ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೂ. 28ರಿಂದ ಮೈಸೂರಿನಲ್ಲಿ ಬಸ್‌ಗಳ ಓಡಾಟ ಆರಂಭ

|
Google Oneindia Kannada News

ಮೈಸೂರು, ಜೂನ್ 26: ಕೊರೊನಾ ಸೋಂಕಿನ ಹರಡುವಿಕೆ ತಡೆಯಲು ಮೈಸೂರು ಜಿಲ್ಲೆಯಲ್ಲಿ ಹೇರಿದ್ದ ನಿರ್ಬಂಧಗಳನ್ನು ರಾಜ್ಯ ಸರ್ಕಾರ ಸಡಿಲಿಸಿದ್ದು, ಸೋಮವಾರದಿಂದ ಮೈಸೂರಿನಲ್ಲಿ ಕೆಎಸ್ ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಈ ಕುರಿತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಕಟಣೆ ಹೊರಡಿಸಿದೆ. ಮೈಸೂರು ಜಿಲ್ಲೆಯಲ್ಲಿ ಸೋಮವಾರ ಜೂನ್ 28ರ ಬೆಳಿಗ್ಗೆ 6 ಗಂಟೆಯಿಂದ ಪ್ರಯಾಣಿಕರ ದಟ್ಟಣೆ ಹಾಗೂ ಅವಶ್ಯಕತೆಗಳಿಗೆ ತಕ್ಕಂತೆ ಬಸ್‌ಗಳನ್ನು ಸಂಚಾರಕ್ಕೆ ಬಿಡುವುದಾಗಿ ತಿಳಿಸಿದೆ.

ಕೋವಿಡ್ ಲಾಕ್‌ಡೌನ್ ನಿರ್ಬಂಧದಿಂದ ಮೈಸೂರಿಗೆ ಕೊಂಚ ರಿಲ್ಯಾಕ್ಸ್ಕೋವಿಡ್ ಲಾಕ್‌ಡೌನ್ ನಿರ್ಬಂಧದಿಂದ ಮೈಸೂರಿಗೆ ಕೊಂಚ ರಿಲ್ಯಾಕ್ಸ್

ಶೇಕಡಾ 50ರಷ್ಟು ಆಸನ ಸಾಮರ್ಥ್ಯದೊಂದಿಗೆ ನಗರ ಸಾರಿಗೆ/ ಸಾಮಾನ್ಯ ಸಾರಿಗೆ/ ದೂರ ಮಾರ್ಗದ ಸಾರಿಗೆ ಬಸ್‌ಗಳ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದೆ. ಬಸ್ಸುಗಳಲ್ಲಿ ಪ್ರಯಾಣಿಕರು ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.

KSRTC Buses Set To Return To Mysuru Roads From June 28

ಜೂನ್ 25ರಂದು ಮೈಸೂರು ಜಿಲ್ಲೆಯನ್ನು ಕೆಟಗರಿ 3ರಿಂದ ಕೆಟಗೆರಿ 2ಕ್ಕೆ ಮೇಲ್ಡರ್ಜೆಗೆ ಏರಿಸಿತ್ತು. ಮೈಸೂರಿನಲ್ಲಿ ಅನ್‌ಲಾಕ್ 1ರಂತೆ ಕೆಟಗಿರಿ 2ಕ್ಕೆ ಅನ್ವಯಿಸಿರುವ ನೀತಿ ನಿಯಮಗಳು ಜಾರಿಯಾಗಲಿವೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದ್ದರು.

Recommended Video

ರೋಹಿಣಿ ಹೇಳೋ ತೋಳ ಬಂತು ತೋಳ ಕಥೆ ಕೇಳೋಕೆ ನಾನು ಸಿದ್ಧವಾಗಿಲ್ಲ !! | Oneindia Kannada

"ಮೈಸೂರಿನಲ್ಲಿ ಶೇ.10ಕ್ಕಿಂತ ಜಾಸ್ತಿ ಇದ್ದ ಪಾಸಿಟಿವಿಟಿ ದರ ಶೇ.5- 10ರೊಳಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಜೂ.28ರಿಂದ ಕೈಗಾರಿಕೆ, ಉದ್ದಿಮೆಗಳಲ್ಲಿ ಶೇ.50ರಷ್ಟು ಕಾರ್ಮಿಕರು‌ ಕೆಲಸ ಮಾಡುವ ಅವಕಾಶ, ಗಾರ್ಮೆಂಟ್ಸ್‌ಗಳಿಗೆ ಶೇ.30ರಷ್ಟು ಅವಕಾಶ. ಅಗತ್ಯ ವಸ್ತುಗಳ ಮಾರಾಟಕ್ಕೆ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ತೆರೆಯಲು ಅವಕಾಶ, ಬೀದಿ ಬದಿ ವ್ಯಾಪಾರಿಗಳು, ಫಾಸ್ಟ್‌ಫುಡ್‌ಗೂ ಅವಕಾಶ ಕಲ್ಪಿಸಲಾಗಿದೆ. ಮದ್ಯದಂಗಡಿಗಳು ಮಧ್ಯಾಹ್ನ 2 ಗಂಟೆಯವರೆಗೆ ಹಾಗೂ ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳಿಗೆ ಅವಕಾಶ ನೀಡಲಾಗಿದೆ,'' ಎಂದು ಜಿಲ್ಲಾಧಿಕಾರಿ ತಿಳಿಸಿದ್ದರು.

English summary
KSRTC has decided to run buses in mysuru from june 28,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X