ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಲಾಕ್‌ ಡೌನ್‌ ನಿಯಮ ಉಲ್ಲಂಘಿಸಿ ಡಿಸಿಪಿಗೆ ಅವಾಜ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಏಪ್ರಿಲ್ 16: ಕೇಂದ್ರ ಸರ್ಕಾರ ಕೊರೊನಾ ವೈರಸ್ ಸೋಂಕಿನಿಂದ ಜನರನ್ನು ರಕ್ಷಿಸಲು ಲಾಕ್ ಡೌನ್ ಘೋಷಿಸಿದ್ದು, ಪ್ರತೀ ದಿನವೂ ವಿವಿಧ ಮೂಲಗಳ ಮೂಲಕ ಜನರು ರಸ್ತೆಗಿಳಿಯದಂತೆ ಎಚ್ಚರಿಕೆ ನೀಡುತ್ತಿದ್ದರೂ, ಜನರು ಮಾತ್ರ ಒಂದಿಲ್ಲೊಂದು ವಿಧದಲ್ಲಿ ಲಾಕ್‌ ಡೌನ್‌ ನಿಯಮ ಉಲ್ಲಂಘಿಸುವುದು ಮಾತ್ರ ಕಡಿಮೆ ಆಗಿಲ್ಲ ಎಂದೆನಿಸುತ್ತದೆ.

Recommended Video

ಜಗತ್ತು ರತನ್ ಟಾಟಾರನ್ನು ಶ್ರೀಮಂತ ಅಂತಾ ಯಾಕೆ ಒಪ್ಪಿಕೊಳ್ಳಲ್ಲ ಗೊತ್ತಾ? ಮಿಸ್ ಮಾಡ್ದೆ ನೋಡಿ | RATAN TATA

ಗುರುವಾರ ಇದೇ ರೀತಿ ಹೋಟೆಲ್‌ ತೆರೆದು ಸೇವೆ ನೀಡುತ್ತಿದ್ದ ಹೋಟೆಲ್ ಮಾಲೀಕನೋರ್ವನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಮೈಸೂರಿನ ವಿಜಯನಗರದಲ್ಲಿ ನಡೆದಿದೆ.

ಮೈಸೂರು ನಗರದಲ್ಲಿ ಹೋಟೆಲ್ ಗಳಿಗೆ ಬಾಗಿಲು ತೆರೆಯಲು ಅವಕಾಶ ನೀಡಲಾಗಿಲ್ಲ. ಆದರೆ ಹೋಮ್ ಡೆಲಿವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ ಮೈಸೂರು ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಇಂದ್ರಧನುಷ್ ಹೋಟೆಲ್ ಮಾಲೀಕ ಹೋಟೆಲ್ ಬಾಗಿಲು ತೆರೆದು ಸೇವೆ ನೀಡುತ್ತಿದ್ದು, ಪೊಲೀಸರು ಮಾಲೀಕನನ್ನು ವಶಕ್ಕೆ ಪಡೆದಿದ್ದಾರೆ.

Lockdown Violation: Hotel Owner Attack On DCP In Mysuru


ನಗರದ ಇಂದ್ರಧನುಷ್ ಹೋಟೆಲ್ ಮಾಲೀಕ ನಾಗರಾಜು ಎಂಬವವರು ಇಂದು ತಮ್ಮ ಹೋಟೆಲ್ ಬಾಗಿಲು ತೆರೆದು, ಚಹ, ಕಾಫಿ, ತಿಂಡಿಗಳನ್ನು ಸಿಬ್ಬಂದಿಗಳೊಂದಿಗೆ ಸೇರಿ ಗ್ರಾಹಕರಿಗೆ ಸ್ಥಳದಲ್ಲೇ ತಿನ್ನಲು ಅವಕಾಶ ಕಲ್ಪಿಸಿದ್ದರು.

ಈ ವೇಳೆ ನಗರ ಪ್ರದಕ್ಷಿಣೆ ಕೈಗೊಂಡಿದ್ದ ಡಿಸಿಪಿ ಡಾ.ಎನ್.ಪ್ರಕಾಶ್ ಗೌಡ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಬಂದು ಹೋಟೆಲ್ ಬಾಗಿಲು ತೆರೆದಿದ್ದು ಯಾಕೆ? ಹೋಂ ಡೆಲಿವರಿಗೆ ಮಾತ್ರ ಅವಕಾಶ ಎಂದು ಹೇಳಿದಾಗ, ನೀವ್ಯಾರು ಕೇಳೋಕೆ? ಎಂದು ಡಿಸಿಪಿ ಅವರನ್ನೇ ಮರು ಪ್ರಶ್ನಿಸಿದ್ದಾರೆ.

ಅಷ್ಟೇ ಅಲ್ಲದೇ ಅಲ್ಲಿದ್ದ ಹೋಟೆಲ್‌ ಸಪ್ಲೈಯರ್ ಕೂಡ ಪೊಲೀಸರಿಗೆ ತಿರುಗಿ ಮಾತನಾಡಿದ್ದಾನೆ. ಡಿಸಿಪಿ ಅವರು ಕೂಡಲೇ ವಿಜಯನಗರ ಠಾಣಾ ಇನ್ಸಪೆಕ್ಟರ್ ಬಾಲಕೃಷ್ಣ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿ ಹೋಟೆಲ್ ಮಾಲೀಕ ಮತ್ತು ಸಿಬ್ಬಂದಿಯನ್ನು ವಶಕ್ಕೆ ಪಡೆದುಕೊಳ್ಳುವಂತೆ ತಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

English summary
The owner of the hotel, Indradhanush, which is within the Vijayanagara police station, is opening the hotel and has taken the owner into police custody.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X