ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು : ಪ್ರವಾಸಿ ಸ್ಥಳಗಳ ಭೇಟಿಗೆ ಕೆಎಸ್ಆರ್‌ಟಿಸಿ ದರ್ಶಿನಿ ಪ್ಯಾಕೇಜ್

|
Google Oneindia Kannada News

ಮೈಸೂರು, ಮೇ 19 : ಮೈಸೂರಿಗೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಕೆಎಸ್ಆರ್‌ಟಿಸಿ 'ದರ್ಶಿನಿ ಪ್ಯಾಕೇಜ್' ಎಂಬ ಪ್ಯಾಕೇಜ್ ಘೋಷಣೆ ಮಾಡಿದೆ. ವಿವಿಧ ಪ್ರವಾಸಿ ಸ್ಥಳಗಳನ್ನು ಪ್ಯಾಕೇಜ್‌ನಡಿ ವೀಕ್ಷಣೆ ಮಾಡಬಹುದಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಮೈಸೂರು ನಗರ ಸಾರಿಗೆ ವಿಭಾಗದ ವತಿಯಿಂದ ಪ್ರವಾಸಿಗರ ಅನುಕೂಲಕ್ಕಾಗಿ 'ದರ್ಶಿನಿ ಪ್ಯಾಕೇಜ್' ಆರಂಭಿಸಲಾಗಿದೆ. ಮೇ 17 ರಂದು ಪ್ಯಾಕೇಜ್‌ಗೆ ಚಾಲನೆ ಸಿಕ್ಕಿದೆ.

2 ಮಾರ್ಗದಲ್ಲಿ ಸ್ಲೀಪರ್ ಬಸ್ ಸೇವೆ ಆರಂಭಿಸಿದ ಕೆಎಸ್ಆರ್‌ಟಿಸಿ2 ಮಾರ್ಗದಲ್ಲಿ ಸ್ಲೀಪರ್ ಬಸ್ ಸೇವೆ ಆರಂಭಿಸಿದ ಕೆಎಸ್ಆರ್‌ಟಿಸಿ

ಮೈಸೂರು ನಗಗರ ಸ್ಥಳೀಯ ಪ್ರೇಕ್ಷಣಿಯ ಸ್ಥಳಗಳ ವೀಕ್ಷಣೆಗಾಗಿ ಈ ಪ್ಯಾಕೇಜ್‌ ಆರಂಭಿಸಲಾಗಿದೆ. ಕರ್ನಾಟಕ ಸಾರಿಗೆ ಮತ್ತು ಹವಾನಿಯಂತ್ರಿತ (ವೋಲ್ವೋ) ಬಸ್‌ಗಳಲ್ಲಿ ಜನರು ಪ್ರಯಾಣ ಮಾಡುವ ಮೂಲಕ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಬಹುದು.

ಬಂದ್, ಮುಷ್ಕರ : ಕೆಎಸ್ಆರ್‌ಟಿಸಿ, ಬಿಎಂಟಿಸಿಯ ನಷ್ಟದ ಲೆಕ್ಕಬಂದ್, ಮುಷ್ಕರ : ಕೆಎಸ್ಆರ್‌ಟಿಸಿ, ಬಿಎಂಟಿಸಿಯ ನಷ್ಟದ ಲೆಕ್ಕ

KSRTC announces darshini package for Mysuru tourists

ಸಾಮಾನ್ಯ ಸಾರಿಗೆ ಬಸ್‌ನಲ್ಲಿ ತಲಾ ರೂ.200 ಹಾಗೂ ನಗರ ಸಾರಿಗೆ ವೋಲ್ವೊ ಬಸ್‌ನಲ್ಲಿ ರೂ. 300 ಪಾವತಿಸಿ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಬಹುದಾಗಿದೆ. ಇದೇ ಕೇಂದ್ರದಲ್ಲಿ ಮೈಸೂರಿನ ನಗರ ಪ್ಯಾಪ್ತಿಯಲ್ಲಿ ಪ್ರಯಾಣಿಸುವ ದೈನಂದಿನ ಪಾಸ್‍ಗಳ ವಿತರಣಾ ಕೇಂದ್ರವನ್ನು ಸಹ ಉದ್ಘಾಟಿಸಲಾಗುತ್ತದೆ.

ಕೆಂಪೇಗೌಡ ಬಸ್‌ ನಿಲ್ದಾಣದ ಇತಿಹಾಸದ ಬಗ್ಗೆ ಮಾಹಿತಿ ನೀಡಿ, ಬಹುಮಾನ ಗೆಲ್ಲಿಕೆಂಪೇಗೌಡ ಬಸ್‌ ನಿಲ್ದಾಣದ ಇತಿಹಾಸದ ಬಗ್ಗೆ ಮಾಹಿತಿ ನೀಡಿ, ಬಹುಮಾನ ಗೆಲ್ಲಿ

ಯಾವ-ಯಾವ ಪ್ರದೇಶಗಳು : ಈ ದರ್ಶಿನಿ ಪ್ಯಾಕೇಜ್‍ನಲ್ಲಿ ಚಾಮುಂಡಿಬೆಟ್ಟ, ಮರಳು ಕಲೆಗಳ ಸಂಗ್ರಹಾಲಯ, ಪ್ರಾಕೃತೀಕ ಮತ್ತು ಐತಿಹಾಸಿಕ ಸಂಗ್ರಹಾಲಯ, ಮೃಗಾಲಯ, ಮೈಸೂರು ಅರಮನೆ, ಮತ್ತು ಕೃಷ್ಣರಾಜ ಬೃಂದಾವನನ್ನು ವೀಕ್ಷಿಸಲು ಅವಕಾಶವಿದೆ.

English summary
The Karnataka State Road Transport Corporation (KSRTC) announced darshini package for tourists who will visit Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X