ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ರಸ್ತೆಗಿಳಿದ 'ಅಂಬಾರಿ' ಡಬ್ಬಲ್ ಡೆಕ್ಕರ್ ಬಸ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 24: ಮೈಸೂರು ನಗರದ ಆಕರ್ಷಣೆ ಹೆಚ್ಚಿಸಲು 'ಅಂಬಾರಿ' ಬಸ್ ನಗರಕ್ಕೆ ಆಗಮಿಸಿದೆ. ಪ್ರವಾಸಿಗರು ಬಸ್‌ನಲ್ಲಿ ಕುಳಿತು ನಗರದ ಸೌಂದರ್ಯವನ್ನು ಸವಿಯಬಹುದಾಗಿದೆ. ಶೀಘ್ರವೇ ಬಸ್ ಸೇವೆಗೆ ಚಾಲನೆ ದೊರೆಯಲಿದೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಭಾನುವಾರ ಬೆಳಗ್ಗೆ ಮೈಸೂರು ನಗರದಲ್ಲಿ ಅಂಬಾರಿ ಡಬಲ್ ಡೆಕ್ಕರ್ ಬಸ್‌ನ ಪ್ರಾಯೋಗಿಕ ಸಂಚಾರವನ್ನು ನಡೆಸಿದೆ.

ಮೈಸೂರು ನಂಬರ್‌ ಒನ್ ಸ್ವಚ್ಛ ನಗರಿಯಾಗಲು ಸಹಕಾರ ಕೋರಿದ ಪಾಲಿಕೆ ಆಯುಕ್ತರುಮೈಸೂರು ನಂಬರ್‌ ಒನ್ ಸ್ವಚ್ಛ ನಗರಿಯಾಗಲು ಸಹಕಾರ ಕೋರಿದ ಪಾಲಿಕೆ ಆಯುಕ್ತರು

ಪ್ರಾಯೋಗಿಕ ಸಂಚಾರದ ಅಂಗವಾಗಿ ನಗರದ ಮೆಟ್ರೊಪೋಲ್ ಸರ್ಕಲ್, ಡಿಸಿ ಆಫೀಸ್, ಕ್ರಾಫಡ್ ಹಾಲ್ಮ ಕುಕ್ಕರಹಳ್ಳಿ ಕೆರೆ ರಸ್ತೆ ಹಾಗೂ ಕೃಷ್ಣರಾಜ ಬುಲೆವಾರ್ಡ್ ರಸ್ತೆ, ರಾಮಸ್ವಾಮಿ ಸರ್ಕಲ್ ಮೂಲಕ ಬಸ್ ಸಂಚಾರ ನಡೆಸಿತು.

ಕೆಮ್ಮಣ್ಣಗುಂಡಿ, ನಂದಿ ಗಿರಿಧಾಮ ಪ್ರವಾಸೋದ್ಯಮ ಇಲಾಖೆಗೆ ಕೆಮ್ಮಣ್ಣಗುಂಡಿ, ನಂದಿ ಗಿರಿಧಾಮ ಪ್ರವಾಸೋದ್ಯಮ ಇಲಾಖೆಗೆ

KSTDC Ambari Double Decker Bus Trail Run

ಮೈಸೂರಿನ ಅಂದ ಕಣ್ತುಂಬಿಕೊಳ್ಳಲು ಶೀಘ್ರದಲ್ಲೇ ಅಂಬಾರಿ ಬಸ್ ಸಂಚಾರ ಆರಂಭವಾಗಲಿದೆ. ನಗರಕ್ಕೆ ಪ್ರವಾಸಿಗರನ್ನ ಆಕರ್ಷಿಸಲು ಪ್ರವಾಸೋದ್ಯಮ ಇಲಾಖೆಯಿಂದ ಅಂಬಾರಿ ಬಸ್ ಸೇವೆಯನ್ನು ಪ್ರಾರಂಭಿಸಲಾಗುತ್ತಿದೆ.

ವಿಶ್ವ ಪ್ರವಾಸೋದ್ಯಮ ದಿನ: ಬದರಿನಾಥ ಯಾತ್ರೆ ದಿವ್ಯ ಅನುಭೂತಿ ವಿಶ್ವ ಪ್ರವಾಸೋದ್ಯಮ ದಿನ: ಬದರಿನಾಥ ಯಾತ್ರೆ ದಿವ್ಯ ಅನುಭೂತಿ

ಕೆಎಸ್‌ಟಿಡಿಸಿ ಕರ್ನಾಟಕದಲ್ಲಿ ಹಂಪಿ ಮತ್ತು ಮೈಸೂರಿನಲ್ಲಿ ಅಂಬಾರಿ ಡಬಲ್ ಡೆಕ್ಕರ್ ಬಸ್ ಸೇವೆಯನ್ನು ಪ್ರವಾಸಿಗರಿಗಾಗಿ ಆರಂಭಿಸುತ್ತಿದೆ. 2020ರಲ್ಲಿಯೇ ಈ ಸೇವೆ ಆರಂಭವಾಗಬೇಕಿತ್ತು. ಕೋವಿಡ್ ಕಾರಣದಿಂದಾಗಿ ತಡವಾಗಿ ಬಸ್ ಸಂಚಾರ ಆರಂಭವಾಗಲಿದೆ.

ಮೈಸೂರು ಮಹಾನಗರ ಪಾಲಿಕೆ ಮತ್ತು ಅರಣ್ಯ ಇಲಾಖೆಗೆ ಕೆಎಸ್‌ಟಿಡಿಸಿ ಬಸ್ ಸಂಚಾರಕ್ಕೆ ಅಗತ್ಯ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದೆ. ವಿಶೇಷವಾಗಿ ವಿನ್ಯಾಸಗೊಳಿಸಲಾದ 16 ಅಡಿ ಎತ್ತರದ ಬಸ್ ಸಂಚಾರದ ವೇಳೆ ವಿದ್ಯುತ್ ತಂತಿ, ಮರದ ಕೊಂಬೆಗಳು ಅಡ್ಡ ಬಾರದಂತೆ ಎಚ್ಚರ ವಹಿಸಲಾಗುತ್ತಿದೆ.

ಅಂಬಾರಿ ಬಸ್‌ನ ಟಾಪ್‌ನಲ್ಲಿ ಕುಳಿತು ಮೈಸೂರು ನಗರದ ಅಂದವನ್ನು ಸವಿಯಬಹುದಾಗಿದೆ. ಈ ಬಸ್‌ನಲ್ಲಿ ನಗರದ ಸೌಂದರ್ಯದ ಕುರಿತು ಕನ್ನಡ ಮತ್ತು ಇಂಗ್ಲಿಶ್‌ನಲ್ಲಿ ಆಡಿಯೋ ಮಾಹಿತಿ ಪ್ರಸಾರವಾಗಲಿದೆ. ಈ ಮೂಲಕ ವಿದೇಶಿ ಪ್ರವಾಸಿಗರು ಇದರಲ್ಲಿ ಪ್ರಯಾಣಿಸಿ ನಗರದ ಸೌಂದರ್ಯ ವೀಕ್ಷಿಸಬಹುದು.

English summary
Karnataka State Tourism Development Corporation Ambari double decker bus trail run in Mysuru. Specially built double decker bus for open roof bus tours is being launched in city soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X