ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸರ ಸಮ್ಮುಖದಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ಪ್ರೇಮಿಗಳು

By ಬಿ.ಎಂ.ಲವಕುಮಾರ್‌
|
Google Oneindia Kannada News

ಮೈಸೂರು, ಮೇ 30 : ಕಳೆದ ಒಂದೂವರೆ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಯುವ ಪ್ರೇಮಿಗಳು ಪೊಲೀಸರ ಸಮ್ಮುಖದಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆಗೆ ಪೊಲೀಸರದ್ದೇ ಪೌರೋಹಿತ್ಯ.

ಕೆ.ಆರ್.ಪೇಟೆ ಪಟ್ಟಣದ ಸರಕಾರಿ ಪಾಲಿಟೆಕ್‌ ಕಾಲೇಜಿನಲ್ಲಿ ಪ್ರಥಮ ವರ್ಷದ ಡಿಪ್ಲೊಮೋ ಓದುತ್ತಿದ್ದ ಸುಮಾ(19) ಮತ್ತು ಪಾಂಡವಪುರ ತಾಲೂಕಿನ ಅರಳುಕುಪ್ಪೆ ಗ್ರಾಮದ ಪ್ರಜ್ವಲ್ (23) ಪ್ರೀತಿಸಿ ವಿವಾಹವಾದ ಪ್ರೇಮಿಗಳು.

ಮೈಸೂರು ಮೃಗಾಲಯದ ಬ್ರಾಂಡ್ ಅಂಬಾಸಿಡರ್ ಆಗಿ ನಟ ದರ್ಶನ್ ಆಯ್ಕೆಮೈಸೂರು ಮೃಗಾಲಯದ ಬ್ರಾಂಡ್ ಅಂಬಾಸಿಡರ್ ಆಗಿ ನಟ ದರ್ಶನ್ ಆಯ್ಕೆ

ಸರಕಾರಿ ಪಾಲಿಟೆಕ್ನಿಕ್ ಪ್ರಥಮ ವರ್ಷದ ಡಿಪ್ಲೊಮೋ ಓದುತ್ತಿದ್ದ ಸುಮಾಗೆ ಕೆ.ಆರ್.ಪೇಟೆ ಪಟ್ಟಣದ ತಮ್ಮ ಅಕ್ಕನ ಮನೆಗೆ ಆಗಾಗ್ಗೆ ಬರುತ್ತಿದ್ದ ಪ್ರಜ್ವಲ್‍ನ ಪರಿಚಯವಾಗಿದೆ. ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೇಮಾಂಕುರವಾಗಿ ಕಳೆದ ಒಂದೂವರೆ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು.

Lovers gets married in Police station

ಪ್ರಜ್ವಲ್ ಪಿಯುಸಿ ನಂತರ ಮೈಸೂರಿನ ಖಾಸಗಿ ಕಂಪನಿಗೆ ಕೆಲಸಕ್ಕೆ ಹೋಗುತ್ತಿದ್ದರು. ಹುಡುಗಿ ಪಟ್ಟಣದ ಪಾಲಿಟಿಕ್ನಿಕ್‌ ಕಾಲೇಜಿಗೆ ಬರುತ್ತಿದ್ದಳು. ಇದ್ದಕಿದ್ದಂತೆಯೇ ಕಳೆದ ಒಂದು ವಾರದಿಂದ ಇಬ್ಬರು ಮನೆ ಬಿಟ್ಟು ನಾಪತ್ತೆಯಾಗಿದ್ದರು. ಮೇ.25 ರಂದು ಮಂಡ್ಯ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮದುವೆ ಆಗಿದ್ದರು. ಈ ನಡುವೆ ಹುಡುಗಿಯ ಪೋಷಕರು ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

'ಸಿದ್ದರಾಮಯ್ಯ 36 ಸಾವಿರ ಮತಗಳ ಅಂತರದಿಂದ ಸೋತಿದ್ದು ಯಾಕೆ?' 'ಸಿದ್ದರಾಮಯ್ಯ 36 ಸಾವಿರ ಮತಗಳ ಅಂತರದಿಂದ ಸೋತಿದ್ದು ಯಾಕೆ?'

ಈ ನಡುವೆ ಮದುವೆ ಬಳಿಕ ಅವರಿಬ್ಬರು ಬೆಂಗಳೂರಿನಲ್ಲಿ ಸ್ವಲ್ಪ ದಿನವಿದ್ದರು. ಬುಧವಾರ ಪಟ್ಟಣದ ಪೊಲೀಸ್ ಠಾಣೆಗೆ ಇಬ್ಬರೂ ಬಂದು ಪೊಲೀಸರಿಗೆ ರಿಜಿಸ್ಟ್ರಾರ್ ಮದುವೆಯಾಗಿರುವುದಾಗಿ ತಿಳಿಸಿ ಮನೆಗೆ ಹೋಗುವುದಾಗಿ ಹೇಳಿದರು. ಇವರಿಬ್ಬರು ಒಂದೇ ಗ್ರಾಮದವರಾಗಿದ್ದರಿಂದ ಇವರಿಬ್ಬರ ಪೋಷಕರನ್ನು ಪೊಲೀಸರು ಠಾಣೆಗೆ ಕರೆಯಿಸಿ ಇಬ್ಬರೂ ಪ್ರಾಪ್ತ ವಯಸ್ಕರಾಗಿದ್ದು ಇಬ್ಬರೂ ಒಪ್ಪಿ ವಿವಾಹವನ್ನೂ ಸಹ ಆಗಿದ್ದಾರೆ. ಹೀಗಾಗಿ ಎರಡೂ ಕುಟುಂಬದವರಿಗೆ ಸಬ್ ಇನ್ಸ್‌ಪೆಕ್ಟರ್‌ ಹೆಚ್.ಎಸ್.ವೆಂಕಟೇಶ್ ಅವರು ತಿಳುವಳಿಕೆ ಹೇಳಿ ನವ ದಂಪತಿಗಳನ್ನು ವರನ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

English summary
Suma and Prajwal both lovers gets married in KR pete police station by exchanging garlends. They in love from 3 years thier families oppose to their marriage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X