ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್.ಡಿ. ಕೋಟೆ; ಹಸಿವಿನಿಂದ ಬಂದು, ವಿದ್ಯುತ್ ತಂತಿಗೆ ಬಲಿಯಾದ ಚಿರತೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 12: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದು ವಿದ್ಯುತ್ ತಂತಿಗೆ ಸಿಲುಕಿ ಚಿರತೆಯೊಂದು ಸಾವನ್ನಪ್ಪಿದ ಘಟನೆ ಎಚ್.ಡಿ.ಕೋಟೆ ತಾಲೂಕು ಜೀರಿಯಾ ಬಳಿ ಬುಧವಾರ ರಾತ್ರಿ ನಡೆದಿದೆ.

ಮೈಸೂರು ಜಿಲ್ಲೆ ಎಚ್.ಡಿ‌.ಕೋಟೆ ತಾಲೂಕಿನ ಜೀರಿಯಾ ಗ್ರಾಮದಲ್ಲಿ ರೈತರೊಬ್ಬರು ಅಕ್ರಮವಾಗಿ ನೀರಿನ ಪಂಪ್ ಸೆಟ್ ಗೆ ವಿದ್ಯುತ್ ತಂತಿ ಸಂಪರ್ಕ ಕಲ್ಪಿಸಿದ್ದರು. ಆಹಾರವನ್ನು ಹುಡುಕಿಕೊಂಡು ಬಂದಿದ್ದ ಚಿರತೆಯೊಂದು ಬಾಯಿಯಲ್ಲಿ ವಿದ್ಯುತ್ ತಂತಿಯನ್ನು ಕಚ್ಚಿಕೊಂಡಿರುವ ಸ್ಥಿತಿಯಲ್ಲಿಯೇ ಜೋತಾಡುತ್ತಾ ಅಸುನೀಗಿದೆ. ಸುದ್ದಿ ತಿಳಿಯುತಿದ್ದಂತೆಯೇ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಮೈಸೂರಿನ ಕೋಳಿ ಫಾರಂನಲ್ಲಿ ಮರಿ ಚಿರತೆ ಪ್ರತ್ಯಕ್ಷಮೈಸೂರಿನ ಕೋಳಿ ಫಾರಂನಲ್ಲಿ ಮರಿ ಚಿರತೆ ಪ್ರತ್ಯಕ್ಷ

Leopard Died By An Electric Shock In HD Kote Of Mysuru

ನಾಗರಹೊಳೆ‌ ರಾಷ್ಟ್ರೀಯ ಉದ್ಯಾನವನದ ಅಂತರಸಂತೆ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, 4 ವರ್ಷ ಪ್ರಾಯದ್ದೆನ್ನಲಾದ ಚಿರತೆಯ ಶವ ಪರೀಕ್ಷೆ ನಡೆಸಲಾಗಿದೆ. ಮೊಕದ್ದಮೆ ದಾಖಲಿಸಿಕೊಂಡಿರುವ ಅರಣ್ಯಾಧಿಕಾರಿಗಳು ಮುಂದಿನ ತನಿಖೆ ನಡೆಸುತಿದ್ದಾರೆ.

English summary
A leopard which came in search of food died by an electric shock in jeeria of hd kote in mysuru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X