ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

100 ಅಡಿ ಬಾವಿಯಲ್ಲಿ ಚಿರತೆ ಪತ್ತೆ: ಸೆರೆ ಹಿಡಿಯಲು ಅರಣ್ಯ ಇಲಾಖೆ ಹರಸಾಹಸ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 20: ಎಚ್.ಡಿ ಕೋಟೆ ತಾಲ್ಲೂಕಿನ ಕಾರಾಪುರ ಗ್ರಾಮದಲ್ಲಿ ಬಳಿ ನೀರಿಲ್ಲದ ಬಾವಿಯೊಂದಕ್ಕೆ ಚಿರತೆ ಬಿದ್ದು, ಅದನ್ನು ಮೇಲೆತ್ತಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

Recommended Video

Drone Prathap Warned by German Company BillzEye | Oneindia Kannada

ಈ ಬಾವಿಗೆ ಚಿರತೆ ಬಿದ್ದಿರುವುದನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ನಂತರ ಅಂತರಸಂತೆ ವಲಯ ಅರಣ್ಯಾಧಿಕಾರಿ ಸಿದ್ದರಾಜು ಅವರೇ ಸ್ವತಃ ಪಂಜರದೊಳಗೆ ಕುಳಿತು 100 ಅಡಿಯಿರುವ ಬಾವಿಯೊಳಗೆ ಇಳಿದು ಪರಿಶೀಲಿಸಿದರೂ ಚಿರತೆ ಪತ್ತೆ ಆಗಿರಲಿಲ್ಲ.

ಚಿರತೆ ರಕ್ಷಿಸಲು 100 ಅಡಿ ಬಾವಿಗಿಳಿದ ನಾಗರಹೊಳೆ ಅರಣ್ಯಾಧಿಕಾರಿ ಸಿದ್ದರಾಜುಚಿರತೆ ರಕ್ಷಿಸಲು 100 ಅಡಿ ಬಾವಿಗಿಳಿದ ನಾಗರಹೊಳೆ ಅರಣ್ಯಾಧಿಕಾರಿ ಸಿದ್ದರಾಜು

ನಂತರ ಪುನಃ ಅರಣ್ಯ ಇಲಾಖೆ ಸಿಬ್ಬಂದಿಗಳು ಕ್ಯಾಮೆರಾ ಬಾವಿಯೊಳಗೆ ಬಿಟ್ಟು ಪರಿಶೀಲಿಸಿದಾಗ ಚಿರತೆ ಪತ್ತೆಯಾಗಿದೆ. ಚಿರತೆ ರಕ್ಷಣೆಗಾಗಿ ಅರಣ್ಯ ಸಿಬ್ಬಂದಿ ಸತತ ಮೂರು ದಿನಗಳಿಂದಲೂ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸುಮಾರು 40ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

Mysore: Leopard Found In A 100-Ft Dry Well: Forest Department Trying To Capture

ಚಿರತೆಯನ್ನು ಮೇಲೆತ್ತುವವರೆಗೂ ಅದಕ್ಕೆ ಆಹಾರವಾಗಿ ಕೋಳಿ ಮಾಂಸವನ್ನು ಬಾವಿಗೆ ಹಾಕಲಾಗುತ್ತಿತ್ತು. ಮಾಂಸ ಮತ್ತು ನೀರನ್ನು ಚಿರತೆಗೆ ಕೊಡಲಾಗುತ್ತಿದೆ. ಸ್ಥಳದಲ್ಲಿ ಜನಜಂಗುಳಿ ನಿಯಂತ್ರಿಸಲು ಪೋಲೀಸರು ಸಾಹಸ ಪಡುತ್ತಿದ್ದಾರೆ.

English summary
The leopard was found in well when forest department personnel checked by the camera
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X