ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದುರ್ನಾತ ತಾಳಲಾರದೆ ಕಾರ್ಖಾನೆಗೆ ಬೀಗ ಹಾಕಿದ ಕೂರ್ಗಳ್ಳಿ ಗ್ರಾಮಸ್ಥರು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್ 07: ಪ್ಲಾಸ್ಟಿಕ್ ಕಾರ್ಖಾನೆಯಿಂದ ಬರುವ ದುರ್ನಾತ ತಡೆಯಲಾರದೆ ಸ್ಥಳೀಯರು ಕಾರ್ಖಾನೆಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಮೈಸೂರು ಗ್ರಾಮಾಂತರದ ಕೂರ್ಗಳ್ಳಿಯಲ್ಲಿ ನಡೆದಿದೆ.

ಕೂರ್ಗಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಮೆಟ್ ಕ್ಯಾನ್ ಪ್ಯಾಕ್ಸ್ ಕಾರ್ಖಾನೆಯಿಂದ ದುರ್ವಾಸನೆ ಹೊಮ್ಮುತ್ತಿದ್ದು, ಸ್ಥಳೀಯರಿಗೆ ಸಮಸ್ಯೆಯಾಗಿದೆ. ಕಳೆದ ಒಂದು ವರ್ಷದಿಂದಲೂ ಫ್ಯಾಕ್ಟರಿಯ ದುರ್ವಾಸನೆ ವಿರುದ್ಧ ವಾಯು ಮಾಲಿನ್ಯ ಮಂಡಳಿ ಹಾಗೂ ಇನ್ನಿತರ ಅಧಿಕಾರಿಗಳಿಗೆ ದೂರು ನೀಡುತ್ತಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ.

ಮೈಸೂರು: ಕೊರೊನಾ ಸಂಕಷ್ಟದ ನಡುವೆ ಕಾರ್ಖಾನೆ ಬಂದ್, ಕಾರ್ಮಿಕರಿಗೆ ಶಾಕ್ಮೈಸೂರು: ಕೊರೊನಾ ಸಂಕಷ್ಟದ ನಡುವೆ ಕಾರ್ಖಾನೆ ಬಂದ್, ಕಾರ್ಮಿಕರಿಗೆ ಶಾಕ್

ಹೀಗಾಗಿ ಶನಿವಾರ ಸ್ಥಳೀಯರೇ ಕಾರ್ಖಾನೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕೆಟ್ಟ ವಾಸನೆಯಿಂದ ಉಸಿರು ಕಟ್ಟಿ ಮೂರ್ಛೆ ಹೋಗುತ್ತಿದ್ದಾರೆ. ಹಿರಿಯರು ಮತ್ತು ಮಕ್ಕಳಿಗೆ ತುಂಬಾ ತೊಂದರೆ ಆಗುತ್ತಿದೆ. ಉಸಿರಾಟ ಸಂಬಂಧಿ ಕಾಯಿಲೆಗೆ ತುತ್ತಾಗುವಂತಾಗಿದೆ ಎಂದು ದೂರಿದ್ದಾರೆ.

Mysuru: Locals Locked Plastic Factory Because Of Bad Smell

ಕೆಲವರು ದುರ್ವಾಸನೆ ತಾಳಲಾರದೆ ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ. ಕೂಡಲೇ ಈ ಕಾರ್ಖಾನೆ ಮುಚ್ಚಿ ನಮಗೆ ನೆಮ್ಮದಿಯಾಗಿ ಬದುಕಲು ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯರನ್ನು ಸಮಾಧಾನಗೊಳಿಸಿದ್ದಾರೆ.

English summary
Mysuru koorgalli locals locked plastic factory and protested due to bad smell coming from factory,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X