ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಹಿತ್ಯಾಸಕ್ತರಿಗೆ ಸಿಕ್ತು ಉಚಿತ ಪ್ರವಾಸದ ಗಿಫ್ಟ್

By Yashaswini
|
Google Oneindia Kannada News

ಮೈಸೂರು, ನವೆಂಬರ್ 25 : ಪ್ರವಾಸೋದ್ಯಮ ಇಲಾಖೆಯಿಂದ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿರುವ ಸಾಹಿತ್ಯಾಸಕ್ತರಿಗೆ ಕವಿರಾಜಮಾರ್ಗ ಉಚಿತ ಪ್ರವಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಈ ಪ್ರವಾಸದಲ್ಲಿ ಮೈಸೂರಿನಲ್ಲಿರುವ ಕುವೆಂಪು ಮನೆ, ಆರ್.ಕೆ ನಾರಾಯಣ್ ಅವರ ಸಂಗ್ರಹಾಲಯ , ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಹಾಗೂ ರಂಗಾಯಣಕ್ಕೆ ಭೇಟಿ ನೀಡಿ ಅಲ್ಲಿಯ ವಿಶೇಷತೆಗಳನ್ನು ಸಾಹಿತ್ಯಾಸಕ್ತರು ವೀಕ್ಷಿಸಲಿದ್ದಾರೆ.ಇಂದು ನಡೆದ ಪ್ರವಾಸ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಸಾಹಿತ್ಯಾಸಕ್ತರು ಭಾಗವಹಿಸಿದ್ದರು. ನಾಳೆ (ನ. 26 ) ಬೆಳಿಗ್ಗೆ 10 ಗಂಟೆಗೆ ಈ ಪ್ರವಾಸ ನಡೆಯಲಿದೆ.

Literature lovers get free free package of Mysuru sight seeing

ಮಲ್ಲಿಗೆ ನಗರಿಗೆ ಬಂದಿಳಿದಿರುವ ಕನ್ನಡ ಪುಸ್ತಕ ಪ್ರಿಯರಿಗೆ ಹಬ್ಬವೋ ಹಬ್ಬ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 300ಕ್ಕೂ ಹೆಚ್ಚು ಪ್ರಕಾಶಕರು ಬಂದಿದ್ದು, ಲಕ್ಷಾಂತರ ಕೃತಿಗಳನ್ನು ಮಾರಾಟಕ್ಕಿಟ್ಟಿದ್ದಾರೆ.
ಈ ಹಿಂದಿನ ಯಾವುದೇ ಸಮ್ಮೇಳನದಲ್ಲೂ ಇಷ್ಟೊಂದು ಪ್ರಮಾಣದ ಪ್ರಕಾಶಕರು ಬಂದಿರುವುದು ಹಾಗೂ ಇಷ್ಟೊಂದು ಸಂಖ್ಯೆಯ ಕನ್ನಡ ಪುಸ್ತಕಗಳು ಪ್ರದರ್ಶನ ಹಾಗೂ ಮಾರಾಟಕ್ಕೆ ಲಭ್ಯವಾದ ಉದಾಹರಣೆಯೇ ಇಲ್ಲ

ನಿನ್ನೆ ಆರಂಭವಾದ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಒಂದು ತೂಕವಾದರೆ, ಪುಸ್ತಕ ಮೇಳದ್ದು ಇನ್ನೊಂದು ತೂಕ. ಮಹಾರಾಜ ಕಾಲೇಜು ಮೈದಾನದ ಪ್ರಧಾನ ವೇದಿಕೆ ಪಕ್ಕದಲ್ಲೇ ಇರುವ ಆವರಣದಲ್ಲಿ ಮೂರು ವಿಭಾಗಗಳಲ್ಲಿ ಪುಸ್ತಕ ಮಳಿಗೆಗಳಿಗೆ ಜಾಗ ಕಲ್ಪಿಸಲಾಗಿದೆ.

260 ವಾಣಿಜ್ಯ ಮಳಿಗೆಗಳು, 24 ಪ್ರದರ್ಶನ ಮಳಿಗೆಗಳು ಇಲ್ಲಿವೆ. 465 ಮಳಿಗೆಗಳಲ್ಲಿ ಕಣ್ಣು ದಣಿಯುವಷ್ಟು ಪುಸ್ತಕಗಳನ್ನು ನೋಡಬಹುದು. ನೋಡಿದರೆ ಸಾಲದು, ಎಲ್ಲರೂ ಅವುಗಳನ್ನು ಖರೀದಿಸಬೇಕೆಂಬ ಕಾರಣಕ್ಕೆ ರಿಯಾಯಿತಿ ದರದಲ್ಲೂ ಪುಸ್ತಕಗಳನ್ನು ಪ್ರಕಾಶಕರು ಮಾರಾಟ ಮಾಡುತ್ತಿದ್ದಾರೆ. ಕನಿಷ್ಠ ಶೇ. 10ರಿಂದ ಗರಿಷ್ಠ ಶೇ. 60ರವರೆಗೂ ರಿಯಾಯಿತಿ ನೀಡಿ ಸಾಹಿತ್ಯಾಸಕ್ತರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.

