ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಬ್ಬದ ವಿಶೇಷ ರೈಲು; ಮೈಸೂರಿನಿಂದ ಸಂಚರಿಸುವ ರೈಲುಗಳ ಪಟ್ಟಿ

|
Google Oneindia Kannada News

ಮೈಸೂರು, ಅಕ್ಟೋಬರ್ 20: ನೈಋತ್ಯ ರೈಲ್ವೆ ದೀಪಾವಳಿ ಮತ್ತು ದಸರಾ ಹಬ್ಬದ ಅಂಗವಾಗಿ ದೇಶಾದ್ಯಂತ ವಿವಿಧ ಪ್ರದೇಶಗಳಿಗೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಮೈಸೂರಿನಿಂದ ಸಹ ವಿಶೇಷ ರೈಲುಗಳು ಸಂಚಾರ ನಡೆಸಲಿವೆ.

ಮೈಸೂರು ನಗರದಿಂದ ಅಕ್ಟೋಬರ್ 20ರಿಂದ ನವೆಂಬರ್ 30ರ ತನಕ ವಿಶೇಷ ರೈಲುಗಳು ವಿವಿಧ ಪ್ರದೇಶಗಳಿಗೆ ಸಂಚಾರ ನಡೆಸಲಿವೆ. ಕರ್ನಾಟಕದ ವಿವಿಧ ಪ್ರದೇಶ ಮತ್ತು ಹೊರ ರಾಜ್ಯಗಳಿಗೆ ಸಹ ರೈಲು ಸಂಚಾರ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಧಾರವಾಡ-ಬೆಳಗಾವಿ ರೈಲು ಮಾರ್ಗಕ್ಕೆ 335 ಹೆಕ್ಟೇರ್ ಭೂ ಸ್ವಾಧೀನ ಧಾರವಾಡ-ಬೆಳಗಾವಿ ರೈಲು ಮಾರ್ಗಕ್ಕೆ 335 ಹೆಕ್ಟೇರ್ ಭೂ ಸ್ವಾಧೀನ

ದಸರಾ ಹಬ್ಬದ ಸಂದರ್ಭದಲ್ಲಿ ಮೈಸೂರಿಗೆ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದರು. ಆದರೆ, ಈ ವರ್ಷ ಕೋವಿಡ್ ಭೀತಿ ಹಿನ್ನಲೆಯಲ್ಲಿ ಸರಳವಾಗಿ ದಸರಾವನ್ನು ಆಚರಿಸಲಾಗುತ್ತಿದೆ. ಜಂಬೂ ಸವಾರಿ ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಿರಲಿದೆ.

ಹುಬ್ಬಳ್ಳಿ-ವಿಜಯವಾಡ ಹಬ್ಬದ ವಿಶೇಷ ರೈಲು; ವೇಳಾಪಟ್ಟಿ ಹುಬ್ಬಳ್ಳಿ-ವಿಜಯವಾಡ ಹಬ್ಬದ ವಿಶೇಷ ರೈಲು; ವೇಳಾಪಟ್ಟಿ

ಮುಂದಿನ ದಿನಗಳಲ್ಲಿ ಪ್ರಯಾಣಿಕರ ಬೇಡಿಕೆ ನೋಡಿಕೊಂಡು ವಿಶೇಷ ರೈಲುಗಳನ್ನು ಓಡಿಸಲು ರೈಲ್ವೆ ತೀರ್ಮಾನಿಸಿದೆ. ಸದ್ಯ ಘೋಷಣೆ ಮಾಡಿರುವ ರೈಲುಗಳು ನವೆಂಬರ್ 30ರ ತನಕ ಮಾತ್ರ ಸಂಚಾರ ನಡೆಸಲಿವೆ.

