ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಕ್ಕಳ ದಿನಾಚರಣೆ ವಿಶೇಷ: ಯೋಗ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ ಮೈಸೂರಿನ ಪೋರಿ

|
Google Oneindia Kannada News

ಮೈಸೂರು, ನವೆಂಬರ್ 14: ನಗರದ ಬಾಲಕಿಯೊಬ್ಬಳು ಯೋಗ ಪ್ರದರ್ಶನದಲ್ಲಿ ವಿಶ್ವ ದಾಖಲೆ ಬರೆದು, ಜಗತ್ತಿನ ಗಮನ ಸೆಳೆದಿದ್ದಾಳೆ. ನಗರದ ಆರ್‌ಬಿಐ ನೋಟು ಮುದ್ರಣ ಘಟಕದ ಅಧಿಕಾರಿ ಹೇಮಚಂದ್ರ ಹಾಗೂ ಕುಮುದಾ ದಂಪತಿಯ ಪುತ್ರಿ 13 ವರ್ಷದ ಖುಷಿ ಈ ಸಾಧನೆ ಮಾಡಿರುವ ಬಾಲಕಿ.

ಅತ್ಯಂತ ಕಿರಿಯ ವಯಸ್ಸಿನಲ್ಲೇ ಉತ್ತಮ ಯೋಗ ಕಲೆ ಮೈಗೂಡಿಸಿಕೊಂಡಿರುವ ಈ ಬಾಲಕಿ ಒಂದು ನಿಮಿಷದಲ್ಲಿ ನಿರಾಲಂಭ ಪೂರ್ಣ ಚಕ್ರಾಸನ ಯೋಗಾಸನವನ್ನು 15 ಬಾರಿ ಪ್ರದರ್ಶಿಸುವುದರೊಂದಿಗೆ ವಿಶ್ವದಾಖಲೆ ನಿರ್ಮಿಸಿದ್ದಾಳೆ.

ನಗರದ ಮೇಟಗಳ್ಳಿಯ ಆರ್‌ಬಿಐ ನಗರದ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖುಷಿ ಈ ಸಾಧನೆ ಮಾಡಿದ್ದು, ಕಾರ್ಯಕ್ರಮದಲ್ಲಿ ಹಾಜರಿದ್ದ ಗೋಲ್ಡನ್‌ ಬುಕ್‌ ಆಫ್ ವರ್ಲ್ಡ್ ರೆಕಾರ್ಡ್‌ ಪ್ರತಿನಿಧಿ ಸಂತೋಷ್‌ ಅಗರ್ ವಾಲ್‌, ಖುಷಿಗೆ ಲಿಮ್ಕಾ ಪ್ರಶಸ್ತಿ ಪತ್ರ ವಿತರಿಸಿದರು.

ಸಿಂಗಪುರದಲ್ಲಿ ಚಿನ್ನ ಗೆದ್ದು ಯೋಗ ಚಾಂಪಿಯನ್ ಆದ ಮೈಸೂರಿನ ಖುಷಿಸಿಂಗಪುರದಲ್ಲಿ ಚಿನ್ನ ಗೆದ್ದು ಯೋಗ ಚಾಂಪಿಯನ್ ಆದ ಮೈಸೂರಿನ ಖುಷಿ

ಯೋಗ ನಗರಿ ಎಂಬ ಹೆಸರಿನ ಮೈಸೂರಿನಲ್ಲಿ ಯೋಗ ಸಾಧಕರಿಗೇನು ಕೊರತೆ ಇಲ್ಲ. ವಿಶ್ವಮಟ್ಟದ ಸಾಧಕರ ಪಟ್ಟಿಯಲ್ಲಿ ನಗರದ ಹೆಸರು ಅಜರಾಮರ. ಕೃಷ್ಣಮಾಚಾರ್ಯ ಎಂಬುವವರ ಹೆಸರಿನಿಂದ ಮೈಸೂರಿಗೆ ಬಂದ ಯೋಗದ ನಾಮಫಲಕ ಮುಂದಿನ ದಿನಕ್ಕೆ ಪಟ್ಟಾಭಿ ಜೋಯಿಸ್, ಬಿಕೆಎಸ್ ಅಯ್ಯಂಗಾರ್ ಹೆಸರು ಮುಂದುವರೆಯಿತು.

