ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯ ಮುಕ್ತ ವಿವಿ ಪಾಠಗಳು ಇನ್ಮುಂದೆ ಯೂಟ್ಯೂಬ್ ನಲ್ಲಿ

|
Google Oneindia Kannada News

ಮೈಸೂರು, ಜುಲೈ 16: ದೂರಶಿಕ್ಷಣ ವಿದ್ಯಾರ್ಥಿಗಳಿಗೆ ತರಗತಿಗಳು ನಡೆಯುವುದು ಕೆಲವೇ ದಿನ. ಎಷ್ಟೋ ಸಂದರ್ಭ ಆ ತರಗತಿಗಳಿಗೂ ಹಾಜರಾಗಲು ಸಾಧ್ಯವಾಗುವುದಿಲ್ಲ. ಆದರೆ ತರಗತಿಗೆ ಬಾರದೆಯೇ ತಮ್ಮ ಪಠ್ಯಕ್ರಮದ ಮಾಹಿತಿಯನ್ನು ಇನ್ನುಮುಂದೆ ಪಡೆಯಬಹುದಾಗಿದೆ.

ಅರೆ, ಇದು ಹೇಗೆ ಅಂತೀರಾ...! ಹೌದು. ಪರೀಕ್ಷೆಯ ವಿಧಾನಗಳು, ತರಗತಿಗಳು ಸೇರಿದಂತೆ ಸಾಕಷ್ಟು ಮಾಹಿತಿಗಳನ್ನು ಇನ್ನು ಮುಂದೆ ಯೂಟ್ಯೂಬ್ ನಲ್ಲಿ ವಿಡಿಯೋ ನೋಡಿ ಅಭ್ಯಸಿಸಬಹುದು. ಈ ವಿಧಾನವನ್ನು ರಾಜ್ಯದಲ್ಲೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಪರಿಚಯಿಸಲು ಮುಂದಾಗಿದೆ.

 ಕರಾಮುವಿ 2019-20ನೇ ಶೈಕ್ಷಣಿಕ ಸಾಲಿನ ಪ್ರವೇಶಾತಿ ಆರಂಭ ಕರಾಮುವಿ 2019-20ನೇ ಶೈಕ್ಷಣಿಕ ಸಾಲಿನ ಪ್ರವೇಶಾತಿ ಆರಂಭ

ಪಾಠವನ್ನು ವಿವಿಯ ಯೂಟ್ಯೂಬ್ ಅಕೌಂಟ್ ನಲ್ಲಿ ಅಪ್ಲೋಡ್ ಮಾಡಿ, ಅದನ್ನು ಆಲಿಸಿ ಪರೀಕ್ಷಾ ಸಿದ್ಧತೆಯನ್ನು ಮಾಡಿಕೊಳ್ಳಲು ರಾಜ್ಯ ಮುಕ್ತ ವಿವಿ ಸೌಲಭ್ಯ ಕಲ್ಪಿಸಲು ತಯಾರಿ ನಡೆಸುತ್ತಿದೆ. ಈ ಕುರಿತಾಗಿ ಕೆಎಸ್ ಓಯು ಅಧಿಕಾರಿಗಳು ಮಾಹಿತಿ ನೀಡಿದ್ದು, ಇದು ರಾಜ್ಯದಲ್ಲಿಯೇ ಮೊದಲ ಪ್ರಯೋಗವಾಗಿ ಹೊರಹೊಮ್ಮಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

KSOU students get their lessons in Youtube in few days

ಇದೇ ತಿಂಗಳ ಕೊನೆ, ಅಂದರೆ ಜುಲೈ 31ರಂದು ನಡೆಯಲಿರುವ ವಿವಿಯ ವ್ಯವಸ್ಥಾಪನಾ ಮಂಡಳಿ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಲು ಚಿಂತನೆ ನಡೆಸಲಾಗಿದೆ. ಈ ಯೋಜನೆಯಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗುವ ಪ್ರಯೋಜನದ ಬಗ್ಗೆ ಸಭೆಯಲ್ಲಿ ಎಲ್ಲರಿಗೂ ಮನವರಿಕೆ ಮಾಡಿಕೊಡಲು ಸದಸ್ಯರು ಆಲೋಚಿಸಿದ್ದಾರೆ. ಸಭೆಯಲ್ಲಿ ಯೋಜನೆಗೆ ಒಪ್ಪಿಗೆ ಸೂಚಿಸಿದಲ್ಲಿ ಟೆಂಡರ್ ಕರೆದು ವಿವಿ ನಡೆಸುತ್ತಿರುವ ಬಿಬಿಎ, ಬಿಕಾಂ, ಬಿಬಿಎಂ, ಬಿಎ, ಎಂಎ, ಎಂಕಾಂ ಮತ್ತು ಎಲ್ಲಾ 31 ತಾಂತ್ರಿಕೇತರ ಕೋರ್ಸ್ ಪಠ್ಯಕ್ರಮದಲ್ಲಿ ವಿಡಿಯೋ ರೆಕಾರ್ಡ್ ಮಾಡಲಾಗುವುದು.

ಕೆಎಸ್ಓಯು: ನೂತನ ಕುಲಪತಿ ವಿದ್ಯಾಶಂಕರ್ ಅಧಿಕಾರ ಸ್ವೀಕಾರ ಕೆಎಸ್ಓಯು: ನೂತನ ಕುಲಪತಿ ವಿದ್ಯಾಶಂಕರ್ ಅಧಿಕಾರ ಸ್ವೀಕಾರ

ವಿಡಿಯೊಗಳನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡುವುದರಿಂದ ವಿದ್ಯಾರ್ಥಿಗಳು ಅದನ್ನು ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ಡೌನ್ಲೋಡ್ ಮಾಡಿಕೊಂಡರೆ ಸಾಕು. ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದವರಿಗೆ ಈ ಯೂಟ್ಯೂಬ್ ಬೋಧನಾ ಕ್ರಮ ಅನುಕೂಲವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಸಂಶೋಧನಾ ವಿದ್ಯಾರ್ಥಿಗಳಿಗೂ ವಿಡಿಯೋಗಳು ಹೆಚ್ಚು ಉಪಯುಕ್ತವಾಗಲಿದೆ. ದೇಶದ ಕೆಲವು ವಿವಿಗಳು ತಾಂತ್ರಿಕ ಕೋರ್ಸ್ ಗಳಲ್ಲಿ ಈ ವಿಧಾನವನ್ನು ಈಗಾಗಲೇ ಜಾರಿಗೆ ತಂದಿವೆ.

English summary
in few days, KSOU students get their lessons in Youtube in few days. KSOU committee advisory member’s team planning to implement this plan soon,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X