ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಯೋಗ ದಿನಾಚರಣೆ: ಯೋಗಪಟುಗಳ ನಿರಾಸಕ್ತಿ

|
Google Oneindia Kannada News

ಮೈಸೂರು, ಜೂನ್ 10 : ಜೂನ್ 21ರಂದು ವಿಶ್ವವಿಖ್ಯಾತ ಯೋಗ ದಿನಾಚರಣೆ ಅಂಗವಾಗಿ ನಡೆಯಲಿರುವ ಸಾಮೂಹಿಕ ಯೋಗ ಪ್ರದರ್ಶನಕ್ಕೆ ಜಿಲ್ಲಾಡಳಿತ ಗಿನ್ನಿಸ್ ದಾಖಲೆಗೆ ಅರ್ಜಿ ಸಲ್ಲಿಸದಿದ್ದ ಕಾರಣ ಯೋಗದ ತಾಲೀಮಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಎರಡು ವರ್ಷದ ಹಿಂದಿನ ಗಿನ್ನಿಸ್ ದಾಖಲೆಯನ್ನು ಮುರಿಯಬೇಕೆಂದು ಮೈಸೂರಿನ ಸಂಘಸಂಸ್ಥೆಗಳು ತಯಾರಿ ನಡೆಸಿದ್ದವು. ಆದರೆ ಮೈಸೂರು ಜಿಲ್ಲಾಡಳಿತ ಈ ಬಾರಿ ಗಿನ್ನಿಸ್ ದಾಖಲೆಗೆ ಹೋಗದಿರಲು ಪೂರ್ವಭಾವಿ ಸಭೆಯಲ್ಲಿ ಪ್ರಕಟಿಸಿತು. ಈ ಹೇಳಿಕೆ ಹಿನ್ನೆಲೆ ನಿರಾಸೆಗೊಂಡಿರುವ ಯೋಗಪಟುಗಳು ಯೋಗ ತಾಲೀಮಿಗೂ ಆಸಕ್ತಿ ತೋರಿಸುತ್ತಿಲ್ಲ. ಪರಿಣಾಮ ಮೈಸೂರು ಅರಮನೆ ಅಂಗಳದಲ್ಲಿ ನಡೆದ ಯೋಗ ತಾಲೀಮಿಗೆ ಹೆಚ್ಚಿನ ಸಂಖ್ಯೆಯಲ್ಲಿ ಯೋಗಪಟುಗಳು ಭಾಗವಹಿಸಿರಲಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಸಹ ಯೋಗ ತಾಲೀಮಿನ ಕಡೆ ಮುಖ ಹಾಕದಿದ್ದದ್ದು ವಿಪರ್ಯಾಸ.

 'ಈ ಬಾರಿ ಮೈಸೂರಿನಲ್ಲಿ ಯೋಗ ವಿಶ್ವ ದಾಖಲೆಗೆ ಪ್ರಯತ್ನವಿಲ್ಲ' 'ಈ ಬಾರಿ ಮೈಸೂರಿನಲ್ಲಿ ಯೋಗ ವಿಶ್ವ ದಾಖಲೆಗೆ ಪ್ರಯತ್ನವಿಲ್ಲ'

ಕಳೆದ ವಾರ ನಡೆದ ತಾಲೀಮಿನಲ್ಲಿ 500 ಮಂದಿಯಷ್ಟೇ ಭಾಗವಹಿಸಿದ್ದರು. ಜಿಲ್ಲಾಡಳಿತ ಈ ಬಾರಿ ಗಿನ್ನಿಸ್ ದಾಖಲೆಗೆ ಅರ್ಜಿ ಸಲ್ಲಿಸದಿರಲು ನಿರ್ಧರಿಸಿತು. ಜತೆಗೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ನಡೆಯುವ ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗವಹಿಸುವುದಿಲ್ಲ ಎಂಬುದೂ ಖಚಿತಗೊಂಡಿತು. ಇದರಿಂದ ಜನಪ್ರತಿನಿಧಿಗಳೂ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಯೋಗಪಟುಗಳು ತಾಲೀಮಿನಲ್ಲಿ ಭಾಗವಹಿಸಲಿಲ್ಲ.

less interest for World yoga day celebration in Mysuru

ಸಂಘಟಕರು ಯೋಗ ದಿನಾಚರಣೆಯಂದು ಒಂದು ಲಕ್ಷ ಮಂದಿಯನ್ನು ಸೇರಿಸುವ ಗುರಿ ಹೊಂದಿದ್ದಾರೆ. ಸದ್ಯ ನಡೆದ 2ನೇ ತಾಲೀಮಿನಲ್ಲಿ 2,500 ಮಂದಿ ಭಾಗವಹಿಸಿದ್ದರು. ಮುಂದಿನ ವಾರ ರೇಸ್‌ಕೋರ್ಸ್ ನಲ್ಲಿ ಮತ್ತೊಂದು ಸುತ್ತಿನ ತಾಲೀಮು ನಡೆಯಲಿದೆ.

English summary
last week Mysuru district administration announced that, this time mysuru wont try for gunnies record. so people are responding less for world yoga day rehearsal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X