ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ, ಡಿಸಿಎಂ ಕಳೆದುಹೋಗಿದ್ದಾರೆ, ಹುಡುಕಿಕೊಡಿ ಎಂದು ದೂರು ಕೊಡಲು ಮುಂದಾದ ಮೈಸೂರಿನ ವಕೀಲ

|
Google Oneindia Kannada News

ಮೈಸೂರು, ಅಕ್ಟೋಬರ್. 25: ವಾಲ್ಮೀಕಿ ಜಯಂತಿ ಉತ್ಸವದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಗೈರು ಹಾಜರಾದ ಹಿನ್ನೆಲೆಯಲ್ಲಿ ಅವರನ್ನು ಹುಡುಕಿಕೊಡಿ ಎಂದು ನಗರದ ವಕೀಲರೊಬ್ಬರು ಪೊಲೀಸರ ಮೊರೆ ಹೋಗಿದ್ದಾರೆ.

ಬುಧವಾರ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಸಿಎಂ ಹಾಗೂ ಡಿಸಿಎಂ ಇಬ್ಬರು ಗೈರು ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಹುಡುಕಿಕೊಡಿ ಎಂದು ಮೈಸೂರಿನ ಲಕ್ಷ್ಮೀಪುರಂ ಠಾಣೆಗೆ ದೂರು ನೀಡಲು ವಕೀಲ ಪಡುವಾರಹಳ್ಳಿ ರಾಮಕೃಷ್ಣ ಮುಂದಾಗಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿಮಾಜಿ ಪ್ರಧಾನಿ ದೇವೇಗೌಡರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ

ಇಬ್ಬರು ನಾಯಕರು ಗೈರು ಹಾಜರಾಗುವ ಮೂಲಕ ಆ ಸಮುದಾಯದವರಿಗೆ ಅಪಮಾನ ಮಾಡಿದ್ದಾರೆ. ಆದ್ದರಿಂದ ಈ ಇಬ್ಬರೂ ರಾಜ್ಯದ ಜನತೆ, ವಾಲ್ಮೀಕಿ ಸಮುದಾಯಕ್ಕೆ ಕ್ಷಮೆ ಯಾಚಿಸಬೇಕು ಎಂದು ವಕೀಲರು ಆಗ್ರಹಿಸಿದ್ದಾರೆ.

Lawyer Paduvahalli Ramakrishna wants to file a complaint

ಆಗ ಖರ್ಗೆಗೆ ಅರಸು ಪ್ರಶಸ್ತಿ, ಈಗ ದೇವೇಗೌಡರಿಗೆ ವಾಲ್ಮೀಕಿ ಪುರಸ್ಕಾರ!ಆಗ ಖರ್ಗೆಗೆ ಅರಸು ಪ್ರಶಸ್ತಿ, ಈಗ ದೇವೇಗೌಡರಿಗೆ ವಾಲ್ಮೀಕಿ ಪುರಸ್ಕಾರ!

ಸಿಎಂ ಕುಮಾರಸ್ವಾಮಿ ಅವರು ಬುಧವಾರ ಉದರಬೇನೆಯಿಂದ ಬಳಲುತ್ತಿದ್ದ ಕಾರಣ ಅಂದಿನ ಅವರ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿರುವ ಬಗ್ಗೆ ಸಿಎಂ ಕಚೇರಿ ನೀಡಿರುವ ಸ್ಪಷ್ಟನೆ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ, ಅದೇನೆ ಇರಲಿ ಸಮಾಜದ ಜನತೆ ಸಿಎಂ, ಡಿಸಿಎಂ ವರ್ತನೆಯಿಂದ ಅಸಮಧಾನಗೊಂಡಿದ್ದಾರೆ. ವಾಲ್ಮೀಕಿ ಬಗ್ಗೆ ನಿಜವಾದ ಗೌರವವಿದ್ದರೆ ತಮ್ಮ ಕಚೇರಿಯಲ್ಲೇ ಜಯಂತಿ ಆಚರಿಸಬೇಕು ಎಂದು ವಕೀಲ ರಾಮಕೃಷ್ಣ ಒತ್ತಾಯಿಸಿದರು.

ವಾಲ್ಮೀಕಿ ಜಯಂತಿಗೆ ಸಿಎಂ ಗೈರು: ವಿಧಾನಸೌಧದ ಎದುರು ಪ್ರತಿಭಟನೆವಾಲ್ಮೀಕಿ ಜಯಂತಿಗೆ ಸಿಎಂ ಗೈರು: ವಿಧಾನಸೌಧದ ಎದುರು ಪ್ರತಿಭಟನೆ

ಮಾಜಿ ಪ್ರಧಾನಿ ದೇವೇಗೌಡರಿಗೆ ವಾಲ್ಮೀಕಿ ಪ್ರಶಸ್ತಿ ನೀಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ ದೇವೇಗೌಡರಿಗೆ ವಾಲ್ಮೀಕಿ ಪ್ರಶಸ್ತಿ ಕೊಟ್ಟಿರುವುದು ಸೂಕ್ತವಲ್ಲ. ಅವರಿಗೆ ವಾಲ್ಮೀಕಿ ಗೌರವ ನೀಡಿರುವುದಕ್ಕೆ ನನ್ನ ವಿರೋಧವಿದೆ. ನಾಯಕ ಸಮುದಾಯದಲ್ಲಿ ಅರ್ಹ ವ್ಯಕ್ತಿಗಳು ಇದ್ದಾರೆ. ಅವರಿಗೆ ನೀಡಿ ಗೌರವ ಒದಗಿಸಬೇಕಿತ್ತು ಎಂದು ವಕೀಲ ಪಡುವಾರಹಳ್ಳಿ ರಾಮಕೃಷ್ಣ ಸೂಚಿಸಿದ್ದಾರೆ.

English summary
Chief Minister and Deputy Chief minister both were absent in Valmiki Jayanti program. So Lawyer Paduvahalli Ramakrishna wants to file a complaint.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X