಬೈಲ್‌ ಆಸ್ಪತ್ರೆ

 ಪರಿಸರಸ್ನೇಹಿ ಫೇಸ್ ಶೀಲ್ಡ್ ತಯಾರಿ

ಪರಿಸರಸ್ನೇಹಿ ಫೇಸ್ ಶೀಲ್ಡ್ ತಯಾರಿ

ಆರ್‌ಪಿಎಂ ಕಂಪನಿ ಜೈವಿಕ ಸಂಯೋಜಿತ ವಸ್ತುಗಳನ್ನು ಮೌಲ್ಡ್ ತಯಾರಿಕೆಗೆ ಬಳಸಿಕೊಂಡಿರುವುದರಿಂದ ವೆಚ್ಚ ತಗ್ಗಿತು. ಇದಕ್ಕೆ ನವೀಕರಿಸಬಹುದಾದ ಕೃಷಿ ತ್ಯಾಜ್ಯ, ಅಂದರೆ ಬಿದಿರಿನ ನಾರು ಹಾಗೂ ಭತ್ತದ ಹೊಟ್ಟನ್ನು ಬಳಕೆ ಮಾಡಿಕೊಂಡಿದೆ. ಇದನ್ನು ಕಂಪನಿಗೆ ಪೂರೈಕೆ ಮಾಡಿದ್ದು, ಸ್ಪೆಕ್ಟಲೈಟ್ ಎಂಬ ಕಂಪನಿ. ಈ ಮೂಲಕ ಪ್ಲಾಸ್ಟಿಕ್‌ ಮತ್ತು ಕಾರ್ಬನ್‌ ಬಳಕೆ ಕಡಿಮೆ ಮಾಡಿ ಪರಿಸರ ಸ್ನೇಹಿ ಫೇಸ್‌ ಶೀಲ್ಡ್ ಅನ್ನು ತಯಾರು ಮಾಡಲಾಗಿದೆ. ಸಾಮಾನ್ಯವಾಗಿ ಫೇಸ್‌ಶೀಲ್ಡ್‌ ತಯಾರಿಕೆಗೆ 3ಡಿ ಪ್ರಿಂಟ್ ಬಳಕೆ ಮಾಡಲಾಗುತ್ತದೆ. ಆದರೆ ಇಲ್ಲಿ ಆ ವೆಚ್ಚವನ್ನು ತಗ್ಗಿಸಲು ತಯಾರಕರು ಮೌಲ್ಡಿಂಗ್ ಬಳಕೆ ಮಾಡಿರುವುದರಿಂದ ಸಾಕಷ್ಟು ವೆಚ್ಚವೂ, ಸಮಯವೂ ಉಳಿತಾಯ ಆಗಿದೆ. 3 ಡಿ ಪ್ರಿಂಟಿಂಗ್‌ನಲ್ಲಿ 1 ಫೇಸ್‌ಶೀಲ್ಡ್ ತಯಾರಿಕೆಗೆ 20 ನಿಮಿಷ ಬೇಕಾದರೆ, ಮೌಲ್ಡಿಂಗ್ ‌ನಲ್ಲಿ ಕೇವಲ 6 ಸೆಕೆಂಡ್‌ಗೆ ತಯಾರಾಗಿದೆ.

