• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕ್ಯಾತಮಾರನಹಳ್ಳಿ ಬಾರ್‌ ಮುಚ್ಚಲು ಒತ್ತಾಯಿಸಿ ನೂರಾರು ನಿವಾಸಿಗಳ ಪ್ರತಿಭಟನೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 23: ನಗರದ ಕ್ಯಾತಮಾರನಹಳ್ಳಿ ಟೆಂಟ್ ಸರ್ಕಲ್ ಬಳಿ ಇರುವ ಬಾರ್ ಅಂಡ್ ರೆಸ್ಟೋರೆಂಟ್ ಅನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಇಂದು ಬೆಳಿಗ್ಗೆ ನೂರಾರು ನಿವಾಸಿಗಳು ಪ್ರತಿಭಟನೆ ನಡೆಸಿದರು.

   ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಬಾರಿ ಮಳೆ | Weather Forecast | KSNDMC | Oneindia Kannada

   ಕೇಂದ್ರ ಸರ್ಕಾರ ಲಾಕ್‌ಡೌನ್ ಮಾಡಿದ್ದ ಸಂದರ್ಭದಲ್ಲಿ ನಗರಪಾಲಿಕೆಯ 30, 31 ಮತ್ತು 32ನೇ ವಾರ್ಡಿನ ಜನತೆ ನೆಮ್ಮದಿಯಿಂದ ಇದ್ದರು. ಲಾಕ್‌ಡೌನ್ ಸಡಿಲಿಕೆಯಾದ ಮೇಲೆ ಬಾರ್ ಅಂಡ್‌ ರೆಸ್ಟೋರೆಂಟ್, ವೈನ್ ಸ್ಟೋರ್ ತೆರೆದು ವ್ಯಾಪಾರ ಶುರು ಮಾಡಿದ ನಂತರ ಸಾಕಷ್ಟು ಸಮಸ್ಯೆ ಉಂಟಾಗಿದೆ ಎಂದು ಆರೋಪಿಸಿದರು.

   ಮೈಸೂರು: ರಮ್ಮನಹಳ್ಳಿಯಲ್ಲಿ ಪ್ರತಿಭಟನೆ ನಡೆಸಿ ಬಾರ್‌ ಮುಚ್ಚಿಸಿದ ಗ್ರಾಮಸ್ಥರುಮೈಸೂರು: ರಮ್ಮನಹಳ್ಳಿಯಲ್ಲಿ ಪ್ರತಿಭಟನೆ ನಡೆಸಿ ಬಾರ್‌ ಮುಚ್ಚಿಸಿದ ಗ್ರಾಮಸ್ಥರು

   ಬಾರ್ ಮುಚ್ಚಿಸುವಂತೆ ರಾಜ್ಯ, ಕೇಂದ್ರ ಸರ್ಕಾರ, ಸಂಬಂಧಪಟ್ಟ ಇಲಾಖೆಗೆ ಹಲವು ಬಾರಿ ‌ಮನವಿ ಸಲ್ಲಿಸಿದ್ದರೂ ಯಾವುದೇ ಕಾನೂನು ಕ್ರಮಕೈಗೊಂಡಿಲ್ಲ ಎಂದು ದೂರಿದರು.

   ಮಾಜಿ ಉಪಮೇಯರ್ ಷಫೀ ಅಹಮದ್ ಮಾತನಾಡಿ, "ನಮ್ಮ ವ್ಯಾಪ್ತಿಯ ವಾರ್ಡಿನಲ್ಲಿ ಗಲಾಟೆ, ಕೋಮುಗಲಭೆಗೆ ಬಾರ್‌ಗಳೇ ಮೂಲ ಕಾರಣ. ಜನರು ಪರಸ್ಪರ ಅನ್ಯೋನ್ಯತೆಯಿಂದ ಇದ್ದರೂ ಬಾರ್‌ನಲ್ಲಿ ಕುಡಿದು ಗಲಾಟೆ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜನರ ನೆಮ್ಮದಿ ಹಾಳಾಗಿದೆ" ಎಂದರು. ಬಿಜೆಪಿ ಮುಖಂಡ ಗಿರಿಧರ್ ಕೂಡ ಬಾರ್‌ ಅನ್ನು ಕೂಡಲೇ ಮುಚ್ಚುವಂತೆ ಆಗ್ರಹಿಸಿದರು.

   English summary
   Hundreds of residents protested this morning demanding closing of a bar and restaurant near the city's Kyatamaranahalli Tent Circle,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X