ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರಾ ಕಾರ್ಯಕ್ರಮಗಳ ಲೈವ್ ಸ್ಟ್ರೀಮಿಂಗ್: ಇಲ್ಲಿದೆ ಮಾಹಿತಿ...

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್ 16: ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ದಸರಾ ಆಚರಣೆಯನ್ನು ಸರಳ, ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದ್ದು, ಚಾಮುಂಡಿ ಬೆಟ್ಟ ಹಾಗೂ ಅರಮನೆ‌ ಆವರಣದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ವೆಬ್‌ಸೈಟ್ ಹಾಗೂ ಸಾಮಾಜಿಕ ಜಾಲತಾಣದ ಮೂಲಕ ನೇರಪ್ರಸಾರ (ಲೈವ್ ಸ್ಟ್ರೀಮಿಂಗ್) ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಿಳಿಸಿದರು.

ಚಾಮುಂಡಿ ಬೆಟ್ಟದಲ್ಲಿ ಅ.17ರಂದು ಬೆಳಿಗ್ಗೆ 7:45ರಿಂದ ಬೆಳಗ್ಗೆ 8:15 ರವರೆಗೆ ನಡೆಯುವ ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭ, ಅರಮನೆ ಆವರಣದಲ್ಲಿ ದಿನಾಂಕ ಅ.17ರಿಂದ 24ರವರೆಗೆ ಪ್ರತಿ ದಿನ ಸಂಜೆ ನಡೆಯುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮೈಸೂರು ಜಿಲ್ಲಾಡಳಿತದ‌ ವೆಬ್‌ಸೈಟ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಫೇಸ್‌ಬುಕ್ ಪೇಜ್ ಮತ್ತು ಯೂಟ್ಯೂಬ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.

ಸರಳ ದಸರಾ ಉದ್ಘಾಟನೆಗೆ ಸಿದ್ಧವಾದ ಚಾಮುಂಡಿ ಬೆಟ್ಟಸರಳ ದಸರಾ ಉದ್ಘಾಟನೆಗೆ ಸಿದ್ಧವಾದ ಚಾಮುಂಡಿ ಬೆಟ್ಟ

ದಸರಾ ಮಹೋತ್ಸವದ ಕೊನೆಯ ದಿನವಾದ ಅ.26ರಂದು ನಡೆಯುವ ಜಂಬೂಸವಾರಿ ಕಾರ್ಯಕ್ರಮವು ದೂರದರ್ಶನದ ಚಂದನ ವಾಹಿನಿಯಲ್ಲಿ ನೇರಪ್ರಸಾರ ಮಾಡಲಾಗುತ್ತಿದ್ದು, ಏಕ ಕಾಲದಲ್ಲಿ ಇತರೆ ಖಾಸಗಿ ವಾಹಿನಿಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ನೇರಪ್ರಸಾರವಾಗಲಿದೆ.

Mysuru Dasara: Live Stream Of Programmes Through Websites And Social Networks

ದಸರಾ ಕಾರ್ಯಕ್ರಮಗಳು ನಡೆಯುವ ಸಮಯವನ್ನು ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗಿದೆ. ನೇರಪ್ರಸಾರವನ್ನು (live streaming) ವೆಬ್‌ಸೈಟ್ ವಿಳಾಸ ಹಾಗೂ ಫೇಸ್‌ಬುಕ್ ಪೇಜ್ ಹಾಗೂ ಯೂಟ್ಯೂಬ್ ಲಿಂಕ್
ಮೂಲಕ ವೀಕ್ಷಿಸಬಹುದು.

English summary
"Dasara is being celebrated in a simple and traditional manner this time due to corona. All events in the Chamundi Hills and Palace premises are live streamed through the website and social network. people can watch it sitting at home" said DC Rohini Sindhuri
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X