ಇನ್ನು ಪುಸ್ತಕ ಮೇಳಕ್ಕೆ ಆಗಮಿಸಿದ ಪ್ರಕಾಶಕರು ಹಾಗೂ ಲೇಖಕರದ್ದು ವೈರುಧ್ಯದ ಮಾತುಗಳೇ ಹೆಚ್ಚು. ಒನ್ ಇಂಡಿಯಾದೊಂದಿಗೆ ಮಾತನಾಡಿದ ಎ. ಆರ್ .ಮಣಿಕಾಂತ್, ಮಳಿಗೆಗಳನೆನ್ನೋ ಹೆಚ್ಚು ಹಣವನ್ನು ಜಿಲ್ಲಾಡಳಿತ ಪಡೆದುಕೊಂಡಿದೆ. ಜನರಿಗೆ ಅದಕ್ಕೆ ತಕ್ಕುದಾದ ಸೌಲಭ್ಯವನ್ನು ನೀಡಿಲ್ಲ. ಸಾಹಿತ್ಯ ಸಮ್ಮೇಳನದಲ್ಲಿ ಇಂತಹ ತಪ್ಪುಗಳು ಮರುಕಳಿಸದಂತೆ ಎಚ್ಚರವಹಿಸಬೇಕೆಂದು ತಿಳಿಸಿದರು.

ಇನ್ನು ಮುಂದುವರೆದು ಮಾತನಾಡಿದ ಪ್ರಖ್ಯಾತ ಛಾಯಾಚಿತ್ರಗಾಹಕ ಲೋಕೇಶ್ ಮೊಸಳೆ, ಕಾರ್ಯಕ್ರಮದಲ್ಲಿ ಲೋಪ ದೋಷಗಳು ಸಹಜ. ಆದರೆ ಇದು ಮರುಕಳಿದಂತೆ ನೋಡಿಕೊಳ್ಳಬೇಕಾದದ್ದು ಆಯೋಜಕರ ಕರ್ತವ್ಯ ಎಂದರು.

ಛಂದ ಪುಸ್ತಕ ಪ್ರಕಾಶನದ ವಸುದೇಂದ್ರ ಮಾತನಾಡಿ, ಸಮ್ಮೇಳನ ಹಬ್ಬವಾಗಲಿ. ಮನೆ - ಮನಗಳು ತಣಿಯುವ ಮಧುರ ಬೆಸುಗೆಯಂತಾಗಲಿ ಎಂದು ಹಾರೈಸಿದ್ದರಷ್ಟೇ ಅಲ್ಲದೇ ಪ್ರತಿಯೊಬ್ಬರು ಕನ್ನಡ ಪುಸ್ತಕಗಳನ್ನು ಕೊಂಡು ಓದಿ ಲೇಖರನ್ನು ಪ್ರೇರೇಪಿಸಿ ಎಂದರು.

ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ ಮಾತನಾಡಿ, ಕನ್ನಡ ಪುಸ್ತಕಗಳನ್ನು ಹೆಚ್ಚು ಹೊರತರಬೇಕಾದರೆ , ಓದುಗರು ಹೆಚ್ಚಾಗಬೇಕು. ಇದಕ್ಕೆ ಪೂರಕವಾದ ಪ್ರತೀಕೂಲ ವಾತಾವರಣ ನಿರ್ಮಾಣವಾಗಬೇಕು. ಇಲ್ಲವಾದಲ್ಲಿ ಕನ್ನಡ ಅಧಃಪತನಕ್ಕಿಳಿಯುವುದರಲ್ಲಿ ಅನುಮಾನವಿಲ್ಲ ಎಂದರು. ವಂಶಿ ಪ್ರಕಾಶನದ ಮೋಹನ್ ಮಾತನಾಡಿ, ಇದೇ ಪ್ರಪ್ರಥಮ ಬಾರಿಗೆ ಪುಸ್ತಕ ಮೇಳದಲ್ಲಿ ಭಾಗವಹಿಸಿದ್ದೇನೆ. ಜನರ ರೆಸ್ಪಾನ್ಸ್ ನೋಡಿ ಸಂತಸ ತಂದಿದೆ ಎಂದರು. ಒಟ್ಟಾರೆ ಇಂದಿನ ಪುಸ್ತಕ ಮೇಳ ಸಾಹಿತ್ಯಾಸಕ್ತರ ಓದಿನ ಹಸಿವನ್ನು ತಣಿಸುತ್ತಿರುವುದರಲ್ಲಿ ಎರಡು ಮಾತೇ ಇಲ್ಲ.

English summary
Department of Tourism organising free tour package for literature lovers who are participating in Mysuru Kannada sahitya sammelana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X