ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದಿನಿಂದ ಮೈಸೂರಿನಲ್ಲಿ ಲಾಕ್‌ಡೌನ್ 3.0: ನಿಯಮಗಳು ಹೀಗಿವೆ

|
Google Oneindia Kannada News

ಮೈಸೂರು, ಮೇ 4: ಇಂದಿನಿಂದ ಮೈಸೂರಿನಲ್ಲಿ ಲಾಕ್‌ಡೌನ್ 3.o ಜಾರಿಗೆ ಬಂದಿದೆ. ರೆಡ್ ಜೋನ್ ಕಾರಣಕ್ಕೆ ಲಾಕ್‌ಡೌನ್ ವಿನಾಯಿತಿಯನ್ನು ನೀಡಿಲ್ಲ. ಮೈಸೂರಿನ 91 ವಾಣಿಜ್ಯ ರಸ್ತೆಗಳಲ್ಲಿ ನಿರ್ಬಂಧ ಏರಲಾಗಿದೆ.

ಬೇರೆ ಜಿಲ್ಲೆಗಳಲ್ಲಿ ಎಲ್ಲ ರೀತಿಯ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡಲಾಗಿದೆ. ಆದರೆ, ಮೈಸೂರಿನಲ್ಲಿ ಅವಶ್ಯಕ ವಸ್ತುಗಳ ಅಂಗಡಿ ಹೊರತು ಬೇರೆ ಅಂಗಡಿಗಳಿಗೆ ಅವಕಾಶ ನೀಡಿಲ್ಲ. ಕಾರಣ ಇಡೀ ಜಿಲ್ಲೆಯನ್ನು ರೆಡ್ ಜೋನ್ ಎಂದೇ ಪರಿಗಣಿಸಲಾಗಿದೆ.

 ಮೈಸೂರಿನಲ್ಲಿ ಪಡಿತರ ಅಕ್ಕಿಗೆ ಕನ್ನ; ಅಕ್ರಮ ಸಾಗಾಟ ಬಯಲು ಮೈಸೂರಿನಲ್ಲಿ ಪಡಿತರ ಅಕ್ಕಿಗೆ ಕನ್ನ; ಅಕ್ರಮ ಸಾಗಾಟ ಬಯಲು

ನಗರ ಪ್ರದೇಶದಲ್ಲಿ ಅಗತ್ಯ ಸೇವೆಗಳ ಉತ್ಪಾದಕ ಕೈಗಾರಿಕೆಗಳಿಗೆ ಮಾತ್ರ ಅವಕಾಶ ಕೊಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ಕೈಗಾರಿಕೆಗಳು ಕಾರ್ಯ ನಿರ್ವಹಿಸಬಹುದಾಗಿದೆ. ಆದರೆ, ಶೇ 33 ರಷ್ಟು ಸಿಬ್ಬಂದಿಗಳು ಮಾತ್ರ ಭಾಗಿಯಾಗಬೇಕು ಎನ್ನುವ ನಿಯಮ ಹಾಕಲಾಗಿದೆ.

Lockdown 3.0 Guidelines For Mysore Residence

ಸಾರ್ವಜನಿಕ ಅಂತರ ಕಾಯ್ದುಕೊಳ್ಳುವುದನ್ನು ಸಂಸ್ಥೆಗಳ ಮುಖ್ಯಸ್ಥರ ಜವಾಬ್ದಾರಿಯಾಗಿದೆ. ಸ್ಥಳೀಯವಾಗಿ ಸಿಗುವ ಕಾರ್ಮಿಕರನ್ನು ಮಾತ್ರ ಬಳಸಿಕೊಂಡು ನಿರ್ಮಾಣ ಮಾಡಬೇಕಿದೆ.ಹಾರ್ಡ್ ವೇರ್ ಅಂಗಡಿಗಳು, ಕಲ್ಲು, ಜಲ್ಲಿ, ಸಿಮೆಂಟ್ ಅಂಗಡಿಗಳು ತೆರೆಯಲು ಅವಕಾಶವಿದೆ.

ನಗರದ ವಾಣಿಜ್ಯ ಪ್ರದೇಶಗಳು ಹಾಗೂ ವಾಣಿಜ್ಯ ರಸ್ತೆಗಳಲ್ಲಿ ಅಗತ್ಯ ಸಾಮಗ್ರಿಗಳ ಅಂಗಡಿಗಳನ್ನು ಮಾತ್ರ ಅನುಮತಿ ನೀಡಲಾಗಿದೆ. ಜನವಸತಿ ಪ್ರದೇಶಗಳಲ್ಲಿ ಇರುವ ಎಲ್ಲಾ ಅಂಗಡಿಗಳು ತೆರೆಯಬಹುದಾಗಿದೆ. ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 91 ವಾಣಿಜ್ಯ ರಸ್ತೆಗಳ ಗುರುತು ಮಾಡಿದ್ದು, ಇಲ್ಲಿ ಹಣ್ಣು, ತರಕಾರಿ, ಹಾಲು, ದಿನಸಿ, ಔಷಧಿ ಮುಂತಾದ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

ಸಿಎಲ್2 ಮತ್ತು ಎಂ.ಎಸ್.ಐ.ಎಲ್ ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ, ಮೈಸೂರಿನ ಬಿಗ್ ಬಜಾರ್, ಈಜಿ ಡೇ, ಮಾಲ್ ಆಫ್ ಮೈಸೂರುನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ. ಕಟ್ಟಿಂಗ್ ಶಾಪ್, ಸ್ಪಾ, ಸಲೂನ್ ಅಂಗಡಿಗಳನ್ನು ತೆರೆಯಲು ಅವಕಾಶ ಇಲ್ಲ. ಆಟೋರಿಕ್ಷಾ, ಟ್ಯಾಕ್ಷಿ ಸಂಚಾರಕ್ಕೆ ಸಹ ಇಲ್ಲ

ಪಾನ್ ಮಸಾಲ, ಗುಟ್ಕಾ ಮಾರಾಟಕ್ಕೆ ಅವಕಾಶವಿದೆ. ಆದರೆ, ಅವುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಸೇವಿಸುವಂತಿಲ್ಲ. ಅಂತರ ಜಿಲ್ಲೆ ಮತ್ತು ಅಂತರಾಜ್ಯ ಸಂಚಾರಕ್ಕೆ ಪಾಸ್ ವ್ಯವಸ್ಥೆ ಇದೆ. ಮಧ್ಯಾಹ್ನ 12 ಗಂಟೆವರೆಗೆ ಸಾರ್ವಜನಿಕರು ಮುಕ್ತವಾಗಿ ಅಗತ್ಯ ಸೇವೆಗಳನ್ನು ಪಡೆಯಲು ಸಂಚರಿಸಬಹುದು.

ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆವರೆಗೆ ಅಗತ್ಯ ಸೇವೆಗಳಿಗೆ ಮಾತ್ರ ಹೊರಬರಬೇಕು ಎಂದು ಸೂಚನೆ ನೀಡಲಾಗಿದೆ. ನಂಜನಗೂಡಿನಲ್ಲೂ ಕಂಟೈನ್‍ಮೆಂಟ್ ಝೋನ್ ಹೊರತುಪಡಿಸಿ, ಉಳಿದ ಕಡೆ ಕೈಗಾರಿಕೆಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಕಂಟೈನ್‍ಮೆಂಟ್ ಜೋನ್‍ನಲ್ಲಿರುವ ಸಿಬ್ಬಂದಿಗಳು ಅಲ್ಲಿಗೆ ಬರುವಂತಿಲ್ಲ.

English summary
Lockdown 3.0 guidelines for mysore residence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X