• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಿನಲ್ಲಿ ಲ್ಯಾಂಟನ್ ಪಾರ್ಕ್ ನೋಡಲು ಹರಿದುಬಂತು ಜನಸಾಗರ

|

ಮೈಸೂರು, ಅಕ್ಟೋಬರ್ 29: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಹಾಗೂ ದಸರಾ ವಸ್ತುಪ್ರದರ್ಶನದ ವೈಭವವನ್ನು ಇನ್ನಷ್ಟು ಹೆಚ್ಚಿಸಲು 'ಲ್ಯಾಂಟನ್ ಪಾರ್ಕ್' ಸಜ್ಜಾಗಿದೆ.

ಭಾರತದಲ್ಲಿ ಇದೇ ಮೊದಲ ಬಾರಿಗೆ ಲ್ಯಾಂಟನ್ ಪಾರ್ಕ್ ಸಾಂಸ್ಕೃತಿಕ ಲೋಕವನ್ನು ಅನಾವರಣಗೊಳಿಸುತ್ತಿದ್ದು, 15 ಸಾವಿರ ಚದರ ಅಡಿ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಪಾರ್ಕ್‌ನಲ್ಲಿ ವಿವಿಧ ಗಾತ್ರದ ವರ್ಣರಂಜಿತ ಲ್ಯಾಂಟನ್ಗಳನ್ನು ವಿನ್ಯಾಸಗೊಳಿಸಲಾಗಿದೆ.

ಹೆಲಿರೈಡ್ ಗೆ ಪ್ರವಾಸಿಗರಿಂದ ಭರಪೂರ ಸ್ಪಂದನೆ, ಈ ಜಾಲಿ ರೈಡ್ ಮತ್ತಷ್ಟು ದಿನ ಮುಂದುವರೆಯಲಿದೆಯಾ?

ನಗರದ 'ಡ್ರೀಮ್‌ ಪೆಟಲ್ಸ್' ಸಂಸ್ಥೆಯು ಚೀನಾದ 20 ಮಂದಿ ಪರಿಣತರ ನೆರವಿನಿಂದ ಈ ಪಾರ್ಕ್‌ ನಿರ್ಮಿಸಿದೆ.

ವಸ್ತು ಪ್ರದರ್ಶನದ ಆವರಣದಲ್ಲಿ 15 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ 1.50 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಲ್ಯಾಂಟನ್ ಪಾರ್ಕ್ ನಲ್ಲಿ 400 ವರ್ಷದಲ್ಲಿ ಮೈಸೂರು ನಗರ ಕಂಡಿರುವ ಅಭಿವೃದ್ಧಿ, ವಿಜಯನಗರ ಸಾಮ್ರಾಜ್ಯ, ಮೈಸೂರು ಅರಸರ ಆಳ್ವಿಕೆ, ದಸರಾ ನಡೆದು ಬಂದ ಹಾದಿ, ಚಾಮುಂಡಿಬೆಟ್ಟ, ಮಹಿಷಾಸುರ ಮರ್ಧನ, ಜಂಬೂಸವಾರಿ, ಪೂಜಾ ಕುಣಿತ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ಸಂಸ್ಕೃತಿಯನ್ನು ತ್ರಿಡಿ ಆಕೃತಿಗಳಿಂದ ಅನಾವರಣ ಗೊಳಿಸುತ್ತಿದೆ. ಹೌದು, ದಸರಾ ಮಹೋತ್ಸವದ ಮಹತ್ವವನ್ನು ಸಾರಲು 9 ಬಣ್ಣದ 9 ಅಶ್ವ ತ್ರಿಡಿ ಆಕೃತಿ ನಿಲ್ಲಿಸಲಾಗಿದೆ. ಮುಂದೆ ಓದಿ...

 ಆಕರ್ಷಣೆಯ ಕೇಂದ್ರಬಿಂದು

ಆಕರ್ಷಣೆಯ ಕೇಂದ್ರಬಿಂದು

ಮಹಿಷಾಸುರ ಮರ್ದಿನಿ ಅವತಾರದಲ್ಲಿ ಚಾಮುಂಡೇಶ್ವರಿಯ ತ್ರಿಡಿ ಆಕೃತಿ. ಅದರ ಸುತ್ತಲೂ 5 ಸಾವಿರ ಎಲ್‍ಇಡಿ ಲೈಟ್ ಗಳಿಂದ ರೋಜ್ ಗಾರ್ಡನ್ ನಿರ್ಮಿಸಲಾಗಿದ್ದು, ನೋಡುಗರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಜತೆಗೆ ಲ್ಯಾಂಟನ್ ಪಾರ್ಕ್ ಸುತ್ತಲೂ ಬಣ್ಣ-ಬಣ್ಣದ ಎಲ್‍ಇಡಿ ಲೈಟ್ ಗಳನ್ನು ಅಳವಡಿಸಿರುವುದರಿಂದ ನೋಡುಗರಿಗೆ ಮುದ ನೀಡಲಿದೆ.

