ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಎಸ್ಓಯು ವಿದ್ಯಾರ್ಥಿಗಳಿಂದ ಮತದಾನ ಬಹಿಷ್ಕಾರ ಚಿಂತನೆ

|
Google Oneindia Kannada News

ಮೈಸೂರು, ಮಾರ್ಚ್ 23 : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 2013-14 ಹಾಗೂ 2015-16ನೇ ಸಾಲಿನಲ್ಲಿ ನೋಂದಣಿ ಪಡೆದು ಪದವಿಗಳನ್ನು ಪಡೆದಿರುವ ವಿದ್ಯಾರ್ಥಿಗಳು ಲೋಕಸಭಾ ಚುನಾವಣೆಯಲ್ಲಿ ಮತ ಹಾಕದೇ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದಾರೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

2013-14 ಸಾಲಿನಿಂದ ಕೆಎಸ್‌ಒಯುಗೆ ವಿಶ್ವವಿದ್ಯಾಲಯದ ಅನುದಾನ ಆಯೋಗ (ಯುಜಿಸಿ)ವು ಮಾನ್ಯತೆಯನ್ನು ರದ್ದುಪಡಿಸಿತ್ತು. ವಿಶ್ವವಿದ್ಯಾಲಯದಲ್ಲಿನ ಭ್ರಷ್ಟಾಚಾರ, ನಿಯಮಗಳ ಉಲ್ಲಂಘನೆ ಕಾರಣಗಳನ್ನು ನೀಡಿ ಯುಜಿಸಿಯು ಕ್ರಮ ಕೈಗೊಂಡಿತ್ತು.

5 ವರ್ಷದ ಬಳಿಕ ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಸಮಾರಂಭ 5 ವರ್ಷದ ಬಳಿಕ ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಸಮಾರಂಭ

ವಿ.ವಿ.ಯ ಸತತ ಪ್ರಯತ್ನದಿಂದಾಗಿ 2018ನೇ ಸಾಲಿನಿಂದ 5 ವರ್ಷಗಳವರೆಗೆ ಮಾನ್ಯತೆ ಸಿಕ್ಕಿತು. ಆದರೆ, 2013-14, 2015-16 ಸಾಲಿನಲ್ಲಿ ದಾಖಲಾಗಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿರುವ ವಿದ್ಯಾರ್ಥಿಗಳಿಗೆ ಮಾನ್ಯತೆ ರದ್ದಾಗಿರುವ ಕಾರಣದಿಂದ ಅತಂತ್ರ ಪರಿಸ್ಥಿತಿ ಮುಂದುವರೆದಿದೆ.

KSOU students going to boycott Lok sabha election

ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸತತ ಮನವಿಗಳನ್ನು ಸಲ್ಲಿಸಿಯೂ ಪ್ರಯೋಜನವಾಗಿಲ್ಲ. 2018ರಿಂದ ವಿ.ವಿ.ಗೆ ಮಾನ್ಯತೆ ಸಿಕ್ಕ ಹಿನ್ನೆಲೆಯಲ್ಲಿ ವಿವಿಧ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಿದ್ದು, ಸ್ನಾತಕೋತ್ತರ ಕೋರ್ಸುಗಳಿಗೆ ವಿ.ವಿ.ಯಲ್ಲಿ ಪದವಿ ಪಡೆದಿರುವ ವಿದ್ಯಾರ್ಥಿಗಳಿಗೇ ಪ್ರವೇಶ ನಿರಾಕರಣೆ ಮಾಡಲಾಗಿದೆ.

ಕರ್ನಾಟಕದ ಯಾವ ಸಂಸದ ಎಷ್ಟು ವಿದ್ಯಾಭ್ಯಾಸ ಮಾಡಿದ್ದಾರೆ?

ಇದರಿಂದ ವಿದ್ಯಾರ್ಥಿಗಳಿಗೆ ತುಂಬಲಾರದ ಅನ್ಯಾಯವಾಗಿದೆ ಎಂದು ವಿದ್ಯಾರ್ಥಿಗಳು ದುಃಖ ತೋಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಕುಟುಂಬ ಸದಸ್ಯರು ಚುನಾವಣೆಯಲ್ಲಿ ಮತ ಹಾಕದೇ ಇರಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

English summary
Students from Karnataka State Open University Mysuru, 2013-14 and 2015-16 have secured degrees and have decided to boycott the Lok Sabha polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X