ಹಬ್ಬಕ್ಕಾಗಿ 392 ವಿಶೇಷ ರೈಲು, ಟಿಕೆಟ್ ದರವೂ ಹೆಚ್ಚುಹಬ್ಬಕ್ಕಾಗಿ 392 ವಿಶೇಷ ರೈಲು, ಟಿಕೆಟ್ ದರವೂ ಹೆಚ್ಚು

ರೈಲುಗಳ ವೇಳಾಪಟ್ಟಿ

ರೈಲುಗಳ ವೇಳಾಪಟ್ಟಿ

ಮೈಸೂರು-ಧಾರವಾಡ ನಡುವೆ ಪ್ರತಿದಿನ ರೈಲು ನಂಬರ್ 07301 ಅಕ್ಟೋಬರ್ 21 ರಿಂದ ಡಿಸೆಂಬರ್ 1ರ ತನಕ ಸಂಚಾರ ನಡೆಸಲಿದೆ. ಧಾರವಾಡ-ಮೈಸೂರು ನಡುವೆ (07302) ಅಕ್ಟೋಬರ್ 20ರಿಂದ ನವೆಂಬರ್ 30ರ ತನಕ ಸಂಚರಿಸಲಿದೆ.

ಮೈಸೂರು-ವಾರಣಾಸಿ ರೈಲು

ಮೈಸೂರು-ವಾರಣಾಸಿ ರೈಲು

ಮೈಸೂರು-ವಾರಣಾಸಿ ನಡುವೆ ರೈಲು ನಂಬರ್ 06229 ಮಂಗಳವಾರ ಮತ್ತು ಗುರುವಾರ ಸಂಚಾರ ನಡೆಸಲಿದೆ. ಗುರುವಾರ ಮತ್ತು ಶನಿವಾರ ರೈಲು ನಂಬರ್ 062230 ವಾರಣಾಸಿ-ಮೈಸೂರು ನಡುವೆ ಸಂಚರಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ಮೈಸೂರು-ಅಜ್ಮೀರ್ ವಿಶೇಷ ರೈಲು

ಮೈಸೂರು-ಅಜ್ಮೀರ್ ವಿಶೇಷ ರೈಲು

ರೈಲು ನಂಬರ್ 06209 ಮೈಸೂರು ಮತ್ತು ಅಜ್ಮೀರ್ ನಡುವೆ ಶುಕ್ರವಾರ ಮತ್ತು ಭಾನುವಾರ ಸಂಚಾರ ನಡೆಸಲಿದೆ. ಅಜ್ಮೀರ್ ಮತ್ತು ಮೈಸೂರು ನಡುವೆ 06210 ರೈಲು ಮಂಗಳವಾರ ಮತ್ತು ಗುರುವಾರ ಸಂಚಾರ ನಡೆಸಲಿದೆ.

ವಿಶೇಷ ರೈಲುಗಳ ಸಂಚಾರ

ವಿಶೇಷ ರೈಲುಗಳ ಸಂಚಾರ

ಕಾಚಿಗುಡ-ಮೈಸೂರು ನಡುವೆ ರೈಲು ಸಂಖ್ಯೆ 02785 ಪ್ರತಿದಿನ ಸಂಚಾರ ನಡೆಸಲಿದೆ. 02786 ನಂಬರ್ ರೈಲು ಪ್ರತಿದಿನ ಕಾಚಿಗುಡ ಮೈಸೂರು ನಡುವೆ ಓಡಲಿದೆ.

ರೈಲು ಸಂಖ್ಯೆ 02577 ಮಂಗಳವಾರ ದರ್ಭಾಂಗ್‌ನಿಂದ ಮೈಸೂರಿಗೆ ಸಂಚಾರ ನಡೆಸಲಿದೆ. 02578 ಶನಿವಾರ ಮೈಸೂರಿನಿಂದ ದರ್ಭಾಂಗ್‌ಗೆ ಸಂಚಾರ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

English summary
South Western Railway will run festival special trains from Mysuru. Here are the list of trains run from Mysuru to various place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X