 ಸತತ ಪ್ರಯತ್ನದ ನಂತರ ಫೇಸ್ ಶೀಲ್ಡ್‌ ತಯಾರಿ

ಸತತ ಪ್ರಯತ್ನದ ನಂತರ ಫೇಸ್ ಶೀಲ್ಡ್‌ ತಯಾರಿ

ನಮಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್‌ ಅವರಿಂದ ಅನುಮತಿ ಸಿಕ್ಕ ಮೇಲೆ ನಾವು 3 ದಿನಗಳ ಕಾಲ ಫ್ಯಾಕ್ಟರಿಯಲ್ಲಿ ಉಳಿದುಕೊಂಡು ಸತತ ಪ್ರಯತ್ನದ ನಂತರ ಫೇಸ್‌ ಶೀಲ್ಡ್ ತಯಾರು ಮಾಡಿದೆವು .ಹಗಲು, ರಾತ್ರಿ ಕೆಲಸ ಮಾಡಿ ಹೊಸ ಉತ್ಪನ್ನ ತಯಾರಿಸಿದ್ದೇವೆ. ನಾವು ಸದ್ಯಕ್ಕೆ ಲಭ್ಯವಿದ್ದಂತಹ ಸಾಮಗ್ರಿಗಳನ್ನು ಬಳಸಿ, ಗೆಳೆಯರನ್ನು ಸಂಪರ್ಕಿಸಿ ಹೊಸ ಫೇಸ್‌ ಶೀಲ್ಡ್‌ ತಯಾರು ಮಾಡಿದ್ದೇವೆ ಎಂದು ಆರ್‌ಪಿಎಂ ಸಹ ಸಂಸ್ಥಾಪಕ ಹೇಮಂತ್‌ ಕುಮಾರ್‌ ತಿಳಿಸಿದ್ದಾರೆ.
ಈ ಫೇಸ್‌ಶೀಲ್ಡ್‌ ಗಳನ್ನು ವಿವಿಧ ಗಾತ್ರಗಳಿಗೆ ಹೊಂದಿಕೊಳ್ಳುವಂತೆ ತಯಾರು ಮಾಡಿದ್ದೇವೆ. ತುಂಬಾ ಸರಳವಾಗಿದ್ದು, ಹೊರಗಿನಿಂದ ನಿಮ್ಮ ಮುಖಕ್ಕೆ ಸಂಪೂರ್ಣ ರಕ್ಷಣೆ ನೀಡುತ್ತದೆ. ಪ್ಲಾಸ್ಟಿಕ್‌ ಫಿಕ್ಸ್ ಮಾಡಲು ತಯಾರು ಮಾಡಿರುವ ಕ್ಲಿಪ್‌ ಅನ್ನು ಎಷ್ಟು ಬಾರಿ ಬೇಕಾದರೂ ಬಳಸಬಹುದು. ಆದ್ರೆ ಟ್ರಾನ್ಸಪರೆಂಟ್ ‌ಶೀಟ್ಸ್ ಮಾತ್ರ ಪ್ರತಿ ನಿತ್ಯ ಬದಲಾಯಿಸಬೇಕಾಗುತ್ತದೆ ಎಂದು ಆರ್‌ ಪಿಎಂ ಸಹ ಸಂಸ್ಥಾಪಕ ರಾಕೇಶ್ ಪಟೇಲ್‌ ಮಗೇರಿ ತಿಳಿಸಿದರು.

 ಆರ್ ಪಿಎಂ ಕಂಪನಿ ದರ 35 ರೂ

ಆರ್ ಪಿಎಂ ಕಂಪನಿ ದರ 35 ರೂ

ಈಗ ಮಾರುಕಟ್ಟೆಯಲ್ಲಿ ಫೇಸ್‌ ಶೀಲ್ಡ್‌ ಗಳ ದರ 100 ರೂಪಾಯಿಗಳಿಂದ 200 ರೂಪಾಯಿಗಳವರೆಗೂ ಇದೆ. ಆದರೆ ಆರ್‌ಪಿಎಂ ಕಂಪನಿಯ ದರ ಕೇವಲ 35 ರೂಪಾಯಿನಷ್ಟಿದೆ. ಉತ್ಪಾದನೆ ಹೆಚ್ಚಾದರೆ ದರ ಇನ್ನೂ ಕಡಿಮೆ ಆಗಲಿದೆ ಎಂದರು. ಈ ಫೇಸ್‌ ಶೀಲ್ಡ್‌ ಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಯಾರಿಕೆ ಹೆಚ್ಚು ಮಾಡಲು ಕಂಪೆನಿ ಚಿಂತನೆ ನಡೆಸಿದೆ. ಅಲ್ಲದೇ ಇದೇ ರೀತಿಯ ಇನ್ನೂ ಹಲವು ವೈದ್ಯಕೀಯ ಸುರಕ್ಷತಾ ಉಪಕರಣಗಳ ತಯಾರಿಕೆ ಬಗ್ಗೆಯ ಚಿಂತನೆ ಮಾಡಲಾಗುತ್ತಿದೆ. ಸದ್ಯ ದಿನಕ್ಕೆ 8000 ಫೇಸ್‌ಶೀಲ್ಡ್‌ಗಳನ್ನ ತಯಾರಿಸಲಾಗುತ್ತಿದ್ದು, ಮುಂದಿನ ವಾರದಲ್ಲಿ ನಿತ್ಯದ ಉತ್ಪಾದನೆ 20 ಸಾವಿರಕ್ಕೆ ಏರಿಸಲಾಗುವುದು. ನಂತರ ದಿನಕ್ಕೆ 80 ಸಾವಿರ ಫೇಸ್‌ಶೀಲ್ಡ್‌ಗಳನ್ನು ತಯಾರಿಸುವ ಗುರಿ ಇದೆ ಎಂದು ಕಂಪನಿ ತಿಳಿಸಿದೆ.

English summary
A mysuru based RPM Factory is producing low price faceshields,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X