ಈಗ ಇದೇ ಸಾಲಿನಲ್ಲಿ ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡುತ್ತಿರುವ ಬಾಲ ಪ್ರತಿಭೆ ಮೈಸೂರಿನ 15 ವರ್ಷದ ಪೋರಿ ಖುಷಿ.

 ಕಳೆದ 5 ವರ್ಷಗಳಿಂದ ಯೋಗಾಭ್ಯಾಸ

ಕಳೆದ 5 ವರ್ಷಗಳಿಂದ ಯೋಗಾಭ್ಯಾಸ

ನಗರದ ಸೇಂಟ್‌ ಜೋಸೆಫ್‌ ಸೆಂಟ್ರಲ್‌ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿರುವ ಖುಷಿ ಈಗಾಗಲೇ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪದಕ ಜಯಿಸಿದ್ದಾಳೆ.

ಕಳೆದ ವರ್ಷವಷ್ಟೇ ಪೂರ್ಣ ಚಕ್ರಾಸನ ಹೋಲುವ ಕಲಾತ್ಮಕ ಯೋಗಾಸನದ ಒಂದು ಭಂಗಿಯನ್ನು ಒಂದು ನಿಮಿಷದಲ್ಲಿ 15 ಬಾರಿ ಪೂರ್ಣಗೊಳಿಸುವ ಮೂಲಕ 'ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್' ಪುಸ್ತಕದಲ್ಲಿ ದಾಖಲೆ ಬರೆದಿದ್ದಾಳೆ.

ಆರ್​ಬಿಐ ಮೈಸೂರು ಶಾಖೆ ಅಧಿಕಾರಿ ಹೇಮಚಂದ್ರ, ಕುಮುದಾ ದಂಪತಿ ಪುತ್ರಿಯಾಗಿರುವ ಖುಷಿ ವಿಜಯನಗರದಲ್ಲಿರುವ ವಿವೇಕಾನಂದ ಯೋಗ ಸಂಸ್ಥೆಯ ಗಣೇಶ್ ಬಳಿ ಕಳೆದ 5 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದಾಳೆ.

 ಅಚ್ಚರಿ ಮೂಡಿಸುವ ಆಸನ

ಅಚ್ಚರಿ ಮೂಡಿಸುವ ಆಸನ

"ನಿತ್ಯ ಸಂಜೆ 5ರಿಂದ ರಾತ್ರಿ 8ರವರೆಗೆ ನಿರಂತರವಾಗಿ ಅಭ್ಯಾಸ ನಡೆಸುತ್ತಿದ್ದಾಳೆ. ತಮ್ಮ ಮಗಳು ಮುಂದೊಂದು ದಿನ ಕೃಷ್ಣಮಾಚಾರ್ಯ, ಯೋಗಗುರು ಬಾಬಾ ರಾಮ್ ದೇವ್ ರೀತಿ ಯೋಗ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಲಿದ್ದಾಳೆ" ಎಂದು ತಮ್ಮ ಖುಷಿ ಹಂಚಿಕೊಳ್ಳುತ್ತಾರೆ ಖುಷಿ ಪೋಷಕರು.

ತನ್ನ ಕೈಗಳನ್ನು ಮುಂಭಾಗಕ್ಕೆ ಕಟ್ಟಿಕೊಂಡು, ಚಕ್ರಾಸನ ಮಾದರಿಯಲ್ಲಿ ಕಾಲಿನ ಮೇಲೆ ನಿಯಂತ್ರಣ ಸಾಧಿಸಿಕೊಂಡು ಹಿಂಭಾಗಕ್ಕೆ ಬಾಗಿ ನೆಲಕ್ಕೆ ಮೊದಲು ತಲೆಯನ್ನು ಮುಟ್ಟಿಸುವುದು. ಹಾಗೆಯೇ ಜಾರಿಕೊಂಡು ನೇರವಾಗಿ ಮಲಗುವುದು, ಬಳಿಕ ಕಾಲಿನ ಸಹಾಯದಿಂದಲೇ ಮೇಲಕ್ಕೇಳುವ ಈ ಕಲಾತ್ಮಕ ಆಸನವನ್ನು ನೋಡ ನೋಡುತ್ತಿದ್ದಂತೆ 15 ಬಾರಿ ಮಾಡಿ ವಿಶ್ವ ದಾಖಲೆ ಸಾಧನೆ ಮಾಡಿದ್ದನ್ನು ಮರೆಯುವಂತಿಲ್ಲ.