 ಪಾರ್ಕ್ ಗೆ ಪ್ರವೇಶ ಉಚಿತ

ಪಾರ್ಕ್ ಗೆ ಪ್ರವೇಶ ಉಚಿತ

ಚೀನಾ ಹಾಗೂ ದುಬೈ ಸೇರಿದಂತೆ ವಿಶ್ವದ ಇನ್ನಿತರೆ ದೇಶಗಳಲ್ಲಿ ಲ್ಯಾಂಟರ್ನ್ ಪಾರ್ಕ್ ಜನಮನ್ನಣೆ ಗಳಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರು ವೀಕ್ಷಿಸುತ್ತಿದ್ದಾರೆ. ಅದೇ ರೀತಿ ಮೈಸೂರಿನ ಡ್ರೀಮ್ ಪೆಟಲ್ಸ್ ಸಂಸ್ಥೆಯು ಲ್ಯಾಂಟನ್ ಪಾರ್ಕ್ ಸಜ್ಜುಗೊಳಿಸಿದೆ. ಪ್ರವೇಶ ಉಚಿತವಾಗಿದ್ದು, ಲ್ಯಾಂಟನ್ ಪಾರ್ಕ್ ಅಂದವನ್ನು ಸವಿಯಬಹುದಾಗಿದೆ.

ಮೈಸೂರು ದಸರಾ ವೇಳೆ ಭಾರೀ ಸದ್ದು ಮಾಡಿದ ಅಪರೂಪದ ಚಿತ್ರವಿದು...

 ಸೆಲ್ಫಿ ಕ್ಲಿಕ್ಕಿಸಿಕೊಂಡ ಜನ

ಸೆಲ್ಫಿ ಕ್ಲಿಕ್ಕಿಸಿಕೊಂಡ ಜನ

ಉದ್ಘಾಟನೆಯಾದ ಕೆಲವೇ ನಿಮಿಷದಲ್ಲಿ ನೂರಾರು ಮಂದಿ ಸಾರ್ವಜನಿಕರು ಲ್ಯಾಂಟನ್ ಪಾರ್ಕ್ ಗೆ ದೌಡಾಯಿಸಿ ಅಂದವನ್ನು ಸವಿದರಲ್ಲದೆ, ಚಾಮುಂಡೇಶ್ವರಿಯ ತ್ರಿಡಿ ಆಕೃತಿ. ಅದರ ಸುತ್ತಲೂ ಎಲ್‍ಇಡಿ ಲೈಟ್ ಗಳಿಂದ ಅಲಂಕರಿಸಿದ್ದ ರೋಜ್ ಗಾರ್ಡನ್ ಬಳಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡರು.

ಚಿತ್ರಗಳು : ಪ್ರವಾಸಿಗರನ್ನು ಆಕರ್ಷಿಸುವ ಶಿಕಾರಿಪುರದ ಪಾರ್ಕ್

 ದೇಶದಲ್ಲೇ ಮೊದಲ ಪ್ರಯತ್ನ

ದೇಶದಲ್ಲೇ ಮೊದಲ ಪ್ರಯತ್ನ

ಇದೇ ಸಂದರ್ಭದಲ್ಲಿ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಲ್ಯಾಂಟನ್ ಪಾರ್ಕ್ ನಿರ್ಮಾಣ ದೇಶದಲ್ಲೇ ಮೊದಲ ಪ್ರಯತ್ನ. ಇದನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದಸರಾದಲ್ಲೇ ಉದ್ಘಾಟಿಸಬೇಕಿತ್ತು. ಆದರೆ, ಕಾಮಗಾರಿ ನಡೆಯುತ್ತಿದ್ದರಿಂದ ತಡವಾಯಿತು. ಶೇ.70ರಷ್ಟು ಕೆಲಸ ಮುಗಿದಿದ್ದು, ಇನ್ನು 30ರಷ್ಟು ಬಾಕಿ ಇದೆ.

ಮೈಸೂರಿನ ಜನತೆ ವೀಕ್ಷಣೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಇಂದು ಉದ್ಘಾಟಿಸಿದ್ದು, ವಸ್ತು ಪ್ರದರ್ಶನ ಮುಗಿಯುವವರೆಗೂ ಇರಲಿದೆ. ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ಆಕಾಶ ಅಂಬಾರಿಗೆ ಬೇಡಿಕೆ ಹೆಚ್ಚಿರುವ ಬಗ್ಗೆ ಪ್ರತಿಕ್ರಿಯಿಸಿ, ಈಗಾಗಲೇ ಮುಖ್ಯಮಂತ್ರಿಕುಮಾರಸ್ವಾಮಿ ಅವರು ಕೇಂದ್ರ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿ ಮಾಡಿ ವಿಷಯ ತಿಳಿಸಿದ್ದಾರೆ.ವಿಮಾನ ಹಾರಾಟಕ್ಕೆ, ವಿಮಾನ ನಿಲ್ದಾಣ ವಿಸ್ತರಣೆಗೆ ಭೂಮಿ ಒದಗಿಸುವಂತೆ ತಿಳಿಸಿದ್ದಾರೆ. ಈ ಕುರಿತು ಸಿಎಂ, ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ ಎಂದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lanton Park is built in Mysore for the first time in India. Park is built by the assistance of 20 Chinese experts.Here is a brief article about this
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more