• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರೇಮಿಗಳ ದಿನವೇ ಹಾರಂಗಿ ಹಿನ್ನೀರಿಗೆ ಹಾರಿ ಪ್ರೇಮಿಗಳಿಬ್ಬರ ಆತ್ಮಹತ್ಯೆ

By ಮೈಸೂರು ಪ್ರತಿನಿಧಿ
|

ಮೈಸೂರು, ಫೆಬ್ರವರಿ 14: ಅನ್ಯ ಯುವಕನೊಂದಿಗೆ ವಿವಾಹ ನಿಶ್ಚಿತವಾಗಿದ್ದ ಯುವತಿಯೋರ್ವಳು ಒಲ್ಲದ ಮದುವೆಗೆ ಬೇಸತ್ತು, ಪ್ರೇಮಿಗಳ ದಿನವೇ ತಾನು ಪ್ರೀತಿಸುತ್ತಿದ್ದ ಪ್ರಿಯಕರನೊಂದಿಗೆ ಹಾರಂಗಿ ಹಿನ್ನೀರಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ.

ಮೈಸೂರು ಜಿಲ್ಲೆ ಹುಣಸೂರಿನ ಸಚಿನ್ ಹಾಗೂ ಸಿಂಧು ಎಂಬುವವರೇ ಪ್ರೇಮಿಗಳ ದಿನದಂದೇ ಆತ್ಮಹತ್ಯೆ ಮೂಲಕ ಒಟ್ಟಿಗೆ ಸಾವಿನಲ್ಲಿ ಜೋಡಿಯಾಗಿದ್ದಾರೆ. ಮೃತರಿಬ್ಬರು ಹಲವು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರಾದರೂ ಸಿಂಧುವಿನ ಮನೆಯವರು ಆಕೆಗೆ ಬೇರೆ ಯುವಕನೊಂದಿಗೆ ಫೆ.16, ಭಾನುವಾರ ವಿವಾಹ ನಿಶ್ಚಿತಗೊಳಿಸಿದ್ದರು.

ಇಷ್ಟವಿಲ್ಲದ ಮದುವೆ ನಿಶ್ಚಿತಾರ್ಥದಿಂದ ಬೇಸತ್ತ ಪ್ರೇಮಿಗಳು ಇಂದು ಬೆಳಿಗ್ಗೆ ಹಾರಂಗಿಗೆ ಬೈಕ್ ನಲ್ಲಿ ಬಂದಿದ್ದಾರೆ. ನಂತರ ಮಧ್ಯಾಹ್ನ 2.30 ರ ಸಮಯದಲ್ಲಿ ಹಾರಂಗಿ ಜಲಾಶಯ ಸಮೀಪದ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೆ 5.30 ರ ಸಮಯದಲ್ಲಿ ಮೃತ ದೇಹಗಳನ್ನು ನೀರಿನಿಂದ ಹೊರತೆಗೆಯಲಾಯಿತು.

English summary
Lovers committed suicide on valentines day today in harangi dam backwater. They are sachin and sindhu from hunsur of mysuru district,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X