ಖುಷಿ ಪ್ರದರ್ಶನದ ನಂತರ ಅದೇ ರೀತಿ ಕಾಲಿನ ಸಹಾಯದಿಂದಲೇ ಮೇಲಕ್ಕೇಳುವ ಈ ಆಸನ ಅತ್ಯಂಕ ಕ್ಲಿಷ್ಟಕರವಾಗಿದೆ. ಆದರೆ ಖುಷಿ ಈ ಆಸನವನ್ನು ಅತಿ ಸುಲಭವಾಗಿ ಪ್ರದರ್ಶಿಸುವ ಪರಿ ಅಚ್ಚರಿ ಮೂಡಿಸುತ್ತದೆ.

ವಿಶ್ವ ಮಕ್ಕಳ ದಿನದಂದು ಪಾಲಕರಿಗೆ ಒಂದು ಕಿವಿಮಾತು...ವಿಶ್ವ ಮಕ್ಕಳ ದಿನದಂದು ಪಾಲಕರಿಗೆ ಒಂದು ಕಿವಿಮಾತು...

 2 ಚಿನ್ನ ಮತ್ತು 2 ಬೆಳ್ಳಿ ಪದಕ

2 ಚಿನ್ನ ಮತ್ತು 2 ಬೆಳ್ಳಿ ಪದಕ

ಕಳೆದ ವರ್ಷ ಸಿಂಗಾಪುರದಲ್ಲಿ ಮುಕ್ತಾಯಗೊಂಡ 7ನೇ ಏಷಿಯಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ನಾಲ್ಕು ಚಿನ್ನ ಮತ್ತು 1 ಬೆಳ್ಳಿ ಪದಕ ಗೆಲ್ಲುವ ಮೂಲಕ ಯೋಗನಗರಿ ಕೀರ್ತಿ ಹೆಚ್ಚಿಸಿದ್ದಾಳೆ ಖುಷಿ.

ಸ್ಪರ್ಧೆಯಲ್ಲಿ ಅಥ್ಲೆಟಿಕ್ ಯೋಗಾಸನ, ಆರ್ಟಿಸ್ಟಿಕ್ ಯೋಗ, ರಿಧಮಿಕ್ ಯೋಗ ಹಾಗೂ ಫ್ರೀ ಪ್ಲೊ ಯೋಗದಲ್ಲಿ ಚಿನ್ನದ ಪದಕಗಳನ್ನು ಮತ್ತು ಆರ್ಟಿಸ್ಟಿಕ್ ಯೋಗ ಸೊಲೊ ಸ್ಪರ್ಧೆಯಲ್ಲಿ ಬೆಳ್ಳಿ ಪದಕಗಳನ್ನು ಗೆದ್ದು ಗಮನಸೆಳೆದಿದ್ದಾಳೆ ಖುಷಿ.

2016ರಲ್ಲಿ ವಿಯೆಟ್ನಾಂನಲ್ಲಿ ನಡೆದ 6ನೇ ಏಷಿಯಾ ಮಟ್ಟದ ಯೋಗ ಸ್ಪರ್ಧೆಯಲ್ಲೂ 2 ಚಿನ್ನ ಮತ್ತು 2 ಬೆಳ್ಳಿ ಪದಕ ಗಳಿಸಿದ್ದಾಳೆ. 2014ರಲ್ಲಿ ಚೀನಾದಲ್ಲಿ ನಡೆದ ವಿಶ್ವ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ಕಂಚು ಗೆಲ್ಲುವ ಮೂಲಕ ಪದಕ ಬೇಟೆ ಆರಂಭಿಸಿದ ಖುಷಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ 6 ಚಿನ್ನ, 3 ಬೆಳ್ಳಿ, 1 ಕಂಚಿನ ಪದಕ ಗಳಿಸಿದ್ದಾಳೆ. ಇನ್ನು ರಾಷ್ಟ್ರೀಯಮಟ್ಟದ ಯೋಗ ಸ್ಪರ್ಧೆಯಲ್ಲೂ 60ಕ್ಕೂ ಹೆಚ್ಚಿನ ಪದಕ ಗಳಿಸಿದ್ದು, ಇದರಲ್ಲಿ 25 ಚಿನ್ನದ ಪದಕಗಳಿವೆ.

