ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: ಸ್ಥಗಿತಗೊಂಡಿದ್ದ ಇರ್ವಿನ್ ರಸ್ತೆ ಕಾಮಗಾರಿ ಕೆಲಸ ಶುರು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 3: ಕಳೆದ ಮೂರು ತಿಂಗಳ ಲಾಕ್‌ಡೌನ್‌ ನಿಂದ ಸ್ಥಗಿತಗೊಂಡಿದ್ದ ಮೈಸೂರಿನ ಇರ್ವಿನ್‌ ರಸ್ತೆ ಕಾಮಗಾರಿಯು ಲಾಕ್‌ಡೌನ್‌ ಸಡಿಲಿಕೆ ಹಿನ್ನೆಲೆಯಲ್ಲಿ ಬುಧವಾರದಿಂದ ಪುನರಾರಂಭಗೊಂಡಿದೆ.

Recommended Video

ಏಕದಿನದಲ್ಲಿ ವೇಗದ 10,000 ರನ್ ದಾಖಲೆ ಬರೆದ ಟಾಪ್ 5 ಬ್ಯಾಟ್ಸ್‌ಮನ್‌ಗಳು | virat kohli | Oneindia Kannada

ಇರ್ವಿನ್ ರಸ್ತೆಯ ಅಗಲೀಕರಣ ಕಾಮಗಾರಿಯನ್ನು ಕಳೆದ ಮಾರ್ಚ್ 15 ರಂದು ಆರಂಭಿಸಲಾಗಿತ್ತಾದರೂ, ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿಯಯನ್ನು ಸ್ಥಗಿತಗೊಳಿಸಲಾಗಿತ್ತು.

ಮೈಮುಲ್ ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲ: ಅಧ್ಯಕ್ಷ ಸಿದ್ದೇಗೌಡಮೈಮುಲ್ ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲ: ಅಧ್ಯಕ್ಷ ಸಿದ್ದೇಗೌಡ

ಇಂದಿನಿಂದ ರಸ್ತೆ ಅಗಲೀಕರಣ ಕಾಮಗಾರಿ ಚುರುಕುಗೊಂಡಿದ್ದು, ಗ್ರಾಮಾಂತರ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರೆಗೆ 60 ಅಡಿ ಅಗಲದ ಒಟ್ಟು 1.6 ಕಿ.ಮೀ ರಸ್ತೆ ಅಭಿವೃದ್ಧಿ ಮಾಡಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ.

Lockdown Relaxation: Irvine Road Construction Started In Mysuru

ಒಟ್ಟು 46.2 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ಮತ್ತು ಅಭಿವೃದ್ಧಿ ಕಾರ್ಯ ಆರಂಭಗೊಂಡಿದ್ದು, ಈಗಾಗಲೇ ರಸ್ತೆ ಬದಿ ಇರುವ ಕಟ್ಟಡಗಳ ಮಾಲೀಕರಿಗೆ ಪರಿಹಾರ ವಿತರಣೆ ಮಾಡಿರುವ ನಗರ ಪಾಲಿಕೆ, ರಸ್ತೆ ಬದಿಯ 86 ಕಟ್ಟಡಗಳ ಪೈಕಿ 83 ಕಟ್ಟಡಗಳ ತೆರವುಗೊಳಿಸಲು ಮುಂದಾಗಿದೆ.

ಇಂದಿನಿಂದ ಮೂರು ತಿಂಗಳು ರಸ್ತೆ ಕಾಮಗಾರಿ ನಡೆಯಲಿದ್ದು, ಇರ್ವಿನ್‌ ರಸ್ತೆ ಸಂಚಾರ ಬಂದ್‌ ಆಗಲಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಡಳಿತ ಸೂಚನೆ ಮೇರೆಗೆ ಪರ್ಯಾಯ ಮಾರ್ಗ ಕಲ್ಪಿಸಲು ನಗರ ಪಾಲಿಕೆ ಮುಂದಾಗಿದೆ.

English summary
The Irvine Road Construction works Started in Mysuru, which had been stalled by a lockdown for the past three months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X