ಮಕ್ಕಳೇ ಮನೆಯ ಮಾಣಿಕ್ಯ, ಮಕ್ಕಳೇ ದೇಶದ ಸಂಪತ್ತುಮಕ್ಕಳೇ ಮನೆಯ ಮಾಣಿಕ್ಯ, ಮಕ್ಕಳೇ ದೇಶದ ಸಂಪತ್ತು

 ಸಂಘ- ಸಂಸ್ಥೆಗಳಿಂದ ಗೌರವ

ಸಂಘ- ಸಂಸ್ಥೆಗಳಿಂದ ಗೌರವ

ಖುಷಿಯ ಸಾಧನೆ ಮೆಚ್ಚಿದ ಅನೇಕ ಸಂಘ- ಸಂಸ್ಥೆಗಳು ಈಕೆಗೆ 'ಕರ್ನಾಟಕ ಕಲಾಶ್ರೀ', 'ಅಸಾಧಾರಣ ಪ್ರತಿಭೆ', 'ಜಿಲ್ಲಾ ಯೂತ್ ಪ್ರಶಸ್ತಿ', 'ಯೋಗ ಪ್ರವೀಣೆ', 'ಯೋಗ ಕೇಸರಿ', 'ಮೈಸೂರು ರತ್ನ' ಸೇರಿ ಹತ್ತಾರು ಪ್ರಶಸ್ತಿ ನೀಡಿ ಗೌರವಿಸಿದೆ.

ಅಲ್ಲದೇ ಕಳೆದ ವರ್ಷ ನಡೆದ ಯೋಗ ದಸರಾ ಕಾರ್ಯಕ್ರಮದ ಬ್ರಾಂಡ್ ಅಂಬಾಸಿಡರ್ ಹಾಗೆಯೇ ವಿಶ್ವಮಟ್ಟದ ಯೋಗ ದಾಖಲೆಯ ಮುಖ್ಯ ರೂವಾರಿ ಈ ಬಾಲಕಿ ಎಂಬುದು ಅಚ್ಚರಿಯ ಸಂಗತಿ. "ಮುಂದೊಂದು ದಿನ ನಾನು ಯೋಗ ಕ್ಷೇತ್ರದಲ್ಲಿ ದೊಡ್ಡಮಟ್ಟದ ಸಂಶೋಧನೆ ನಡೆಸಬೇಕು. ಯೋಗಾಸನ ಶಿಕ್ಷಕಿಯಾಗಿ ಲಕ್ಷಾಂತರ ಮಂದಿಗೆ ಯೋಗ ಹೇಳಿಕೊಡಬೇಕು. ವಿಶ್ವಮಟ್ಟದಲ್ಲಿ ನಮ್ಮ ರಾಜ್ಯದ ಹೆಸರು ಮಿಂಚಬೇಕು" ಎಂಬುದು ನನ್ನ ಆಶಯ ಎನ್ನುತ್ತಾರೆ ಯೋಗಪಟು ಎಚ್. ಖುಷಿ. ಈ ಬಾಲಕಿಯ ಸಾಧನೆಗೆ ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್.

ಈ ಮಕ್ಕಳಿಗೆ ತಮ್ಮ ದಿನಾಚರಣೆಯ ಅರಿವೇ ಇಲ್ಲಈ ಮಕ್ಕಳಿಗೆ ತಮ್ಮ ದಿನಾಚರಣೆಯ ಅರಿವೇ ಇಲ್ಲ

English summary
Mysore's Kushi has performed well in yoga. She got many awards and medals in world level yoga performance.Read this article for more about khushi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X